More

    ಬಳ್ಳಾರಿ ವಿಎಸ್‌ಕೆ ವಿವಿ, ವೀರಶೈವ ವಿದ್ಯಾವರ್ಧಕ ಸಂಘದ ನಡುವೆ ಒಡಂಬಡಿಕೆ

    ಬಳ್ಳಾರಿ: ಸಂಶೋಧನೆ, ಉದ್ಯೋಗಾವಕಾಶ, ಶೈಕ್ಷಣಿಕ ಮಟ್ಟ ಸುಧಾರಣೆ ಹಾಗೂ ಸಂಪನ್ಮೂಲಗಳ ಕ್ರೋಡೀಕರಣದ ಜತೆಗೆ ಸಹಭಾಗಿತ್ವದಲ್ಲಿ ಎರಡು ಶೈಕ್ಷಣಿಕ ವಿದ್ಯಾಲಯಗಳು ಮುನ್ನಡೆಯುವುದರಿಂದ ಹೈ-ಕ ಭಾಗದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರು ಹೇಳಿದರು.

    ವಿಎಸ್‌ಕೆವಿವಿ ಮತ್ತು ವೀರಶೈವ ವಿದ್ಯಾವರ್ಧಕ ಸಂಘದ ಆರ್‌ವೈಎಂಇಸಿ ತಾಂತ್ರಿಕ ವಿದ್ಯಾಲಯದ ನಡುವೆ ಏರ್ಪಟ್ಟಿರುವ ಒಡಂಬಡಿಕೆ ಪತ್ರವನ್ನು ಬುಧವಾರ ವಿಎಸ್‌ಕೆವಿವಿಯ ವಿದ್ಯಾವಿಷಯಕ ಪರಿಷತ್ ಸಭಾಂಗಣದಲ್ಲಿ ಪರಸ್ಪರ ವಿನಿಮಯ ಮಾಡಿಕೊಂಡ ನಂತರ ಮಾತನಾಡಿದರು. ವೀವಿ ಸಂಘದ ಅಧ್ಯಕ್ಷ ಜೆ.ಎಸ್.ಬಸವರಾಜ ಮಾತನಾಡಿ, ವಿದ್ಯಾರ್ಥಿ ಕಲ್ಯಾಣ ಮತ್ತು ಶೈಕ್ಷಣಿಕ ಪ್ರಗತಿಗೆ ಹೊಸಭಾಷ್ಯ ಬರೆದಿರುವ ಒಡಂಬಡಿಕೆ ನೂತನ ಇತಿಹಾಸವಾಗಲಿದೆ. ಟಾಟಾ ಸಂಸ್ಥೆ ಮತ್ತು ಆರ್‌ವೈಎಂಸಿ ಪಾಲುದಾರಿಕೆಯಲ್ಲಿ ರೊಬೊಟಿಕ್ಸ್, ನವ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ 20 ಕೋಟಿ ರೂ.ವೆಚ್ಚದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಘಟಕ ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದರು.

    ವಿವಿ ಸಿಂಡಿಕೇಟ್ ಸದಸ್ಯ ಡಾ.ಬಿ.ದೊಡ್ಡಬಸವನಗೌಡ ಮಾತನಾಡಿ, ಇಂಜಿನಿಯರಿಂಗ್ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಬಾಂಧ್ಯವ್ಯದ ಕನಸು ಈ ಮೂಲಕ ನನಸಾಗಿದೆ. ಕೌಶಲಾಭಿವೃದ್ಧಿ ಮತ್ತು ಉದ್ಯೋಗ ಅವಕಾಶಕ್ಕೆ ಈ ಒಡಬಂಡಿಕೆ ಒತ್ತು ನೀಡಲಿದೆ ಎಂದರು. ಕುಲಸಚಿವರಾದ ಪ್ರೊ.ಬಿ.ಕೆ.ತುಳಸಿಮಾಲಾ, ಪ್ರೊ.ರಮೇಶಕುಮಾರ, ಆರ್‌ವೈಎಂಇಸಿ ತಾಂತ್ರಿಕ ವಿದ್ಯಾಲಯದ ಪ್ರಾಚಾರ್ಯ ಡಾ.ಕಪ್ಪಗಲ್ ವೀರೇಶ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಹನುಮಂತ ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts