More

    ಜಿಲ್ಲೆಯಲ್ಲಿ 15.50 ಲಕ್ಷ ಮತದಾರರು

    ಬಾಗಲಕೋಟೆ: ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾದ್ಯಂತ ಮತದಾರರ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಜನವರಿ 13 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 15,50,850 ಮತದಾರರು ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮತದಾರ ಪಟ್ಟಿಯ ವೀಕ್ಷಕ ಶಿವಯೋಗಿ ಕಳಸದ ಹೇಳಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಮತದಾನ ಪರಿಷ್ಕರಣೆ ಕಾರ್ಯದಲ್ಲಿ ತಿದ್ದುಪಡಿ, ಹೊಸದಾಗಿ ಹೆಸರು ಸೇರ್ಪಡೆ, ವರ್ಗಾವಣೆ ಹಾಗೂ ಮತದಾರರ ಪಟ್ಟಿಯಿಂದ ತೆಗೆದು ಹಾಕುವುದು ಸೇರಿ ಒಟ್ಟು 39,274 ಅರ್ಜಿಗಳು ಸ್ವೀಕರಗೊಂಡಿದ್ದು, ಅದರಲ್ಲಿ 4,307 ತಿರಸ್ಕೃತಗೊಂಡಿವೆ. ಉಳಿದ 34,967 ಅರ್ಜಿಗಳನ್ನು ಸ್ವೀಕರಿಸಿ ಕ್ರಮವಹಿಸಲಾಗಿರುತ್ತದೆ ಎಂದರು.
    ಅಂತಿಮವಾಗಿ ಜಿಲ್ಲೆಯಲ್ಲಿ ಒಟ್ಟು 15,50,850 ಮತದಾರರಿದ್ದು, ಈ ಪೈಕಿ 7,73,272 ಪುರುಷರು, 7,77,498 ಮಹಿಳೆಯರು ಹಾಗೂ 80 ಇತರ ಮತದಾರರಿದ್ದಾರೆ. ಮುಧೋಳ ಕ್ಷೇತ್ರದಲ್ಲಿ 99,369 ಪುರುಷ, 1,02,287 ಮಹಿಳಾ, 1 ಇತರ ಸೇರಿ ಒಟ್ಟು 2,01,657 ಮತದಾರರು, ತೇರದಾಳ ಕ್ಷೇತ್ರದಲ್ಲಿ 1,13,047 ಪುರುಷ, 1,12,722 ಮಹಿಳಾ, 12 ಇತರ ಸೇರಿ ಒಟ್ಟು 2,25,782, ಜಮಖಂಡಿ ಕ್ಷೇತ್ರದಲ್ಲಿ 1,05,872 ಪುರುಷ, 1,05,721 ಮಹಿಳಾ ಹಾಗೂ 7 ಇತರ ಸೇರಿ ಒಟ್ಟು 2,11,600 ಮತದಾರರಿದ್ದಾರೆ ಎಂದು ಹೇಳಿದರು.

    ಬೀಳಗಿ ಕ್ಷೇತ್ರದಲ್ಲಿ 1,12,559 ಪುರುಷ, 1,14,321 ಮಹಿಳಾ 17 ಇತರ ಸೇರಿ ಒಟ್ಟು 2,26,897, ಬಾದಾಮಿ ಕ್ಷೇತ್ರದಲ್ಲಿ 1,12,907 ಪುರುಷ, 1,11,381 ಮಹಿಳಾ, 14 ಇತರ ಸೇರಿ ಒಟ್ಟು 2,24,302, ಬಾಗಲಕೋಟೆ ಕ್ಷೇತ್ರ 1,19,316 ಪುರುಷ, 1,20,133 ಮಹಿಳಾ, 19 ಇತರ ಸೇರಿ ಒಟ್ಟು 2,39,468 ಹಾಗೂ ಹುನಗುಂದ ಕ್ಷೇತ್ರದಲ್ಲಿ 1,10,201 ಪುರುಷ, 1,10,933 ಮಹಿಳಾ, 10 ಇತತ ಸೇರಿ ಒಟ್ಟು 2,21,144 ಮತದಾರರಿದ್ದಾರೆ ಎಂದು ತಿಳಿಸಿದರು.

    ಅಂತಿಮ ಮತದಾರರ ಪಟ್ಟಿಯನ್ನು ಆಯಾ ತಾಲೂಕಿನ ತಹಸೀಲ್ದಾರ್, ಮತದಾರರ ನೋಂದಣಿ, ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳ ಕಚೇರಿ ಪ್ರಕಟಿಸಲು ಕ್ರಮವಹಿಸಬೇಕು. ಜ.25 ರಂದು ಆಚರಿಸಲ್ಪಡುವ ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಣೆ ಮಾಡಬೇಕು ಎಂದು ಸೂಚಿಸಿದರು.

    ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಬಾಗಲಕೋಟೆ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಸೇರಿ ಆಯಾ ತಾಲೂಕಿನ ತಹಸೀಲ್ದಾರರು, ಚುನಾವಣಾ ತಹಸೀಲ್ದಾರ್ ಎಸ್.ಜಿ.ನಾಯ್ಕಲ್‌ಮಠ ಇತರರಿದ್ದರು.

    
    
    ಜಿಲ್ಲೆಯಲ್ಲಿ 15.50 ಲಕ್ಷ ಮತದಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts