More

    ಯುವ ಕಾಂಗ್ರೆಸ್ ಚುನಾವಣೆ ರದ್ದು ಪಡಿಸಿ

    ಬಾಗಲಕೋಟೆ: ರಾಜ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದಿದೆ. ಎಐಸಿಸಿ ಕೂಡಲೇ ಈ ಚುನಾವಣೆ ಪ್ರಕ್ರಿಯೆ, ಆಯ್ಕೆಯನ್ನು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಎಲ್ಲ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಾಪುರ ಎಚ್ಚರಿಕೆ ನೀಡಿದರು.

    ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ ಮಾಡಲು ಚುನಾವಣೆ ನಿಗದಿಪಡಿಸಲಾಗಿತ್ತು. ಐವೈಸಿ ಆ್ಯಪ್ ಸರಿಯಾಗಿ ಕಾರ್ಯ ನಿರ್ವಹಿಸದ ಪರಿಣಾಮ ಅನೇಕ ಜನ ಸದಸ್ಯರು ಮತದಾನದಿಂದ ವಂಚಿತರಾದರು. ಅನೇಕ ಕಡೆ ಮತದಾನ ಆಗಲಿಲ್ಲ. ಇದರಿಂದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಐವೈಸಿ ಚುನಾವಣೆ ಆಯೋಗವು ಫಲಿತಾಂಶ ಪ್ರಕಟ ಮಾಡುವಲ್ಲಿ ವಿಳಂಬ ಮಾಡಿದ್ದು, ಕೆಲವು ಬ್ಲಾಕ್ ಫಲಿತಾಂಶ ಮರು ಪರಿಶೀಲನೆ ಮಾಡಿ ಪ್ರಕಟಿಸಿದೆ. ಇನ್ನು ಒಟಿಪಿ ಮುಖಾಂತರ ಮಾಡಿದ ಮತದಾನ ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಬೇರೆ ಬೇರೆ ಪಕ್ಷಗಳ ಸದಸ್ಯರನ್ನು ಬಳಕೆ ಮಾಡಿಕೊಂಡು ಕೆಲವರು ಅನೈತಿಕ ಚುನಾವಣೆ ನಡೆಸಿದ್ದಾರೆ ಎಂದು ಆರೋಪಿಸಿದರು.

    ಯಾವುದೇ ಕಾರಣಕ್ಕೂ ಈ ಫಲಿತಾಂಶ ಒಪ್ಪಲು ಸಾಧ್ಯವಿಲ್ಲ. ಈ ಚುನಾವಣೆ ಫಲಿತಾಂಶ, ಪ್ರಕ್ರಿಯೆ ಸಂಪೂರ್ಣ ರದ್ದು ಪಡಿಸಬೇಕು. ಬ್ಯಾಲೆಟ್ ಪೇಪರ್ ಮೂಲಕ ಮರು ಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಯುವ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು ತಮ್ಮನ್ನು ಆದಿಯಾಗಿ ಎಲ್ಲರೂ ರಾಜೀನಾಮೆ ನೀಡಲಿದ್ದೇವೆ ಎಂದು ಎಚ್ಚರಿಸಿದರು.

    ಯುವ ಕಾಂಗ್ರೆಸ್ ಮುಖಂಡರಾದ ಮಹೇಶ ಜಾಲವಾದಿ, ಶಶಿರ ಮಲಘಾಣ, ಹುಲ್ಲಪ್ಪ ತೇಜಿ, ಹುಸನಬಿ ನದಾಫ್, ಪ್ರವೀಣ ಪಾಟೀಲ, ಬಸವರಾಜ ಹೂವಿನಹಳ್ಳಿ ಸುದ್ದಿಗೋಷ್ಠಿಯಲ್ಲಿ ಇದ್ದರು.



    ಯುವ ಕಾಂಗ್ರೆಸ್ ಚುನಾವಣೆ ರದ್ದು ಪಡಿಸಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts