More

    ಚಿನ್ನಾಭರಣ ವ್ಯಾಪಾರದ ವಿಶ್ವಾಸಾರ್ಹ ಸಂಸ್ಥೆ

    ಬಾಗಲಕೋಟೆ: ನಗರದ ಪ್ರತಿಷ್ಠಿತ ಶೀಲವಂತ ಆ್ಯಂಡ್ ಸನ್ಸ್ ಸಂಸ್ಥೆಯು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ತಾವು ಇಚ್ಛಿಸುವ ಚಿನ್ನಾಭರಣ ಖರೀದಿಸುವ ಸಲುವಾಗಿ ಹೊಸದಾಗಿ ಜಾರಿಗೆ ತಂದಿರುವ ಸ್ವರ್ಣ ಲಕ್ಷ್ಮೀ ಯೋಜನೆಯ ಅಪ್ಲಿಕೇಷನ್‌ಗೆ ಸೋಮವಾರ ಬಾಗಲಕೋಟೆ ಹಾಗೂ ವಿಜಯಪುರ ಐಸಿಐಸಿ ಶಾಖೆಗಳ ಪ್ರಾದೇಶಿಕ ಮುಖ್ಯಸ್ಥ ರಾಜು ಎಸ್. ಇಂದರಗಿ ಸೋಮವಾರ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಿನ್ನಾಭರಣ ವ್ಯಾಪಾರದಲ್ಲಿ ಶೀಲವಂತ ಸಂಸ್ಥೆಯು ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಯಶಸ್ಸು ಕಂಡಿದೆ. ಗುಣಮಟ್ಟದ ಚಿನ್ನದ ವಹಿವಾಟಿನ ಮೂಲಕ ಮೈಲುಗಲ್ಲು ಸ್ಥಾಪಿಸಿದೆ. ಅಲ್ಲದೆ, ಕಂತುಗಳ ಮೂಲಕ ಚಿನ್ನಾಭರಣ ನೀಡುವ ಯೋಜನೆ ಜಾರಿಗೆ ತಂದಿದ್ದು, ಎಲ್ಲ ವರ್ಗದ ಜನರಿಗೆ ಇದರಿಂದ ಅನುಕೂಲವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲೀಕರಣಕ್ಕೆ ಒತ್ತು ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಶೀಲವಂತ ಸಂಸ್ಥೆ ಸಿದ್ಧವಾಗಿರುವುದು ಸಂತೋಷದಾಯಕ ಸಂಗತಿ ಎಂದರು.

    ಕಾರ್ಯಕ್ರಮದಲ್ಲಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ವಿ ಶೀಲವಂತ ಸ್ವರ್ಣ ಲಕ್ಷ್ಮೀ ಯೋಜನೆ ಹಾಗೂ ಅಪ್ಲಿಕೇಷನ್ ಬೆಳವಣಿಗೆ ನಡೆದು ಬಂದ ದಾರಿ ಕುರಿತು ಮಾತನಾಡಿದರು. ಮಾಜಿ ಶಾಸಕ, ಶೀಲವಂತ ಆ್ಯಂಡ್ ಸನ್ಸ್ ಸಂಸ್ಥೆ ನಿರ್ದೇಶಕ ರಾಜಶೇಖರ ವಿ ಶೀಲವಂತ, ಬಿಎಸ್‌ಎನ್‌ಎಲ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ರೇವಣಪ್ಪ ಕಾಯಿ, ಸಂಸ್ಥೆ ನಿರ್ದೇಶಕ ನವೀನಕುಮಾರ ಶೀಲವಂತ, ಶಿಲ್ಪಾ ರಾಜಶೇಖರ ಶೀಲವಂತ, ದೀಪಾ ಮಲ್ಲಿಕಾರ್ಜುನ ಶೀಲವಂತ, ವಿಜಯಲಕ್ಷ್ಮೀ ಶೀಲವಂತ, ಆಡಳಿತ ಅಧಿಕಾರಿ ವಿಶ್ವನಾಥ ಸಣ್ಣಕಾಶಪ್ಪನವರ ಹಾಗೂ ಎಲ್ಲ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರಾಜು ಕಮತರ ಪರಿಚಯಿಸಿದರು. ಸಾಗರ ರಾಜಶೇಖರ ಶೀಲವಂತ ವಂದಿಸಿದರು. ಸೌಮ್ಯ ಗಾರವಾಡಮಠ ನಿರೂಪಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts