More

    ಸುಖ ಜೀವನಕ್ಕೆ ಶ್ರೀರಾಮನ ಮಂತ್ರವು ತಾರಕವಾಗಿದೆ; ವಾಸುದೇವಜಿ ಸ್ವಾಮೀಜಿ

    ರಾಣೆಬೆನ್ನೂರ: ಭವ ಬಂಧನವನ್ನು ಅತ್ಯಂತ ಸುಖವಾಗಿ ದಾಟಲು ಶ್ರೀರಾಮನ ಮಂತ್ರವು ತಾರಕವಾಗಿದೆ. ಮನುಕುಲದ ಉದ್ಧಾರ ಶ್ರೀರಾಮ ನಾಮ ಸ್ಮರಣೆಯಿಂದ ಮಾತ್ರ ಸಾಧ್ಯವಾಗುವುದು ಎಂದು ಸಂಚಾರಿ ಶ್ರೀ ರಾಮಾಂಜನೇಯ ಸ್ವಾಮಿ ಪೀಠಾಧಿಪತಿ ಶ್ರೀ ದತ್ತಾತ್ರೇಯ ವಾಸುದೇವಜಿ ಸ್ವಾಮೀಜಿ ಹೇಳಿದರು.
    ನಗರದ ಬಿಎಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಮಾತಾ ಗಾಯಿತ್ರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಚಾರಿ ರಾಮಾಣಜನೇಯ ಸ್ವಾಮೀಜಿಯವರ ಗುರುವಂದನಾ, ಕನಕದಾಸರ ಆರಾಧನೆ ಹಾಗೂ ಶ್ರೀರಾಮ ದೇವರ ಭಾವಚಿತ್ರ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
    ಶ್ರೀ ರಾಮನು ಮನುಕುಲದ ಎಲ್ಲರ ಉದ್ಧಾರಕ್ಕಾಗಿ ಮಾಣಿಕ್ಯನಾಗಿ ತನ್ನ ಆಶೀರ್ವಾದ ಮಾಡುತ್ತಿದ್ದಾನೆ. ರಾಮ ನಾಮ ನಿತ್ಯ ನಿರಂತರವಾಗಿ ಕ್ಷಣ ಕಾಲ ನಾಮ ಜಪ ಸ್ಮರಣೆ ಮಾಡಬೇಕು. ಇದರಿಂದ ಬಂದಿರುವ ಎಲ್ಲ ಕಷ್ಟಗಳು ವಾಯುವಿನಂತೆ ದೂರವಾಗಲಿದೆ. ಶ್ರೀ ರಾಮದೇವರ ಆಚಾರ್ಯ ರಾಮಾನುಜಾಚಾರ್ಯರ ಸಿದ್ಧಾಂತವನ್ನು ಪರಿಪಾಲಿಸುತಿದ್ದೇವೆ. ಭಾರತೀಯ ಪರಂಪರೆ ಸನಾತನದ ಧರ್ಮದ ಪರಂಪರೆ ರಾಮನಾನ ಜಪವನ್ನು ಉಚ್ಚಾರಣೆಯಿಂದ ಅಹಂಕಾರ ಹೊರಟು ಹೋಗುತ್ತದೆ ಎಂದರು.
    ವಿದ್ಯಾಲಯದ ಆವರಣದಲ್ಲಿ ಗಾಯತ್ರಿ ದೇವಿಯ ಪಂಚಲೋಹ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ಶ್ರೀ ರಾಮದೇವರ ಭಾವಚಿತ್ರ ಉದ್ಘಾಟನೆ ಸೇರಿ ವಿವಿಧ ಕಾರ್ಯಕ್ರಮ ಜರುಗಿದವು.
    ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ವಿದ್ಯಾಲಯದ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ, ಪ್ರಮುಖರಾದ ಸುರೇಶ ಬಣಕಾರ, ಕೆ.ಕೆ. ಹಾವಿನಾಳ, ಡಾ. ರವೀಂದ್ರಕುಮಾರ ಬಣಕಾರ, ಪ್ರಿಯಾಂಕ ಎಚ್.ಎಂ., ರಾಜೀವ ಕೆ.ಎಂ., ಮೃತ್ಯುಂಜಯ ಎಂ.ಎಂ., ಮಹೇಶ ಕಂಬಳಿ, ಎಚ್.ಎಸ್. ಹುಚ್ಚಗೊಂಡರ, ಅಜ್ಜಪ್ಪ ಬಿಜ್ಜುರ, ಡಾ. ಕೆ.ಸಿ. ನಾಗರಜ್ಜಿ, ದೇವರಾಜ ಹಂಚಿನಮನಿ, ವೀರೇಶ ಚೌಡಣ್ಣನವರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts