More

    1686 ಯುವ ಮತದಾರರ ನೋಂದಣಿ

    ಬಾಗಲಕೋಟೆ: ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಒಟ್ಟು 7101 ಯುವಕರನ್ನು ಹೊಸದಾಗಿ ಮತದಾರ ಪಟ್ಟಿಗೆ ಸೇರಿಸಿಕೊಳ್ಳಲು ನಮೂನೆ-6 ವಿತರಿಸಲಾಗಿದ್ದು, ಈ ಪೈಕಿ 1686 ಯುವ ಮತದಾರರು ನೋಂದಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯಾದ್ಯಂತ ಜ.8 ವರೆಗೆ ಮತದಾರರ ಮಿಂಚಿನ ನೊಂದಣಿ ಅಭಿಯಾನ ಕೈಗೊಳ್ಳಲಾಗಿದೆ. ಕಾಲೇಜುಗಳಲ್ಲಿ ಓದುತ್ತಿರುವ 18 ವರ್ಷ ಪೂರ್ಣಗೊಂಡ ವಿದ್ಯಾರ್ಥಿಗಳು ನಮೂನೆಗಳನ್ನು ಭರ್ತಿ ಮಾಡಿಸಿಕೊಂಡು ದಾಖಲಾತಿಗಳೊಂದಿಗೆ ಆಯಾ ತಾಲೂಕಿನ ತಹಸೀಲ್ದಾರ ಹಾಗೂ ಬಿಎಲ್‌ಗಳಿಗೆ ಸಲ್ಲಿಸುವಂತೆ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಅಲ್ಲದೆ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈಗಾಗಲೇ ಜ.6 ರಂದು ಒಟ್ಟು 1686 ಜನ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಮುಧೋಳ ಮತಕ್ಷೇತ್ರದಲ್ಲಿ 846, ತೇರದಾಳ ಮತಕ್ಷೇತ್ರದಲ್ಲಿ 15, ಜಮಖಂಡಿ ಮತಕ್ಷೇತ್ರದಲ್ಲಿ 141, ಬಾಗಲಕೋಟೆ ಮತಕ್ಷೇತ್ರದಲ್ಲಿ 53, ಬಾದಾಮಿ ಮತಕ್ಷೇತ್ರದಲ್ಲಿ 352, ಹುನಗುಂದ ಮತಕ್ಷೇತ್ರದಲ್ಲಿ 146, ಬೀಳಗಿ ಮತಕ್ಷೇತ್ರದಲ್ಲಿ 109 ಜನ ನೋಂದಣಿ ಮಾಡಿಕೊಂಡಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು 15,14,969 ಮತದಾರರಿದ್ದು, ಈ ಪೈಕಿ 7,55,689 ಪುರುಷ, 7,59,199 ಮಹಿಳಾ ಹಾಗೂ 81 ಇತರೆ ಮತದಾರರಿದ್ದಾರೆ ಎಂದು ತಿಳಿಸಿದರು.

    ಜಾತ್ರೆಯಲ್ಲಿ ಸ್ವಚ್ಛತೆ ಕಾಪಾಡಲು ಮನವಿ
    ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಯಾಗಿರುವ ಬಾದಾಮಿ ಬನಶಂಕರಿದೇವಿ ಜಾತ್ರೆಯು ಜ.10 ರಿಂದ ಒಂದು ತಿಂಗಳುಗಳ ಕಾಲ ನಡೆಯಲಿದ್ದು, ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮೊಬೈಲ್ ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿಯೊಂದು ಅಂಗಡಿಗಳ ಕಸದ ಡಬ್ಬಿಗಳನ್ನು ಕಡ್ಡಾಯವಾಗಿ ಇಡುವಂತೆ ಸೂಚಿಸಲಾಗಿದೆ. ಅಂಗಡಿಗಳು ರಸ್ತೆಯಿಂದ 10 ಅಡಿ ದೂರದಲ್ಲಿರಬೇಕು. ನಾಟಕ ತಂಡದವರು ಕಡ್ಡಾಯವಾಗಿ ಶೌಚಗೃಹ ವ್ಯವಸ್ಥೆ ಮಾಡಲು ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ ಹೆಚ್ಚುವಾರಿಯಾಗಿ ಸಿಬ್ಬಂದಿ, ಅಧಿಕಾರಿಗಳನ್ನು ನೇಮಿಸಲಾಗಿದೆ. ಆಟೋಗಳಲ್ಲಿ ಧ್ವನಿವರ್ದಕ ಅಳವಡಿಸಿ ಜಾಗೃತಿ ಮೂಡಿಲಾಗುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಾತ್ರೆಯಲ್ಲಿ ಹೆಚ್ಚಿನ ಸಿಸಿಟಿವಿ ಅಳವಡಿಸಿ ವೀಕ್ಷಣೆಗೆ ಒಂದು ಮೇಘಾ ಎಲ್‌ಸಿಡಿ ಟೆಲಿವಿಸನ್ ಇರಿಸಲು ಹೇಳಲಾಗಿದೆ. ಜಾತ್ರೆಯಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ಮಕ್ಕಳ ಕಳೆದುಹೋಗುವುದು, ಕಳ್ಳತನ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು. ಪೊಲೀಸ್ ಇಲಾಖೆಯಿಂದ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ವೈದ್ಯಾಧಿಕಾರಿಗಳ ತಂಡ ನಿಯುಕ್ತಿಗೊಳಿಸಲಾಗಿದೆ.
    – ಕೆ.ರಾಜೇಂದ್ರ ಜಿಲ್ಲಾಧಿಕಾರಿ

    ಬಾಗಲಕೋಟೆ, ಯುವ ಮತದಾರರು, ಜಿಲ್ಲಾಧಿಕಾರಿ, ಕೆ.ರಾಜೇಂದ್ರ, ಚುನಾವಣಾ ಆಯೋಗ, ನೊಂದಣಿ ಅಭಿಯಾನ, Bagalkot, Young Voters, District Collector, K. Rajendra, Election Commission, Registration Campaign,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts