More

    ಹೆಬ್ಬಳ್ಳಿಯಲ್ಲಿ ಬನಶಂಕರಿದೇವಿ ರಥೋತ್ಸವ

    ಉಪ್ಪಿನಬೆಟಗೇರಿ: ಬನದ ಹುಣ್ಣಿಮೆ ನಿಮಿತ್ತ ಧಾರವಾಡ ತಾಲೂಕಿನ ಹೆಬ್ಬಳ್ಳಿಯಲ್ಲಿ ಗುರುವಾರ ಬನಶಂಕರಿ ದೇವಿ ರಥೋತ್ಸವವು ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.

    ಬೆಳಗ್ಗೆ ಅರ್ಚಕರಿಂದ ಬನಶಂಕರಿ ದೇವಿಗೆ ಅಭಿಷೇಕ ಹಾಗೂ ದೇವತಾ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರು ಹೂ, ಹಣ್ಣು, ಕಾಯಿ, ನೈವೇಧ್ಯ ಅರ್ಪಿಸಿ ನಮಿಸಿದರು. ಸಂಜೆ 5ಕ್ಕೆ ದೇವಸ್ಥಾನದಿಂದ ಸಕಲ ವಾದ್ಯ-ವೈಭವಗಳೊಂದಿಗೆ ಆರಂಭವಾದ ರಥೋತ್ಸವಕ್ಕೆ ಹೆಬ್ಬಳ್ಳಿಯ ಬ್ರಹ್ಮಚೈತನ್ಯ ಮಠದ ದತ್ತಾವಧೂತ ಮಹಾರಾಜರು, ಜ್ಞಾನ ಯೋಗಾಶ್ರಮ ಯೋಗಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗಣ್ಯರು ಚಾಲನೆ ನೀಡಿದರು.

    ತೇರನ್ನು ರಾಮಲಿಂಗೇಶ್ವರ ಗುಡಿಯ ಪಾದುಕೆವರೆಗೆ ಎಳೆದು ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು. ಭಕ್ತರು ತೇರಿಗೆ ಲಿಂಬೆ, ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಕಮಿಟಿ ಸದಸ್ಯ ಮಹೇಶ ಆಯಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಮೊರಬ, ಶ್ರೀಶೈಲ ಮನ್ನೂರ, ಬಸವಣ್ಣೆಪ್ಪ ಅಸುಂಡಿ, ಮಂಜುನಾಥ ಭೀಮಕ್ಕನವರ, ಸುರೇಶ ಬನ್ನಿಗಿಡದ, ಗಣೇಶ ಹೂಲಿ ಅಪಾರ ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts