More

    ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ

    ಬಾಗಲಕೋಟೆ: ನದಾಫ್ -ಪಿಂಜಾರ ಜನಾಂಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಭವನ ಎದುರು ನದಾಫ್-ಪಿಂಜಾರ ಸಮಾಜ ಬಾಂಧವರು ಬುಧವಾರ ಒಂದು ದಿನ ಸಾಂಕೇತಿಕ ಧರಣಿ ನಡೆಸಿದರು.

    ಮುಖಂಡ ಪಿ.ಇಮಾಮಸಾಬ ಮಾತನಾಡಿ, ನದಾಫ್ -ಪಿಂಜಾರ ಜನಾಂಗ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದೆ. ಕೇಂದ್ರ ಸರ್ಕಾರ ಒಬಿಸಿ ಪಟ್ಟಿಯಲ್ಲಿ ನದಾಫ್ , ಪಿಂಜಾರ ಜನಾಂಗವನ್ನು ಸೇರ್ಪಡೆ ಮಾಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದಿರುವ ಕಾಯ್ದೆಯಲ್ಲಿ ಅತ್ಯಂತ ಹಿಂದುಳಿದಿರುವ ಬಗ್ಗೆ ಗುರುತಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಶೀಘ್ರದಲ್ಲಿ ಅಭಿವೃದ್ಧಿ ನಿಗಮ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

    ಸಮಾಜದ ಅಧ್ಯಕ್ಷ ಎಸ್.ಎಚ್.ಮುದಕವಿ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಎಂ.ಎಂ.ಚಿತ್ತರಗಿ, ಎ.ಎ.ತಿಮ್ಮಾಪುರ, ಸಾಧಿಕ ಕೋಲಾರ, ಚಾಂದ ನದಾಫ್, ಎಲ್.ಎನ್.ನದಾಫ್, ರಿಯಾನಾ ಎಲ್.ನದಾಫ್, ಹುಸೇನಸಾಬ ನದಾಫ್, ಸೈಪುದ್ದೀನ್ ನದಾಫ್, ಯಾಕೂಬ ನದಾಫ್, ಮೌಲಾಸಾವ ನದಾಫ್, ಮಕ್ತುಂ ಹುಸೇನ ನದಾಫ್, ಕರೀಂಸಾಬ ನದಾಫ್, ಇಮ್ತಿಯಾಜ್ ಮುರನಾಳ, ಕೆ.ಎಚ್.ಹುಬ್ಬಳ್ಳಿ, ನಬಿ ನದಾಫ್, ಮುನೀರಸಾಬ ಮುರನಾಳ, ಸೈರಾಬಾನು ನದಾಫ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts