More

    ತಪಾಸಣೆಗೆ ಒಳಗಾದ 60 ವಿದ್ಯಾರ್ಥಿಗಳು

    ಬಾಗಲಕೋಟೆ: ಸರ್ಕಾರದ ಸೂಚನೆಯಂತೆ ಪದವಿ ಕಾಲೇಜುಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಕಮತಗಿ ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು.

    ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಆರ್‌ಟಿಪಿಸಿಆರ್ ತಪಾಸಣೆಯನ್ನು ನಡೆಸಿದರು. ಗ್ರಾಮೀಣ ಪದವಿ ಕಾಲೇಜಿನ 60 ಜನ ವಿದ್ಯಾರ್ಥಿಗಳು ಹಾಗೂ 13 ಜನರು ಸಿಬ್ಬಂದಿ ದ್ರವ ಸಂಗ್ರಹಿಸಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಲ್ಯಾಬ್‌ಗೆ ಕಳುಹಿಸಲಾಯಿತು. ವಾರದೊಳಗೆ ವರದಿ ಬರುತ್ತದೆ ಎಂದು ಸ್ಥಳೀಯ ಆರೋಗ್ಯ ಕೇಂದ್ರದ ಪ್ರಯೋಗಾಶಾಲೆ ತಂತ್ರಜ್ಞ ರಾಮಕೃಷ್ಣ ಎಸ್.ಭಾಪ್ರಿ ತಿಳಿಸಿದರು.

    ಗ್ರಾಮೀಣ ಪದವಿ ಕಾಲೇಜಿನ ಬಿಎ ವಿಭಾಗದ 60 ವಿದ್ಯಾರ್ಥಿಗಳು, ಬಿಕಾಂ ವಿಭಾಗದಲ್ಲಿ 50 ವಿದ್ಯಾರ್ಥಿಗಳು ಇದ್ದು, ಇದರಲ್ಲಿ ಬುಧವಾರ 60 ಜನ ವಿದ್ಯಾರ್ಥಿಗಳು ಕೋವಿಡ್ ತಪಾಸಣೆ ಒಳಗಾಗಿದ್ದಾರೆ. ಎರಡು ದಿನಗಳ ನಂತರ ಉಳಿದ ಎಲ್ಲ ವಿದ್ಯಾರ್ಥಿಗಳ ತಪಾಸಣೆ ಮಾಡಿಸಲಾಗುವುದು ಎಂದು ಪ್ರಾಚಾರ್ಯ ಪಿ.ಎಂ. ಗುರುವಿನಮಠ ತಿಳಿಸಿದ್ದಾರೆ.

    ಕಿರಿಯ ಆರೋಗ್ಯ ಸಹಾಯಕರಾದ ಸಂತೋಷ ಗುಳೇದಗುಡ್ಡ, ಆರ್.ಎಂ. ಜಮಖಂಡಿ, ಶಂಕರ ಕೊಣ್ಣೂರ, ರಾಘು ಹಡಪದ, ಉಪನ್ಯಾಸಕರಾದ ಡಾ.ಸಂಗಮೇಶ ಗಣಿ, ಡಿ.ಬಿ. ಕುಬಸದ, ಕೆ.ಎಸ್. ಭಜಂತ್ರಿ, ಎಚ್.ಎಂ.ಪಾಟೀಲ, ಗುರು ಪಾಟೀಲ, ವಿಶ್ವನಾಥ ಅಳ್ಳಿಚಂಡಿ ಸೇರಿ ಅನೇಕರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts