More

    ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ

    ಬಾಗಲಕೋಟೆ: ನವನಗರದಲ್ಲಿರುವ ವಿವಿಧ ಇಲಾಖೆಗಳ ಏಳು ವಸತಿ ನಿಲಯಗಳಿಗೆ ಶಾಸಕ ವೀರಣ್ಣ ಚರಂತಿಮಠ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಹಿಂದುಳಿದ ಕಲ್ಯಾಣ ಇಲಾಖೆ ವಸತಿ ನಿಲಯ ಹಾಗೂ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯ ಸೇರಿ ಒಟ್ಟು ಏಳು ವಸತಿ ನಿಲಯಗಳಿಗೆ ಭೇಟಿ ನೀಡಿದ ಶಾಸಕರು, ಕೊಠಡಿ ಹಾಗೂ ವಸತಿ ನಿಲಯಗಳ ಮೇಲ್ಛಾವಣಿ ಸ್ಥಿತಿಗತಿ ಪರಿಶೀಲಿಸಿದರು. ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಕಂಡು ಸಂಬಂಧಪಟ್ಟ ಅಧಿಕಾರಿಗಳು, ವಸತಿ ನಿಲಯ ಮೇಲ್ವಿಚಾರಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

    ಸರ್ಕಾರದ ಸಂಬಳ ತೆಗೆದುಕೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು, ಬೇಜಾವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದು ಸಹಿಸಲು ಸಾಧ್ಯವಿಲ್ಲ. ತಮಗೆ ವಹಿಸಿರುವ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ವಸತಿ ನಿಯಲಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪ್ರತಿಯೊಬ್ಬರೂ ಸಮಯಕ್ಕೆ ಸರಿಯಾಗಿ ಬರಬೇಕು. ಇಲ್ಲದಿದ್ದರೆ ಸಂಬಳವನ್ನು ತಡೆ ಹಿಡಿಯಲಾಗುವುದು. ಶಿಸ್ತಿನಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರು ಸರಿಯಾಗಿ ಕೆಲಸ ಮಾಡದಿದ್ದರೆ ಏಜೆನ್ಸಿಗಳಿಗೆ ನೋಟಿಸ್ ನೀಡಲಾಗುವುದು ಎಂದರು.

    ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗದ ಬಾಲಕಿಯರ ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರ ಸಮಸ್ಯೆಯನ್ನು ಶಾಸಕ ವೀರಣ್ಣ ಚರಂತಿಮಠ ಆಲಿಸಿದರು. ವಸತಿ ನಿಲಯದಲ್ಲಿರುವ ಅವ್ಯವಸ್ಥೆ, ಸರಿಯಾದ ಊಟ ನೀಡದಿರುವ ಕುರಿತು ವಿದ್ಯಾರ್ಥಿಗಳು ಶಾಸಕರ ಗಮನಕ್ಕೆ ತಂದರು. ಶೀಘ್ರದಲ್ಲೇ ಇದನ್ನು ಸರಿಪಡಿಸಲು ತಿಳಿಸಲಾಗುವುದು ಎಂದು ಶಾಸಕ ಚರಂತಿಮಠ ಭರವಸೆ ನೀಡಿದರು.

    ವಸತಿ ನಿಲಯಗಳ ಅಧಿಕಾರಿಗಳಾದ ಮಹೇಶ ಪೋತದಾರ, ಮಲ್ಲಿಕಾರ್ಜುನ ಡೋಂಬರ್, ರಮೇಶ ಚವಾಣ್ ಸೇರಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts