More

    ರೈತರ ಬದುಕನ್ನೇ ಅಲ್ಲೋಲಕಲ್ಲೋಲ ಮಾಡಿದ ಬಿರುಗಾಳಿ; ನೆಲಕಚ್ಚಿದ ತೆಂಗು, ಬಾಳೆ…

    | ಅಭಿಲಾಷ್ ತಿಟ್ಟಮಾರನಹಳ್ಳಿ

    ಚನ್ನಪಟ್ಟಣ: ಬಿಸಲಿನ ಜಳದಿಂದ ಬಳಲಿದ್ದ ಬೊಂಬೆನಾಡಿಗೆ ಭಾನುವಾರ ಸಂಜೆ ವರುಣ ತಂಪೆರೆದಿದ್ದಾನೆ. ಆದರೆ ಇದರೊಂದಿಗೆ ಒಂದಷ್ಟು ಅವಘಡಗಳೂ ಉಂಟಾಗಿದ್ದು, ಹಲವರು ರೈತರ ಬಾಳೆ, ತೆಂಗು, ಮಾವಿನ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ.

    ಭಾನುವಾರ ಸಂಜೆ ಮಳೆಯೊಂದಿಗೆ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಕೂಡ ಬೀಸಿದ್ದರಿಂದ ಮರಗಿಡಗಳೆಲ್ಲ ಸಾಲುಸಾಲಾಗಿ ಮುರಿದುಬಿದ್ದಿವೆ. ಲಾಕ್​ಡೌನ್​ನಿಂದಾಗಿ ಈಗಾಗಲೇ ಆರ್ಥಿಕವಾಗಿ ತುಂಬ ಕಷ್ಟದಲ್ಲಿರುವ ರೈತರ ಬದುಕನ್ನು ಬಿರುಗಾಳಿ ಇನ್ನಷ್ಟು ಸಂಕಷ್ಟಕ್ಕೆ ಒಡ್ಡಿದೆ. ಒಂದಷ್ಟು ಜನರ ಮನೆಯ ಮೇಲ್ಛಾವಣಿ ಹಾರಿಹೋಗಿದ್ದು, ಸೂರನ್ನೇ ಕಳೆದುಕೊಂಡಿದ್ದಾರೆ.

    ನೆಲಕಚ್ಚಿದ ಸಾವಿರಾರು ಬಾಳೆಗಿಡ 

    ಬಿರುಗಾಳಿ ಸಿಲುಕಿ ತಾಲೂಕಿನ ಗೋವಿಂದನಹಳ್ಳಿ, ಪುಟ್ಟಪ್ಪನದೊಡ್ಡಿ, ಕೂರಣಗೆರೆ, ಮುದಗೆರೆ, ಚಕ್ಕೆರೆ, ಸೀಬನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಲವು ರೈತರು ಬಾಳೆ ಬೆಳೆದಿದ್ದರು. ಅವೆಲ್ಲ ಈಗ ಕಟಾವು ಹಂತಕ್ಕೆ ಬಂದಿದ್ದವು. ಆದರೆ ಭಾನುವಾರದ ಬಿರುಗಾಳಿ ಸಹಿತ ಮಳೆಗೆ ಹತ್ತಾರು ಎಕರೆಯಲ್ಲಿದ್ದ ಬಾಳೆಗಿಡಗಳು ನೆಲಕಚ್ಚಿವೆ. ಪುಟ್ಟಪ್ಪನದೊಡ್ಡಿ ಗ್ರಾಮದ ರೈತ ರಾಮಕೃಷ್ಣ ಎಂಬುವವರಿಗೆ ಸೇರಿದ 2500 ಸಾವಿರ ಬಾಳೆ ಹಾಗೂ 25ಕ್ಕೂ ಹೆಚ್ಚು ತೆಂಗಿನಮರಗಳು ಬಿರುಗಾಳಿಗೆ ಸಿಲುಕಿ ಪೂರ್ಣಪ್ರಮಾಣದಲ್ಲಿ ಹಾಳಾಗಿದೆ. ಕೈಗೆ ಬಂದ ಬೆಳೆ ಬಿರುಗಾಳಿಗೆ ಸಿಲುಕಿ ಹಾನಿಯಾಗಿದ್ದರಿಂದ ರೈತರಿಗೆ ಅಪಾರ ನಷ್ಟವಾಗಿದೆ.

    ಧರೆಗುರುಳಿದ ತೆಂಗು

    ರೈತರ ಬದುಕನ್ನೇ ಅಲ್ಲೋಲಕಲ್ಲೋಲ ಮಾಡಿದ ಬಿರುಗಾಳಿ; ನೆಲಕಚ್ಚಿದ ತೆಂಗು, ಬಾಳೆ...ಬಿರುಗಾಳಿಗೆ ಕೇವಲ ಬಾಳೆಯಷ್ಟೆ ಅಲ್ಲದೆ, ಸಾವಿರಾರು ತೆಂಗಿನಮರಗಳು ಧರೆಗುರುಳಿವೆ. ಕೋಲೂರು, ಸೀಬನಹಳ್ಳಿ, ಮುದಗೆರೆ ಭಾಗದಲ್ಲಿ ಫಲ ನೀಡುತ್ತಿದ್ದ ನೂರಾರು ತೆಂಗಿನ ಮರಗಳು ಮುರಿದು ಬಿದ್ದಿದೆ. ಇದರೊಂದಿಗೆ ಮಾವಿನ ಮರಗಳು ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ. ತಾಲೂಕಿನ ಸಂಕಲಗೆರೆ ಗ್ರಾಮದ ರೈತ ಪುಟ್ಟಪ್ಪ ತನ್ನ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ, ಕಟಾವಿಗೆ ಬಂದಿದ್ದ ಹುರುಳಿಕಾಯಿ ಸಂಪೂರ್ಣ ನೆಲಕಚ್ಚಿದೆ.

    ಮನೆಹಾನಿ

    ಬಿರುಗಾಳಿಯಿಂದಾಗಿ ಕೇವಲ ಬೆಳೆಹಾನಿ ಅಷ್ಟೇ ಅಲ್ಲದೆ, ತಾಲೂಕಿನ ಹಲವರು ಸೂರು ಕಳೆದುಕೊಂಡಿದ್ದಾರೆ.ರೈತರ ಬದುಕನ್ನೇ ಅಲ್ಲೋಲಕಲ್ಲೋಲ ಮಾಡಿದ ಬಿರುಗಾಳಿ; ನೆಲಕಚ್ಚಿದ ತೆಂಗು, ಬಾಳೆ... ತಾಲೂಕಿನ ಸೀಬನಹಳ್ಳಿ ಗ್ರಾಮದಲ್ಲಿ ಹತ್ತಾರು ಮನೆಗಳು ಹಾನಿಯಾಗಿವೆ. ಗ್ರಾಮದ ಕೃಷ್ಣ ಎಂಬುವರ ರೇಷ್ಮೆಸಾಕಾಣಿಕಾ ಮೇಲ್ಛಾವಣಿ ಹಾರಿಹೋಗಿದ್ದು, ನೂರಾರು ಕೆಜಿ ರೇಷ್ಮೆಗೂಡು ಮಳೆನೀರಿನ ಪಾಲಾಗಿದೆ.
    ನಗರದ ಎಲೇಕೇರಿಯ ರಾಮಮಂದಿರ ಬಡಾವಣೆಯಲ್ಲಿ ಗೌರಮ್ಮ ಎಂಬುವರ ಮನೆಯ ಮೇಲ್ಛಾವಣಿ ಬಿರುಗಾಳಿಗೆ ಹಾರಿಹೋಗಿದ್ದು, ಅವರೀಗ ಸೂರು ಕಳೆದುಕೊಂಡು ಕಷ್ಟಪಡುತ್ತಿದ್ದಾರೆ.
    ತಾಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದಿದೆ. ಭಾನುವಾರದ ಗಾಳಿಗೆ ಎಲ್ಲ ಸೇರಿ ಕೋಟ್ಯಂತರ ರೂಪಾಯಿ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

    ರೈತರ ಆಗ್ರಹ

    ಬಿರುಗಾಳಿಗೆ ಸಿಲುಕಿ ತಾಲೂಕಿನಲ್ಲಿ ಅಪಾರ ಬೆಳೆಹಾನಿಯಾಗಿದ್ದು, ಕಷ್ಟಪಟ್ಟು ಬೆಳೆದ ಬೆಳೆ ಹಾಳಾಗಿ, ರೈತರು ನಷ್ಟದಲ್ಲಿ ಸಿಲುಕಿದ್ದಾರೆ. ಕೂಡಲೇ ಸರ್ಕಾರ ಪರಿಹಾರ ಘೋಷಿಸಬೇಕು. ಬೆಳೆಹಾನಿ ಪ್ರದೇಶಗಳಿಗೆ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಅಶ್ವಥ್‍ನಾರಾಯಣ್ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲಾಡಳಿತ ಕೂಡಲೇ ನಮ್ಮ ನೆರವಿಗೆ ಧಾವಿಸಬೇಕು ಎಂದು ಬೆಳೆ ಕಳೆದುಕೊಂಡ ರೈತರು ಆಗ್ರಹಿಸಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಕೆಲಗ್ರಾಮಗಳಲ್ಲಿ ಮಳೆಯಿಂದಾಗಿ ಹಾನಿಯಾಗಿದೆ. ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಅಧಿಕಾರಿಗಳ ಜೊತೆಗೂಡಿ ಭೇಟಿನೀಡಿ ಪರಿಶೀಲನೆ ನಡೆಸಲಾಗಿದೆ. ಬೆಳೆ ನಷ್ಟದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು.
    |ಗುಣವಂತ್  ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ

    ಮಳೆಗಾಳಿಯಿಂದಾಗಿ ಬೆಳೆಹಾನಿಯಾಗಿರುವ ಸ್ಥಳಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಷ್ಟ್ರೀಯ ವಿಪತ್ತುಪರಿಹಾರ ನಿಯಮಾನುಸಾರ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಶಿಪ್ಫಾರಸ್ಸು ಮಾಡಲಾಗುವುದು.
    | ಬಿ.ಕೆ.ಸುದರ್ಶನ್  ತಹಸೀಲ್ದಾರ್

    ಲಕ್ಷಾಂತರ ರೂ. ಖರ್ಚುಮಾಡಿ ಬೆಳೆದಿದ್ದ ಬೆಳೆ ಇದೀಗ ಹಾನಿಯಾಗಿದೆ. ಬೆಳೆ ಹಾನಿಯಿಂದಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಅಧಿಕಾರಿಗಳು ಎಕರೆಗೆ 2 ಸಾವಿರ ಪರಿಹಾರ ನೀಡುತ್ತೇವೆ ಎನ್ನುತ್ತಿದ್ದಾರೆ. ಇದು ಏನೇನೂ ಸಾಲದು.., ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು, ಸಂಸದರು,ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಗೋಳು ಆಲಿಸ ಬೇಕು, ರೈತರಿಗೆ ಸೂಕ್ತಪರಿಹಾರ ಕಲ್ಪಿಸಬೇಕು.
    | ರಮೇಶ್ ಗೋವಿಂದಹಳ್ಳಿ ರೈತ

    ರೈತರ ಬದುಕನ್ನೇ ಅಲ್ಲೋಲಕಲ್ಲೋಲ ಮಾಡಿದ ಬಿರುಗಾಳಿ; ನೆಲಕಚ್ಚಿದ ತೆಂಗು, ಬಾಳೆ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts