More

    2A ಮೀಸಲಾತಿ ಘೋಷಿಸದಿರುವುದಕ್ಕೆ ಆಕ್ರೋಶ; ಬಿಜೆಪಿಗೆ ಮತ ನೀಡದಿರಲು ಬಲಿಜ ಸಮುದಾಯ ನಿರ್ಧಾರ!

    ಬೆಂಗಳೂರು: ಪ್ರವರ್ಗ ‘2ಎ’ ಮೀಸಲಾತಿಗಾಗಿ ಸತತ 20 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಬಲಿಜ ಸಮುದಾಯಕ್ಕೆ ಮೀಸಲಾತಿ ಘೋಷಿಸದ ರಾಜ್ಯ ಸರ್ಕಾರದ ನಡೆ ವಿರುದ್ಧ ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

    ಕೊನೆಗೂ ಬಲಿಜ ಜನಾಂಗಕ್ಕೆ ಬಿಜೆಪಿ ಸರ್ಕಾರ ದ್ರೋಹ ಮಾಡಿದೆ. ಧ್ವನಿ ಇಲ್ಲದ ಜನಾಂಗಕ್ಕೆ ಮೋಸ ಮಾಡಿ ಪ್ರಬಲ ಜನಾಂಗಕ್ಕೆ ಮಣೆಹಾಕಿ ಬಹುಸಂಖ್ಯಾತ ಜನಾಂಗವನ್ನು ಓಲೈಸಿದೆ. ಹಿಂದೆ ಬಲಿಜ ಸಮುದಾಯಕ್ಕೆ ನೀಡಿದ್ದ ಪ್ರವರ್ಗ ‘2ಎ’ ಮೀಸಲಾತಿಯನ್ನುವಾಪಸ್ ನೀಡಬೇಕೆಂದು ರಾಜ್ಯಾದ್ಯಂತ ಕೈವಾರ ಸಂಸ್ಥಾನದ ಧರ್ಮಾಧಿಕಾರಿ ಎಂ.ಆರ್.ರಾಮಯ್ಯ, ಮಾಜಿ ಸಚಿವ ಎಂ.ಆರ್.ಜಯರಾಮ್ ಸೇರಿ ಸಮುದಾಯದ ಎಲ್ಲ ಜನರು ಒಗ್ಗಟ್ಟಾಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಮೀಸಲಾತಿ ಕಲ್ಪಿಸದೆ ನಮಗೆ ಅನ್ಯಾಯ ಮಾಡಲಾಗಿದೆ ಎಂದು ಬಲಿಜ ವೇದಿಕೆ ಬೇಸರ ವ್ಯಕ್ತಪಡಿಸಿದೆ.

    ಇದನ್ನೂ ಓದಿ: ಲಂಚ ಪಡೆದು ಬಂಧನಕ್ಕೆ ಹೆದರಿ ನಾಲ್ಕನೇ ಮಹಡಿಯಿಂದ ಹಾರಿದ ಅಧಿಕಾರಿ; ಪ್ರಾಣವೇ ಹೋಯ್ತು

    ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಚಿವರಾದ ಸುಧಾಕರ್ ಮತ್ತು ಶ್ರೀನಿವಾಸ ಕೋಟಾ ಪೂಜಾರಿ, ಬಲಿಜ ಮುಖಂಡರೊಡನೆ ಸಂಧಾನ ನಡೆಸಿ ವಾರದೊಳಗೆ ಪ್ರವರ್ಗ ‘2ಎ’ ಮೀಸಲಾತಿ ನೀಡುವುದಾಗಿ ವಾಗ್ದಾನ ನೀಡಿದ್ದರು. ಆದರೆ, ಸಚಿವ ಸಂಪುಟದಲ್ಲಿ ಸರ್ಕಾರ ಬಲಿಜ ಸಮಾಜಕ್ಕೆ ಮೀಸಲಾತಿ ಘೋಷಿಸಿಲ್ಲ. ಹಾಗಾಗಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ವಿರುದ್ಧ ಮತ ಚಲಾಯಿಸಲು ನಮ್ಮ ಜನಾಂಗಕ್ಕೆ ಕರೆ ನೀಡಲಾಗುವುದು. ಮುಖ್ಯವಾಗಿ ಸುಧಾಕರ್ ಮತ್ತು ಶ್ರೀನಿವಾಸ ಕೋಟಾ ಪೂಜಾರಿ ಕ್ಷೇತ್ರದಲ್ಲಿ ವಾಗ್ದಾನ ನೀಡಿರುವ ವಿಡಿಯೋ ಮತ್ತು ಧ್ವನಿಸುರಳಿ ಬಿಡುಗಡೆ ಮಾಡಿ ಬಿಜೆಪಿ ವಿರುದ್ಧ ಮತ ಚಲಿಸುವಂತೆ ಅಭಿಯಾನ ಕೈಗೊಳ್ಳುವುದಾಗಿ ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts