More

    ಗಣಿಗಾರಿಕೆ ಪರವಾಣಿಗೆ ನೀಡಿ

    ಬಾಗಲಕೋಟೆ: ಸೋನಾ ಮಿನರಲ್ಸ್ ಕಂಪನಿ ನಡೆಸಲು ಉದ್ದೇಶಿಸಿರುವ ಗಣಿಗಾರಿಕೆಯಿಂದ ಯಾವುದೇ ಸಮಸ್ಯೆ ಇಲ್ಲ. ಜಿಲ್ಲಾಡಳಿತ ಪರವಾಣಿಗೆ ನೀಡಬೇಕು ಎಂದು ಆಗ್ರಹಿಸಿ ಗುಂಡನಪಲ್ಲೆ, ಮಲ್ಲಾಪುರ, ಶಿರೂರ, ಬೇವಿನಮಟ್ಟಿ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಗ್ರಾಮಸ್ಥರು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರಿಗೆ ಮನವಿ ಸಲ್ಲಿಸಿದರು.
    ಬಾಗಲಕೋಟೆ ತಾಲೂಕಿನ ನಾಲ್ಕು ಗ್ರಾಮಗಳ ಸರಹದ್ದಿನಲ್ಲಿ ಸೋನಾ ಮಿನರಲ್ಸ್ ಕಂಪನಿಯೂ ನಡೆಸುತ್ತಿರುವ ಗಣಿಗಾರಿಕೆಯಿಂದ ನಿರೋದ್ಯೋಗಿ ಯುವಕರು, ಕಾರ್ಮಿಕರಿಗೆ ಅನುಕೂಲವಾಗಲಿದೆ. ಗ್ರಾಮೀಣ ಆರ್ಥಿಕ ಸ್ಥಿತಿಯಲ್ಲಿ ಸುಧಾರಿಸುವಲ್ಲಿ ಸಹಕಾರಿಯಾಗಿದೆ. ಪರಿಸರ ಇಲಾಖೆಯ ನಿರ್ದೇಶನದಂತೆ ಈಚೆಗೆ ಕಂಪನಿಯವರು ಸಾರ್ವಜನಿಕರ ಸಭೆ ನಡೆಸಿದ್ದರು. ಎಲ್ಲ ಗ್ರಾಮಸ್ಥರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದೆಲ್ಲ ಬೆಳವಣಿಗೆ ನಂತರ ಈಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಗ್ರಾಮಸ್ಥರ ಅಭಿಪ್ರಾಯ ದಿಕ್ಕರಿಸಿ ವಿರೋಧ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿದರು.

    ಗಣಿಗಾರಿಕೆ ಉದ್ದೇಶಕ್ಕೆ ನಿರಾಧಾರ ಆಕ್ಷೇಪಣೆಗಳೊಂದಿಗೆ ಅಡಚಣೆ ಉಂಟು ಮಾಡುವುದು ತರವಲ್ಲ. ಕೀಳುಮಟ್ಟದ ರಾಜಕೀಯ ಅಡಗಿದೆ. ಈ ಕಂಪನಿಯಿಂದ ಉದ್ಯೋಗ ದೊರೆಯುವುದರ ಜತೆಗೆ ಸರ್ಕಾರಕ್ಕೆ ಡಿಸ್ಟ್ರೀಕ್ ಮೋನಿಟರಿಂಗ್ ಫಂಡ್ ಕೂಡಾ ಸಿಗುತ್ತಿದೆ. ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳಲು ಅವಕಾಶ ಸಿಕ್ಕಿದೆ. ಗಣಿಗಾರಿಕೆ ರದ್ದು ಪಡಿಸಿದಲ್ಲಿ ಹಲವು ಕುಟುಂಬಗಳ ಜೀವನಾಧರಕ್ಕೆ ಕೊಡಲಿಪೆಟ್ಟು ಬೀಳುತ್ತದೆ ಎಂದು ದೂರಿದರು.

    ಸೋನಾ ಮಿನರಲ್ಸ್ ಕಂಪನಿ ಸ್ಥಾಪನೆ ಸಹಿಸದೇ ಬೆರಳಕೆಯಷ್ಟು ಜನರು ತಮ್ಮ ರಾಜಕೀಯ ಉದ್ದೇಶಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಯಾವುದೇ ರೀತಿಯಿಂದ ಗಂಭೀರವಾಗಿ ಪರಿಗಣಿಸಬಾರದು. ಗಣಿಗಾರಿಕೆ ನಡೆಸಲು ಅನುಕೂಲ ಮಾಡಿಕೊಳಡಬೇಕು ಎಂದು ಆಗ್ರಹಿಸಿದರು.

    ಮುಖಂಡರಾದ ಗುರು ಅನಗವಾಡಿ, ಮಾರುತಿ ವಡ್ಡರ, ಎಂ.ಆರ್.ಮೇಟಿ, ಆನಂದ ಚಲವಾದಿ, ಈರಣ್ಣ ರಾಜನಾಳ, ಸಿ.ಎಸ್.ಗದಿಗೆನ್ನವರ, ಶಿವಲಿಂಗಪ್ಪ ಅನವಾಲ, ಮಂಜುನಾಥ ಸುಗತೇಕರ, ರಂಗಪ್ಪ ಕೆಂದೂರ, ಪರಪ್ಪ ಹಿರಿಯಾಳ, ಎಲ್.ಎಸ್.ತಳವಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts