More

    ಅಂಗವಿಕಲರ ಪುನಶ್ಚೇತನಕ್ಕೆ ಕ್ರಮ

    ಬಾಗಲಕೋಟೆ: ವಿವಿಧ ಇಲಾಖೆಯಡಿ ಮೀಸಲಿರಿಸಲಾದ ಶೇ.5 ರಷ್ಟು ಅನುದಾನದಲ್ಲಿ ಅಂಗವಿಕಲರಿಗೆ ಪೂರಕವಾದ ಕ್ರಿಯಾ ಯೋಜನೆ ರೂಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜರುಗಿದ ಅಂಗವಿಕಲರ ಕುಂದು ಕೊರತೆ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಅಂಗವಿಕಲರಿಗೆ ಮೀಸಲಿರಿಸಲಾದ ಅನುದಾನದಲ್ಲಿ ಬೇಡಿಕೆಗೆ ಅನುಸಾರವಾಗಿ ಪೂರಕವಾಗ ಯೋಜನೆಗಳನ್ನು ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

    ಕೆಲವೊಂದು ಅಂಗವಿಕಲರಿಗೆ ಸರಿಯಾಗಿ ಮಾಶಾಸನ ಬರದೇ ಇರುವ ಬಗ್ಗೆ ದೂರುಗಳು ಬಂದಿದ್ದು, ಅವುಗಳ ಬಗ್ಗೆ ತುರ್ತಾಗಿ ಕ್ರಮಕೈಗೊಂಡು ಮಾಶಾಸನ ಜಮಾಕ್ಕೆ ಕ್ರಮಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳ ಕಚೇರಿಯ ಮಾಶಾಸನ ಕೇಸ್ ವರ್ಕರ್ ಸಭೆಗೆ ಕರೆಯಿಸಿ ಮಾಶಾಸನ ಜಮೆಯಾಗದಿರುವ ಬಗ್ಗೆ ಸರಿಪಡಿಸಲು ಸ್ಥಳದಲ್ಲೇ ಸೂಚಿಸಿದರು. ಜಿಲ್ಲಾಡಳಿತ ಭವನ ಹಾಗೂ ತಾಲೂಕಾ ಆಡಳಿತ ಭವನದಲ್ಲಿ ವೈಜ್ಞಾನಿಕವಾಗಿ ರ‌್ಯಾಂಪ್ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು. ಕಚೇರಿಗಳಿಗೆ ತಿರುಗಾಡುವದನ್ನು ನಿಲ್ಲಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು.

    ಅಂಗವಿಕಲರಿಗೆ ಗುರುತಿನ ಚೀಟಿ ಸಲುವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ವಿಳಂಬವಾಗುತ್ತಿರುವ ಬಗ್ಗೆ ಅಂಗವಿಕಲರ ಸಭೆಗೆ ತಿಳಿಸಿದಾಗ ಈ ಕುರಿತು ಜಿಲ್ಲಾ ಶಸ ಚಿಕಿತ್ಸಕರು ಹಾಗೂ ತಾಲೂಕಾ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ತುರ್ತಾಗಿ ಗುರುತಿನ ಚೀಟಿ ನೀಡಲು ಕ್ರಮಕೈಗೊಳ್ಳಲಾಗುವುದು. ಬುಂದಿ ಮಾಂದ್ಯ ಪರೀಕ್ಷೆ ಮಾಡುವ ವೈದ್ಯರು ವಾರಕ್ಕೆ ಒಂದು ದಿನ ಮಾತ್ರ ಪರೀಕ್ಷೆ ಮಾಡುತ್ತಿದ್ದು, ವಾರದಲ್ಲಿ ಎರಡು ದಿನ ಪರೀಕ್ಷೆ ಮಾಡಬೇಕು ಎಂದು ಅಂಗವಿಕಲರು ಮನವಿ ಮಾಡಿದರು. ಈ ಬಗ್ಗೆ ಚರ್ಚಿಸುವುದಾಗಿ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ತಿಳಿಸಿದರು.

    ಜಿಲ್ಲಾ ಅಂಗವಿಕಲರ ಸಂಘದ ಮುಖಂಡ ರಘು ಹುಬ್ಬಳ್ಳಿ ಮಾತನಾಡಿ, ಸರ್ಕಾರದಿಂದ ಅಂಗವಿಕಲರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಗುವಂತೆ ಕ್ರಮವಹಿಸಬೇಕು. ಅಂಗವಿಕಲರ ಪುನಶ್ಚೇತನಕ್ಕೆ ಪೂರಕವಾದ ಯೋಜನೆಗಳು ರೂಪಿಸಬೇಕು. ಅಂಗವಿಕಲರ ಸಮಸ್ಯೆ ಆಲಿಸಿ ಯೋಜನೆಗಳು ಅನುಷ್ಠಾನಗೊಳಿಸುವಾಗ ಸಲಹೆ ಸೂಚನೆ ನೀಡಬೇಕು. ವಿವಿಧ ಇಲಾಖೆಯ ಅನುದಾನದಲ್ಲಿ ಮೀಸಲಿರಿಸಲಾದ ಅನುದಾನದಲ್ಲಿ ರೂಪಿಸಬೇಕಾದ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

    ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಇಲಾಖೆಯ ಉಪನಿರ್ದೇಶಕ ಬಿ.ಸಿ.ಶಿವಲಿಂಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಸೇರಿದಂತೆ ಆಯಾ ತಾಲೂಕಾ ಎಂ.ಆರ್.ಡಬ್ಲೂ, ಅಂಗವಿಕಲರ ಸ್ವಯಂ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಂಗವಿಕಲರು ಉಪಸ್ಥಿತರಿದ್ದರು.

    ಸರಳವಾಗಿ ಅಂಗವಿಕಲರ ದಿನಾಚರಣೆಗೆ ನಿರ್ಧಾರ
    ಸರ್ಕಾರ ಮಾರ್ಗಸೂಚಿಯನ್ವಯ ಬರುವ ಡಿ.3 ರಂದು ಆಚರಿಸಲ್ಪಡುವ ವಿಶ್ವ ಅಂಗವಿಕಲ ದಿನಾಚರಣೆಯನ್ನು ಜಿಲ್ಲಾಡಳಿತದಿಂದ ಸರಳವಾಗಿ ಹಾಗೂ ಸಾಂಕೇತಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಂದು ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts