More

    ಪಿಡಿಜೆ ಶಾಲೆಯ ಬೆಸ್ಟ್ ಇನ್ಸ್ಟಿಟ್ಯೂಷನ್ ಪ್ರಶಸ್ತಿ

    ವಿಜಯಪುರ: ಎನ್‌ಸಿಸಿ ಶಾಲಾ ಹಂತದಲ್ಲೇ ಮಕ್ಕಳಲ್ಲಿ ಆತ್ಮಸ್ಥೈರ್ಯ, ದೇಶಭಕ್ತಿ, ಸಂಘಟನಾ ಚಾತುರ್ಯ, ನಾಯಕತ್ವ, ಸ್ನೇಹಪರತೆ, ಸಾಹಸಶೀಲತೆ, ಸಮರ್ಪಣಾ ಭಾವಗಳನ್ನು ಬೆಳೆಸುತ್ತದೆ ಎಂದು ಕರ್ನಾಟಕ ಮತ್ತು ಗೋವಾ ರಾಜ್ಯಗಳ ಎನ್‌ಸಿಸಿ ಡೈರೆಕ್ಟರೆಟ್ ಏರ್ ಕಮಾಂಡರ್ ಲಲಿತಕುಮಾರ ಜೈನ ಹೇಳಿದರು.
    ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಗರದ ಪಿಡಿಜೆ ಪಪೂ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದ ಎನ್‌ಸಿಸಿ ವಿಭಾಗಕ್ಕೆ 2019-20ನೇ ವರ್ಷದ ‘ಬೆಸ್ಟ್ ಇನ್ಸ್ಟಿಟ್ಯೂಷನ್ ಆ್ ದಿ ಗ್ರುಪ್’ ಎಂಬ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
    ವಿಂಗ್ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್.ಎಸ್. ಜಾಧವ, ವಿಜಯಪುರದ 36 ಕರ್ನಾಟಕ ಬಟಾಲಿಯನ್ ಅಡ್ಮಿನಿಸ್ಟ್ರೆಟಿವ್ ಆಫೀಸರ್ ಲೆಪ್ಟಿನಂಟ್ ಕರ್ನಲ್ ಎ.ಎಂ. ವೆಳಣಕರ, ಪಿಡಿಜೆ ಶಾಲೆಯ ಎನ್‌ಸಿಸಿ ಘಟಕದ ಸೆಕೆಂಡ್ ಆಫೀಸರ್ ಪಿ.ಜಿ. ವಾಳ್ವೇಕರ ಹಾಗೂ ಉಪಪ್ರಾಚಾರ್ಯ ಎಂ.ಎ. ಆಲೂರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts