More

    ಪ್ರತಿಭಟನೆಯ ಹಿಂದೆ ದುರುದ್ದೇಶದ ರಾಜಕಾರಣ

    ಬಾಗಲಕೋಟೆ: ನಿರಾಣಿ ಉದ್ಯಮ ಸಮೂಹದಿಂದ ಕೇದಾರನಾಥ ಸಕ್ಕರೆ ಕಾರ್ಖಾನೆ ಖರೀದಿಸಲಾಗಿದೆ. ಈ ಭಾಗದ ರೈತರ ಅನುಕೂಲಕ್ಕಾಗಿ ಜ.17 ರಂದೇ ಕಾರ್ಯಾರಂಭ ಮಾಡಲಿದೆ. ಇಂತಹ ಸಂದರ್ಭದಲ್ಲಿ ರೈತರು ಪ್ರತಿಭಟನೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಕಾರ್ಖಾನೆಗೆ ಕಬ್ಬು ಪೂರೈಸುವ ರೈತ ಸುರೇಶ ಪವಾರ ಹೇಳಿದರು.

    ಹಲವು ವರ್ಷಗಳಿಂದ ಕಾರ್ಖಾನೆ ಬಂದ್ ಆಗಿದ್ದರಿಂದ ಬಾದಾಮಿ, ಬಾಗಲಕೋಟೆ ಭಾಗದ ಕಬ್ಬು ಬೆಳೆಗಾರರಿಗೆ ತೀವ್ರ ತೊಂದರೆಯಾಗಿತ್ತು. ನೂರಾರು ಕಿ.ಮೀ. ದೂರದಲ್ಲಿರುವ ಕಾರ್ಖಾನೆಗಳಿಗೆ ಕಬ್ಬು ಪೂರೈಸಿ ಬಿಲ್‌ಗಾಗಿ ಅಲೆದಾಡುವ ಪರಿಸ್ಥಿತಿ ಇತ್ತು. ಈಗ ನಿರಾಣಿ ಉದ್ಯಮ ಸಮೂಹದಿಂದ ಕಾರ್ಖಾನೆ ಪುನರಾರಂಭ ಆಗುತ್ತಿರುವುದು ಈ ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇನ್ನು ಪ್ರತಿಭಟನೆ ನಡೆಸಲು ಮುಂದಾಗಿರುವ ರೈತರು ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಲ್ಲ. ಇವರ ಹಿಂದೆ ಕಾಣದ ಕೈಗಳ ಕೈವಾಡವಿದೆ. ರಾಜಕೀಯ ದುರುದ್ದೇಶ ಅಡಗಿದೆ. ರೈತ ಸಂಘದ ಮುಖಂಡರು ಸತ್ಯ ಅರಿತುಕೊಳ್ಳಬೇಕು. ಕಬ್ಬು ಬಾಕಿ ಬಿಲ್, ಷೇರು ಹಣ ಬಗ್ಗೆ ಸಂಬಂಧಪಟ್ಟವರನ್ನು ಕೇಳಬೇಕು. ಪ್ರತಿಭಟನೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ನಿಂಗಣ್ಣ ಕ್ಯಾದಿಗೇರಿ, ಶಿವಪ್ಪ ಕಬಾಡದ, ರಮೇಶ ಮೊರಟಗಿ, ಸಂಗಪ್ಪ ಕೆಂಚಣ್ಣವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts