More

    ಒಡಿಶಾ ಎಸ್​ಪಿಯೊಂದಿಗೆ ಬಾಗಲಕೋಟೆ ಎಸ್​ಪಿ ವಿವಾಹ: ಸರ್ಕಾರಿ ಸೇವೆಯಂತೆ ವೈವಾಹಿಕ ಜೀವನಕ್ಕೂ ಜತೆಯಾಗಿಯೇ ಎಂಟ್ರಿ!

    ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​ ಜಗಲಾಸರ್ ಅವರು​ ಒಡಿಶಾ ಮೂಲದ ಪೊಲೀಸ್​ ವರಿಷ್ಠಾಧಿಕಾರಿ ಪದ್ಮಿನಿ ಅವರೊಂದಿಗೆ ಸಪ್ತಪದಿ ತುಳಿಯುವ ಮೂಲಕ ಸರ್ಕಾರಿ ಸೇವೆಗೆ ಒಟ್ಟಿಗೆ ಹೆಜ್ಜೆ ಇಟ್ಟಿದ್ದ ಐಪಿಎಸ್​ ಜೋಡಿ ಇದೀಗ ವೈವಾಹಿಕ ಜೀವನಕ್ಕೂ ಜತೆಯಾಗಿಯೇ ಕಾಲಿಟ್ಟಿದ್ದಾರೆ

    ಲೋಕೇಶ್​ ಮೂಲತಃ ಕುಂದಾನಗರಿಯವರು. ಪದ್ಮಿನಿ ಕಳಿಂಗ ನಾಡಿನ(ಓಡಿಸ್ಸಾ) ಕುವರಿಯಾಗಿದ್ದು, ಬರ್ಗಾರ್ ಜಿಲ್ಲಾ ಎಸ್ಪಿ ಆಗಿದ್ದಾರೆ. ಲೋಕೇಶ್​ ಹಾಗೂ ಪದ್ಮಿನಿ ಇಬ್ಬರೂ 2015ರ ಐಪಿಎಸ್ ಬ್ಯಾಚ್ ಮೇಟ್. ಲೋಕೇಶ್​ ಕರ್ನಾಟಕ ಕೇಡರ್​ಗೆ ಆಯ್ಕೆಯಾದರೆ, ಪದ್ಮಿನಿ ಓಡಿಸಾ ಕೇಡರ್​ಗೆ ಆಯ್ಕೆಯಾದರು. ಆದರೆ, ಆಗಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದೀಗ ಐಪಿಎಸ್​ ಅಧಿಕಾರಿಗಳು ಪ್ರೀತಿಯ ಬಂಧದಿಂದ ಮದುವೆಯ ಬಂಧಕ್ಕೆ ಒಳಗಾಗಿದ್ದಾರೆ.

    ಇಂದು ಓಡಿಸ್ಸಾದ ಭುವನೇಶ್ವರಿಯಲ್ಲಿ ಐಪಿಎಸ್ ಜೋಡಿ ಸಪ್ತಪದಿ ತುಳಿದಿದೆ. ಫೆ. 20ರಂದು ಬೆಂಗಳೂರಿನ ಜಯನಗರದ ಪೂರ್ಣಿಮಾ ಕನ್ವೆನ್ಷನ್ ಸೆಂಟರ್​ನಲ್ಲಿ ರಿಸೆಪ್ಷನ್ ನಡೆಯಲಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts