More

    ಕೊಲ್ಲಿ ರಾಷ್ಟ್ರ ವಿಮಾನ ನಿರ್ಬಂಧ ವಿಸ್ತರಣೆ: ಕೋವಿಡ್ ಕೇರಳಾತಂಕ ಕುವೈತ್, ದುಬೈ ಪ್ರಯಾಣ ಮೇಲೆ ಪ್ರಭಾವ

    ಮಂಗಳೂರು: ಭಾರತದಿಂದ ಆಗಮಿಸುವ ಪ್ರಯಾಣಿಕರ ವಿಮಾನಗಳಿಗೆ ಕೊಲ್ಲಿ ರಾಷ್ಟ್ರಗಳು ವಿಧಿಸಿರುವ ನಿರ್ಬಂಧ ಮತ್ತೆ ವಿಸ್ತರಣೆಯಾಗಿದೆ.
    ಅತ್ಯಧಿಕ ಕೋವಿಡ್ ಸೋಂಕು ಪ್ರಕರಣಗಳಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ (33.5 ಲಕ್ಷ) ಕೇರಳ ನಿವಾಸಿಗಳು ಕೊಲ್ಲಿ ರಾಷ್ಟ್ರಗಳಲ್ಲಿ ಒಟ್ಟು ದುಡಿಯುವ ಜನರಲ್ಲಿ ಸುಮಾರು ಶೇ.50 ಇದ್ದಾರೆ. ಈ ಅಂಶವನ್ನು ಭಾರತೀಯ ವಿಮಾನಗಳಿಗೆ ನಿರ್ಬಂಧ ಸಂದರ್ಭ ಪರಿಗಣಿಸಲಾಗಿದೆ.

    ಪ್ರಸಕ್ತ ದೇಶದ ಗರಿಷ್ಠ 62.9 ಲಕ್ಷ ಕೋವಿಡ್ ಪ್ರಕರಣಗಳು ಮಹಾರಾಷ್ಟ್ರದಲ್ಲಿದ್ದು, ಕರ್ನಾಟಕ ತೃತೀಯ (29 ಲಕ್ಷ) ಸ್ಥಾನದಲ್ಲಿದೆ.
    ಕುವೈತ್ ಸರ್ಕಾರ ಈ ಹಿಂದೆ ಜುಲೈ ಅಂತ್ಯ ತನಕ ನಿರ್ಬಂಧ ವಿಧಿಸಿದ್ದು, ಆಗಸ್ಟ್ ಆರಂಭದಿಂದ ಭಾರತ- ಕುವೈತ್ ನಡುವೆ ವಿಮಾನ ಆರಂಭಿಸಲು ಅಡ್ಡಿ ಎದುರಾಗುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕುವೈತ್ ನಿರ್ಬಂಧವನ್ನು ಆಗಸ್ಟ್ 10ರ ತನಕ ವಿಸ್ತರಿಸಿದೆ. ದುಬೈ ಸರ್ಕಾರ ಆ.7ರ ತನಕ ನಿರ್ಬಂಧ ವಿಸ್ತರಿಸಿದೆ.

    ವ್ಯಾಕ್ಸಿನ್ ಪಡೆದ ಭಾರತೀಯರು ನಿಗದಿಪಡಿಸಿದ ಮೂರನೇ ರಾಷ್ಟ್ರದಲ್ಲಿ 15 ದಿನ ವಾಸ್ತವ್ಯ ಹೂಡಿ ಅಲ್ಲಿ ಎರಡು ಬಾರಿ(ಆಗಮಿಸಿದ ತಕ್ಷಣ ಹಾಗೂ ಅಲ್ಲಿಂದ ಕುವೈತ್‌ಗೆ ಹೊರಡುವ ಮೊದಲು) ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ಕುವೈತ್‌ಗೆ ಪ್ರಯಾಣ ಬೆಳೆಸಬಹುದು ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು(ಡಿಜಿಸಿಎ) ತಿಳಿಸಿದ್ದಾರೆ.
    ಭಾರತದಿಂದ ಕುವೈತ್‌ಗೆ ಪ್ರಯಾಣಿಸಲು ಉದ್ದೇಶಿಸುವವರು ಕುವೈತ್ ಸರ್ಕಾರದಿಂದ ಸ್ಪಷ್ಟವಾದ ಆದೇಶ ಬರುವ ತನಕ ಸ್ವಲ್ಪ ದಿನ ಕಾಯುವುದು ಸೂಕ್ತ ಎಂದು ಅಲ್ಲಿನ ಭಾರತೀಯ ರಾಯಭಾರಿ ಸಿ.ಬಿ.ಜೋರ್ಜ್ ತಿಳಿಸಿದ್ದಾರೆ. ಭಾರತೀಯರು ರಾಯಭಾರಿ ಸಲಹೆ ಪರಿಗಣಿಸುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಕುವೈತ್‌ನ ಅನಿವಾಸಿ ಭಾರತೀಯರ ಸಂಘಟನೆ ಮುಖಂಡರು.

    ಕುವೈತ್‌ಗೆ ಪ್ರಯಾಣಿಸುವವರು ಕುವೈತ್ ಎಂಒಎಚ್(ಆರೋಗ್ಯ ಸಚಿವಾಲಯ) ವೆಬ್‌ಸೈಟ್‌ನಲ್ಲಿ ಅಲ್ಲಿನ ಸರ್ಕಾರ ಅಂಗೀಕರಿಸಿದ ಲಸಿಕೆ ಭಾರತದಲ್ಲಿ ಪಡೆದುಕೊಂಡಿರುವ ಬಗ್ಗೆ ಸರ್ಟಿಫಿಕೆಟ್ ಅಪ್‌ಲೋಡ್ ಮಾಡಬೇಕು. ಪ್ರಯಾಣಿಸುವವರ ಪಾಸ್‌ಪೋರ್ಟ್ ಸಂಖ್ಯೆ ಹಾಗೂ ಬ್ಯಾಚ್ ನಂಬರ್ ಮಾಹಿತಿಯನ್ನು ಸರ್ಟಿಫಿಕೆಟ್ ಒಳಗೊಂಡಿರಬೇಕು. ಕೆಲವರು ಪಾಸ್‌ಪೋರ್ಟ್ ನಂಬರ್ ಬದಲು ಆಧಾರ್ ನಂಬರ್ ದಾಖಲಿಸಿ ಪಡೆದ ಸರ್ಟಿಫಿಕೆಟ್ ಅಪ್‌ಲೋಡ್ ಮಾಡಿ ಸಮಸ್ಯೆ ಅನುಭವಿಸಿದ್ದಾರೆ.
    ಮಂಜೇಶ್ವರ ಮೋಹನ್‌ದಾಸ್ ಕಾಮತ್ ಇಂಜಿನಿಯರ್, ಕುವೈತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts