More

    ಮೂರನೇ ಅಲೆಗೆ ಎದುರಿಸಲು ಅಗತ್ಯ ಸಿದ್ಧತೆ

    ಬಾಗಲಕೋಟೆ: ಕೋವಿಡ್ ಎರಡನೇ ಅಲೆ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಅಕ್ಟೋಬರ್ ಹೊತ್ತಿಗೆ ಮೂರನೇ ಅಲೆ ಅಪ್ಪಳಿಸಬಹುದು ತಜ್ಞರು ವರದಿ ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

    ಸದ್ಯಕ್ಕೆ ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಮೂರನೇ ಅಲೆಯಲ್ಲಿ ಚಿಕ್ಕಮಕ್ಕಳಲ್ಲಿ ಹೆಚ್ಚಾಗಿಸುವ ಕಾಣಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಚಿಕ್ಕಮಕ್ಕಳ ವೈದ್ಯರ ಜತೆಗೆ ಸಭೆ ನಡೆಸಲಾಗಿದೆ. ಅಗತ್ಯವಾದ ಔಷಧಿ, ವೈದ್ಯಕೀಯ ಉಪಕರಣ ಒದಗಿಸಲು ಸರ್ಕಾರ ಸಜ್ಜಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿ ನಿರ್ಧಾರ ಮಾಡಲಿದ್ದಾರೆ. ಆಯಾ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಲಿದ್ದಾರೆ ಎಂದರು.

    ನಾನು ದೇವರ ಮಗನಲ್ಲ
    ಕೋವಿಡ್ ಸೋಂಕಿತರ ಸಾವು, ಬ್ಯ್ಲಾಕ್ ಫಂಗಸ್ ಪ್ರಕರಣ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ಘೋಷಣೆ ಮಾಡುವದಕ್ಕೂ ಮತ್ತು ವಾಸ್ತವ ಅಂಕಿ, ಅಂಶಗಳು ಹೊಂದಾಣಿಕೆಯಾಗುತ್ತಿಲ್ಲ ಪತ್ರಕರ್ತರ ಪ್ರಶ್ನೆ ಉತ್ತರಿಸಿದ ಸಚಿವ ಉಮೇಶ ಕತ್ತಿ, ನಾನು ವೈದ್ಯನು ಅಲ್ಲ. ದೇವರ ಮಗನು ಅಲ್ಲ. ಅಧಿಕಾರಿಗಳು ಏನು ಮಾಹಿತಿ ನೀಡುತ್ತಾರೇ ಅದನ್ನು ಹೇಳುತ್ತೇನೆ. ತಪ್ಪು ಮಾಹಿತಿ ನೀಡಿದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಸರ್ಕಾರ ಮಾರ್ಗಸೂಚಿ ಅನ್ವಯ ಆರ್‌ಟಿಪಿಸಿಆರ್ ಪಾಜಿಟಿವ್ ಬಂದರೇ ಮಾತ್ರ ಕೋವಿಡ್ ಎಂದು ಘೋಷಿಸಲಾಗುತ್ತದೆ. ಸಿಟಿಸ್ಕಾೃನ್, ಎಕ್ಸರೇ ವರದಿಗಳು ಪರಿಗಣಿಸುವದಿಲ್ಲ. ಆರ್‌ಟಿಪಿಸಿಆರ್ ಪಾಜಿಟಿವ್ ಬಂದು ಮೃತಪಟ್ಟರೇ ಮಾತ್ರ ಕೋವಿಡ್ ಡೆತ್ ಎಂದು ಘೋಷಿಸಲಾಗುವುದು ಎಂದ ಅವರು, ಬ್ಯ್ಲಾಕ್ ಫಂಗಸ ವಿಷಯದಲ್ಲಿ ಅಷ್ಟೇ ಪರೀಕ್ಷೆಯಲ್ಲಿ ದೃಢಪಟ್ಟಲ್ಲಿ ಮಾತ್ರ ಪಾಜಿಟಿವ್ ಎಂದು ಪರಿಗಣಿಸಲಾಗುವುದು. ಆಯಾ ಜಿಲ್ಲೆಯಲ್ಲಿ ಸ್ಥಳೀಯವಾಗಿ ಫಂಗಸಗೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts