More

    ರೂ. 98.50 ಲಕ್ಷ ಪರಿಹಾರ ವಿತರಣೆ

    ಬಾಗಲಕೋಟೆ: ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ 28 ದೌರ್ಜನ್ಯ ಪ್ರಕರಣಗಳಿಗೆ ಒಟ್ಟು 98.50 ಲಕ್ಷ ರೂ. ಪರಿಹಾರಧನ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಎಸ್‌ಸಿಪಿ ಮತ್ತು ಟಿಎಸ್‌ಪಿ ಪ್ರಗತಿ ಪರಿಶೀಲನೆ, ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತಿ ನಿಂದನೆ, ಹೊಡೆದಾಟ ಹಾಗೂ ಮಹಿಳೆಯರ ಅವಮಾನ ಸೇರಿ 28 ದೌರ್ಜನ್ಯ ಪ್ರಕರಣಗಳಿಗೆ ಒಟ್ಟು 98.50 ಲಕ್ಷ ರೂ. ಪರಿಹಾರಧನವನ್ನು ನೀಡಲಾಗಿದೆ. ಇನ್ನು 6 ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳ ಮಂಜೂರಾತಿಗೂ ಕ್ರಮಕೈಗೊಳ್ಳಲು ಸೂಚಿಸಿದರು.

    ದೌರ್ಜನ್ಯ ಪ್ರಕರಣಗಳಿಗೆ ಪರಿಹಾರಧನ ಕೊರತೆ ಬಗ್ಗೆ ಈಗಾಗಲೇ ಪತ್ರ ಬರೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಪರಿಹಾರಧನ ಮಂಜೂರು ಮಾಡಲು ಅನುದಾನ ಲಭ್ಯವಿಲ್ಲದಿದ್ದರೂ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಜಂಟಿ ಖಾತೆಯಲ್ಲಿ ಲಭ್ಯವಿರುವ ಬೇರೆ ಯೋಜನೆಗಳ ಅನುದಾನ ಬಳಕೆಗೆ ಅವಕಾಶ ನೀಡಿದ್ದು, ನಂತರದಲ್ಲಿ ಪರಿಹಾರಧನ ಮಂಜೂರಾದಲ್ಲಿ ಅನುದಾನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ. ಆದ್ದರಿಂದ ಪರಿಹಾರಧನ ವಿತರಣೆಗೆ ಅನುದಾನದ ತೊಂದರೆಯಾಗದು ಎಂದು ತಿಳಿಸಿದರು.

    ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿ ಕ್ರಮಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣದ ವಿರುದ್ಧ ಆಗದಂತೆ ಮುತುವರ್ಜಿ ವಹಿಸಿ ಶಿಕ್ಷೆ ಹೆಚ್ಚಿಸಲು ಸರ್ಕಾರಿ ಅಭಿಯೋಜಕರಿಗೆ ತಿಳಿಸುವಂತೆ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ನ್ಯಾಯಾಲಯದಲ್ಲಿ 193 ಪ್ರಕರಣಗಳು ಬಾಕಿ ಉಳಿದಿರುತ್ತವೆ. ಕಳೆದ ಏಪ್ರಿಲ್‌ದಿಂದ ಆಗಸ್ಟ್‌ವರೆಗೆ ಪೊಲೀಸ್ ಠಾಣೆಯಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

    ವಿವಿಧ ಇಲಾಖೆಗಳಲ್ಲಿ ಆಗಸ್ಟ್ ಅಂತ್ಯಕ್ಕೆ ಆಗಿರುವ ಪ್ರಗತಿ ಪರಿಶೀಲನೆ ಮಾಡಿದರು. ಯಾವ ಯಾವ ಇಲಾಖೆಯಲ್ಲಿ ಅನುದಾನ ಬಿಡುಗಡೆಯಾಗಿದೆಯೋ ಆ ಅನುದಾನವನ್ನು ಖರ್ಚು ಮಾಡಬೇಕು. ಯಾವುದಕ್ಕೆ ಖುರ್ಚು ಮಾಡಿದ್ದೀರಿ ಅದರ ವಿವರ ನೀಡುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಯಶವಂತ ಗುರಿಕಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಡಾ.ಎಂ.ಎಚ್. ಚಲವಾದಿ, ಯಲ್ಲಪ್ಪ ಮೇತ್ರಿ, ಮುತ್ತಣ್ಣ ಬೆಣ್ಣೂರ, ಸುಭಾಷ ಗಸ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    8 ಎಕರೆ ಜಮೀನು ಮಂಜೂರು
    ಬಾದಾಮಿ ಹಾಗೂ ಮುಧೋಳದಲ್ಲಿ ವಾಲ್ಮೀಕಿ ಭವನದ ಕಾಮಗಾರಿ ಪೂರ್ಣಗೊಂಡಿರುವುದಾಗಿ ಕೆ.ಆರ್.ಐ.ಡಿ.ಬಿ. ಕಾರ್ಯನಿವಾಹಕ ಅಭಿಯಂತರು ಸಭೆಗೆ ತಿಳಿಸಿದಾಗ ಇನ್ನು ಸಣ್ಣ ಪುಟ್ಟ ಕಾರ್ಯಗಳಿದ್ದಲ್ಲಿ ಅವುಗಳನ್ನು ಮುಗಿಸಿ ಹಸ್ತಾಂತರಿಸಬೇಕು ಎಂದು ಡಿಸಿ ಕೆ.ರಾಜೇಂದ್ರ ತಿಳಿಸಿದರು. ಅಲ್ಲದೆ, ಹೊಸದಾಗಿ ಮಂಜೂರಾದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಹನಗಂಡಿ ಗ್ರಾಮದ 8 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಈ ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

    ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಲಾದ ಬೋರ್‌ವೆಲ್‌ಗಳಿಗೆ ವಿದ್ಯುತ್ತೀಕರಣ ಕಲ್ಪಿಸಲು 157 ಪೈಕಿ 84 ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. 73 ಮಾತ್ರ ಬಾಕಿ ಉಳಿದಿವೆ. ನವೆಂಬರ್ ಅಂತ್ಯಕ್ಕೆ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ತೀಕರಣ ಪೂರ್ಣಗೊಳಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಯೂನಿಟ್ ದರದ ಜೆಬಿಜೆಎನ್‌ಎಲ್‌ಗಿಂತ ವಿವಿಧ ನಿಗಮಗಳಲ್ಲಿ ಈ ದರ ಕಡಿಮೆ ಇದ್ದು, ವಿವಿಧ ನಿಗಮದಿಂದ ಕೊರೆಯುತ್ತಿರುವ ಕೊಳವೆ ಬಾವಿಗಳ ಯೂನಿಟ್ ದರ ಹೆಚ್ಚಿಸುವ ಕುರಿತು ನಿಗದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು.
    ಕೆ.ರಾಜೇಂದ್ರ ಜಿಲ್ಲಾಧಿಕಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts