More

    ತಬ್ಲಿಘಿ ಜಮಾತ್​ ನಿಷೇಧಿಸಿ, ಮರ್ಕಜ್​ನ ಬ್ಯಾಂಕ್​ ಖಾತೆ ಜಪ್ತಿ ಮಾಡಿ: ವಿಎಚ್​ಪಿ ಆಗ್ರಹ

    ನವದೆಹಲಿ: ದೇಶಾದ್ಯಂತ 1 ಸಾವಿರಕ್ಕೂ ಹೆಚ್ಚು ಜನರಲ್ಲಿ ಕರೊನಾ ವೈರಸ್​ ಸೋಂಕು ತಗುಲಿಸಿ, ಕೋವಿಡ್​ 19 ಕೇಂದ್ರ ಬಿಂದು ಎನಿಸಿರುವ ನಿಜಾಮುದ್ದೀನ್​ನ ಮರ್ಕಜ್​ನ ಬ್ಯಾಂಕ್​ ಖಾತೆಯನ್ನು ಜಪ್ತಿ ಮಾಡಬೇಕು. ಹಾಗೂ ತಬ್ಲಿಘಿ ಜಮಾತ್​ ಅನ್ನು ನಿಷೇಧಿಸಬೇಕು ಎಂದು ವಿಶ್ವ ಹಿಂದು ಪರಿಷತ್​ (ವಿಎಚ್​ಪಿ) ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

    ನಿಜಾಮುದ್ದೀನ್​ ಮರ್ಕಜ್​ನಲ್ಲಿ ಧರ್ಮಗುರುಗಳ ಬೋಧನೆ ಕೇಳಿಸಿಕೊಂಡ ತಬ್ಲಿಘಿ ಜಮಾತ್​ನ ಸದಸ್ಯರು ಕರೊನಾ ವೈರಸ್​ ಸೋಂಕು ತಗುಲಿರುವ ಸಂಗತಿಯನ್ನು ಮುಚ್ಚಿಡುವುದು, ಚಿಕಿತ್ಸೆಗೆ ಕರೆದೊಯ್ದರೆ ಅಸಹಕರಿಸುವುದು, ಪುಂಡಾಟ, ಅಸಭ್ಯ ವರ್ತನೆ ತೋರುವುದನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಒಂದರ್ಥದಲ್ಲಿ ಸೋಂಕಿನ ಭಯೋತ್ಪಾದನೆಗೆ ಮುಂದಾಗುತ್ತಿದ್ದಾರೆ. ವಿಶ್ವದಲ್ಲೆಡೆ ಹಿಂಸಾಕೃತ್ಯಗಳನ್ನು ಎಸಗುತ್ತಿರುವ ಉಗ್ರ ಸಂಘಟನೆಗಳ ಮುಖಂಡರು ಮತ್ತು ಸದಸ್ಯರು ತಬ್ಲಿಘಿ ಜಮಾತ್​ನೊಂದಿಗೆ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಇದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದೆ.

    ನಿಜಾಮುದ್ದೀನ್​ ಮರ್ಕಜ್​ನ ಕಟ್ಟಡ ಮತ್ತು ಬ್ಯಾಂಕ್​ ಖಾತೆಗಳನ್ನು ಜಪ್ತಿ ಮಾಡಬೇಕು. ಹಾಗೂ ಅದರ ಆರ್ಥಿಕ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ವಿಎಚ್​ಪಿ ಹೇಳಿದೆ.

    ದೇಶಾದ್ಯಂತ ಲಾಕ್​ಡೌನ್​ ಘೋಷಿಸಿದ 8 ದಿನಗಳವರೆಗೆ ದೇಶದಲ್ಲಿ ಕರೊನಾ ಸೋಂಕಿತರ ಪ್ರಮಾಣ ಶೇ.2.8 ಏರಿಕೆಯಾಗುತ್ತಿತ್ತು. ಆದರೆ, ಮಾರ್ಚ್​ 30ರಂದು ನಿಜಾಮುದ್ದೀನ್​ ಮರ್ಕಜ್​ನಲ್ಲಿ ಅನಿರೀಕ್ಷಿತವಾಗಿ ಸೋಂಕು ಸ್ಫೋಟಗೊಂಡಿತು ಎಂದು ವಿಎಚ್​ಪಿಯ ಕೇಂದ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್​ ಬೇಸರ ವ್ಯಕ್ತಪಡಿಸಿದ್ದಾರೆ.

    ತಬ್ಲಿಘಿ ಜಮಾತ್​ ಇಡೀ ದೇಶದ ಜನತೆಯ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಅದರ ಎಲ್ಲ ಕಚೇರಿಗಳು, ಬ್ಯಾಂಕ್​ ಖಾತೆಗಳು, ಆರ್ಥಿಕ ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

    ಇವರೆಷ್ಟು ಪ್ರಭಾವಿಗಳು…! ವಿಶೇಷ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಮಲೇಷ್ಯಾದ 8 ತಬ್ಲಿಘಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts