More

    ದಸರಾ ಮಾದರಿ ಹೋಳಿ ಆಚರಿಸಿ

    ಬಾಗಲಕೋಟೆ: ಐತಿಹಾಸಿ ಬಾಗಲಕೋಟೆ ಹೋಳಿ ಹಬ್ಬ ಮೈಸೂರು ದಸರಾ ಮಾದರಿಯಲ್ಲಿ ಸರ್ಕಾರದಿಂದ ಆಚರಿಸಬೇಕು. ಈ ನಿಟ್ಟಿನಲ್ಲಿ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

    ನಗರದ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಧವ ಸೇವಾ ಕೇಂದ್ರ ಶನಿವಾರ ರಾತ್ರಿ ಆಯೋಜಿಸಿದ್ದ ಹೋಳಿ ಹಬ್ಬ-2021 ಹಲಗೆ ಮೇಳ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

    ರಂಗು ರಂಗಿನ ಹಬ್ಬವಾದ ಬಾಗಲಕೋಟೆಯ ಹೋಳಿ ಹಬ್ಬ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಮುಳಗಡೆ ಬಳಿಕ ನಗರದ ಮೂರು ಭಾಗವಾಗಿ ಹಂಚಿ ಹೋಗಿದ್ದರಿಂದ ಹಬ್ಬ ವೈಭವ ಕಡಿಮೆಯಾಗಿದೆ. ಭಾವೈಕ್ಯದ ಸಂದೇಶ ಸಾರುವ ಈ ಹಬ್ಬವನ್ನು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಆಚರಿಸಿ ಸಂಸ್ಕೃತಿ ಪುನರ್ ಸ್ಥಾಪಿಸಬೇಕು. ಜನಪದ, ಕಲೆ,ಸಾಹಿತ್ಯ, ಸಂಗೀತ ಸಂಸ್ಕೃತಿಗಳ ತವರೂರಾದ ಬಾಗಲಕೋಟೆ ಹೋಳಿಗೆ ಹೊರ ಮೆರೆಗು ನೀಡಬೇಕು ಎಂದು ತಿಳಿಸಿದರು.

    ಮೈಸೂರಿನ ದಸರಾಕ್ಕೆ ಸರ್ಕಾರ ಪ್ರೋತ್ಸಾಹಿಸುವ ರೀತಿಯಲ್ಲಿ ಬಾಗಲಕೋಟೆಯ ಹೋಳಿ ಹಬ್ಬವನ್ನು ಮುಂಬರುವ ದಿನಗಳಲ್ಲಿ ವಿಜೃಂಭಣೆಯಿಂದ ಆಚರಿಸುವಂತೆ ಮಾಡಬೇಕು. ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎಲ್ಲರು ಶಾಂತಿಯುತವಾಗಿ ಹೋಳಿ ಆಚರಿಸಬೇಕು ಎಂದು ಹೇಳಿದರು.

    ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಪಿ.ನಾಡಗೌಡ ಮಾತನಾಡಿ, ಬಾಗಲಕೋಟೆ ಹೋಳಿ ಭವ್ಯ ಇತಿಹಾಸಿವೆ. ಅಸ್ಪಶತೆ ವಿರುದ್ಧ ದಿವ್ಯ ಸಂದೇಶ ಸಾರಿದೆ. ಈ ಆಚರಣೆ, ಪರಂಪರೆ ಈಚೆಗಿನ ದಿನಗಳಲ್ಲಿ ಕ್ಷಿಣಿಸುತ್ತಿದೆ. ಕೆಲವು ವರ್ಷಗಳ ಹಿಂದೆ ನಡೆದ ಕಹಿ ಘಟನೆಗಳು ಮರೆತು ನಾವೆಲ್ಲ ಭವ್ಯವಾಗಿ ಹಬ್ಬ ಆಚರಿಸುವಂತಾಗಬೇಕು. ಸರ್ಕಾರ ಹೋಳಿ ಆಚರಣೆಗೆ ವಿಶೇಷ ಆದ್ಯತೆ ನೀಡುವುದರ ಜತೆಗೆ ಜನರ ಸಹಭಾಗಿತ್ವವು ಬಹಳ ಮುಖ್ಯವಾಗಿದೆ. ರಾಗ, ಧ್ವೇಷ ಮರೆತು ಪರಸ್ಪರ ಪ್ರೀತಿ ಹಂಚಿ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಜಿ.ನಂಜಯನಮಠ ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು. ಖ್ಯಾತ ವೈದ್ಯ ಡಾ ಸುಜಯ ಹೆರಂಜಲ್, ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ, ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ, ಮಾಧವ ಸೇವಾ ಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ, ನಗರಸಭೆಯ ಸದಸ್ಯ ಹಾಜಿಸಾಬ ದಂಡಿನ, ಮುಖಂಡರಾದ ಸಂಜೀವ ವಾಡಕರ, ಗಣಪತಸಾ ದಾನಿ, ನಾರಾಯಣ ದೇಸಾಯಿ, ರಕ್ಷಿತಾ ಈಟಿ, ಹೋಳಿ ಹಬ್ಬದ ಐದು ಓಣಿಯ ಬಾಬುದಾರರು ಉಪಸ್ಥಿತರಿದ್ದರು. ಲಂಕೇಶ ಚಿನಿವಾಲರ ಸ್ವಾಗತಿಸಿದರು. ಗೋಪಾಲ ಹಳಪೇಟ ವಂದಿಸಿದರು. ವಾದಿರಾಜ ಕಡಿವಾಲ ನಿರೂಪಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts