More

    ನಗರ ಸ್ವಚ್ಛತೆಗೆ ಗಮನ ಹರಿಸಿ

    ಬಾಗಲಕೋಟೆ: ಬಾಗಲಕೋಟೆ ನಗರಸಭೆಯಿಂದ ಸ್ವಚ್ಛ ಭಾರತ ಮಿಷನ್ ಅನುದಾನ ಯೋಜನೆಯಡಿ ಖರೀದಿಸಲಾದ 13 ಹೊಸ ಆಟೋ ಟಿಪ್ಪರ್ ವಾಹನಗಳಿಗೆ ನಗರದ ಬಸವೇಶ್ವರ ವೃತ್ತದ ಬಳಿ ಇರುವ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಶಾಸಕ ವೀರಣ್ಣ ಚರಂತಿಮಠ ಮಂಗಳವಾರ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ಬಾಗಲಕೋಟೆ ನಗರದ ಘನ ತ್ಯಾಜ್ಯ ವಿಲೇವಾರಿಗೆ ವಾಹನಗಳ ಅಗತ್ಯವಿದ್ದು, ಮೊದಲ ಹಂತದಲ್ಲಿ 47.24 ಲಕ್ಷ ರೂ.ನಲ್ಲಿ 3 ಗಾಲಿಗಳ 13 ಆಟೋ ಟಿಪ್ಪರ್‌ಗಳನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ 4 ಗಾಲಿಗಳ 2 ಆಟೋ ಟಿಪ್ಪರ್, ಎರಡು ಟಿಪ್ಪರ್ ಟ್ರಕ್, ಎರಡು ಕಂಪ್ಯಾಕ್ಟರ್ ಹಾಗೂ ಒಂದು ಟ್ರಾೃಕ್ಟರ್ ಟ್ರೇಲರ್ಸ್‌ ಖರೀದಿಸಲಾಗುತ್ತಿದೆ. ಅವುಗಳು ಟೆಂಡರ್ ಹಂತದಲ್ಲಿವೆ. ನಗರದ ಸ್ವಚ್ಛತೆಗೆ ನಗರಸಭೆ ಸದಸ್ಯರು, ಸಿಬ್ಬಂದಿ ವರ್ಗ ಗಮನ ಹರಿಸಬೇಕು ಎಂದು ತಿಳಿಸಿದರು.

    ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ನಗರಸಭೆ ಸಭಾಪತಿ ರವಿ ದಾಮಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಬುಡಾದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ, ಸಹಾಯಕ ಅಭಿಯಂತರ ಆರ್.ಆರ್.ಕುಲಕರ್ಣಿ, ಪರಿಸರ ಅಭಿಯಂತರ ಎ್.ವೈ.ಕಲಸರೆಡ್ಡಿ ಇದ್ದರು.



    ನಗರ ಸ್ವಚ್ಛತೆಗೆ ಗಮನ ಹರಿಸಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts