More

    ಮರು ಸಮೀಕ್ಷೆ ಒಟ್ಟು 4779 ಮನೆ ಹಾನಿ ವರದಿ

    ಬಾಗಲಕೋಟೆ: ಘಟಪ್ರಭಾ ನದಿಯ ಪ್ರವಾಹದಿಂದ ಮುಧೋಳ ತಾಲೂಕಾ ವ್ಯಾಪ್ತಿಯಲ್ಲಿ ಹಾನಿಗೊಳಗಾದ ಮನೆಗಳ ಮರು ಸಮೀಕ್ಷೆ ಕೈಗೊಳ್ಳುವಂತೆ ವಿವಿಧ ಗ್ರಾಮಸ್ಥರು ದೂರು ನೀಡಿದ ಹಿನ್ನಲೆಯಲ್ಲಿ ಮೂರು ಬಾರಿ ಸಮೀಕ್ಷೆ ಕೈಗೊಂಡ ನಂತರ ಒಟ್ಟು 4779 ಮನೆಗಳು ಹಾನಿಗೊಳಗಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಪ್ರವಾಹದಿಂದ ಒಟ್ಟು 36 ಗ್ರಾಮಗಳು ಜಾಲವೃತ್ತಗೊಂಡಿದ್ದವು. ಇದರಿಂದ ಹಾನಿಯಾದ ಮನೆಗಳ ಸಮೀಕ್ಷೆ ಕೈಗೊಳ್ಳಲು ಪ್ರತಿ ಗ್ರಾಮಕ್ಕೆ ಒಬ್ಬ ನೊಡಲ್ ಅಧಿಕಾರಿ, ಇಬ್ಬರು ಇಂಜಿನಿಯರ್, ಗ್ರಾ.ಪಂ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡ ತಂಡ ನೇಮಿಸಲಾಗಿತ್ತು. ಈ ತಂಡವು ತಹಸೀಲ್ದಾರರ ಕಾರ್ಯಕ್ಕೆ ದಾಖಲೆಗಳೊಂದಿಗೆ ವರದಿ ಸಲ್ಲಿಸಿತ್ತು.
    ಸಮೀಕ್ಷೆ ತಂಡವು ಸಲ್ಲಿಸಿದ ವರದಿ ಆಧಾರ ಮೇಲೆ ರಾಜೀವ್ ಗಾಂಧಿ ವಸತಿ ನಿಗಮದ ವೈಬ್‌ಸೈಟ್‌ನಲ್ಲಿ ಲಾನುಭವಿಗಳ ವಿವರಗಳನ್ನು ವರ್ಗವಾರು ದಾಖಲು ಮಾಡಲು ಕ್ರಮವಹಿಸಲಾಗಿದೆ. ಒಟ್ಟು 5303 ಮನೆಗಳು ಹಾನಿಯಾದ ಬಗ್ಗೆ ವರದಿ ಸಲ್ಲಿಸಿದ್ದು, ಅದರಲ್ಲಿ 2140 ಮನೆಗಳು ಶೇಕಡಾ 25 ಕಿಂತ ಕಡಿಮೆ ಹಾನಿಯಾದ ಮನೆಗಳಾಗಿದ್ದು ಇರುತ್ತದೆ. ಉಳಿದಂತೆ ಆರ್.ಜಿ.ಎಚ್.ಸಿ.ಎಲ್ ವೆಬ್‌ಸೈಟ್‌ದಲ್ಲಿ 3163 ಮನೆಗಳು ದಾಖಲಿಸಾಗಿತ್ತು.

    ಹೆಬ್ಬಾಳ, ಬುದ್ನಿ ಬಿ.ಕೆ, ಇಂಗಳಗಿ, ಬಿದರಿ, ಗುಲಗಾಲಜಂಬಗಿ, ಚಿಕ್ಕೂರು, ಮಾಚಕನೂರು, ಮಳಲಿ, ಬಂಟನೂರ ಸೇರಿದಂತೆ ವಿವಿಧ ಗ್ರಾಮಸ್ಥರು ಮರು ಸಮೀಕ್ಷೆಯನ್ನು ನಡೆಸುವಂತೆ ಮನವಿ ಮಾಡಿದ್ದರು. ಸೆಪ್ಟೆಂಬರ 15 ರಂದು ಬಾಗಲಕೋಟೆ ಇಂಜಿನಿಯರಿಂಗ್ ಕಾಲೇಜುಗಳ ತ್ರಾಂತಿಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಪುನಃ ಸಮೀಕ್ಷೆ ಕೈಗೊಳ್ಳುವಂತೆ ತಂಡವನ್ನು ರಚಿಸಿ ಮರು ಸಮೀಕ್ಷೆ ಮಾಡಲಾಗಿತ್ತಯ, ಈ ತಂಡ ಕೈಗೊಂಡ ವರದಿ ಆಧಾರ ಮೇಲೆ ಅನರ್ಹ ಲಾನುಭವಿಗಳನ್ನು ಕೈಬಿಟ್ಟು ಅರ್ಹ ಲಾನುಭವಿಗಳಿಗೆ ಪರಿಹಾರ ದೊರಕುವಂತೆ ಕ್ರಮ ಕೈಗೊಳಲಾಗಿದೆ ಎಂದು ತಿಳಿಸಿದ್ದಾರೆ.

    ಒಟ್ಟಾರೆಯಾಗಿ ಮನೆಗಳ ಸಮೀಕ್ಷೆಯನ್ನು ಆಗಸ್ಟ 19, ಸೆಪ್ಟೆಂಬರ 15, 18, 20 ಹಾಗೂ ನವೆಂಬರ 2 ರಂದು ಹೀಗೆ ಹಲವು ಬಾರಿ ಮನೆಗಳು ಹಾನಿಯಾದ ಬಗ್ಗೆ ಸಮೀಕ್ಷೆ ಹಾಗೂ ಮರು ಸಮೀಕ್ಷೆ ಕಾರ್ಯವನ್ನು ಕೈಗೊಂಡು ವೆಬ್‌ಸೈಟ್‌ನಲ್ಲಿ ದಾಖಲಿಸಲಾಗಿದೆ. ಒಟ್ಟಾರೆಯಾಗಿ 4779 ಹಾನಿಯಾದ ಮನೆಗಳು ಎಂದು ವರದಿಯಾಗಿದ್ದು, ಅದರಲ್ಲಿ ಶೇ.15 ರಿಂದ 25 ವರೆಗೆ ಹಾನಿಯಾದ 3105 ಮನೆಗಳು, ಶೇ.25 ರಿಂದ 75 ವರೆಗೆ ಹಾನಿಯಾದ 1303 ಮನೆಗಳು ಹಾಗೂ ಶೇ.75ಕ್ಕಿಂತ ಹೆಚ್ಚಿಗೆ ಹಾನಿಯಾದ 371 ಮನೆಗಳನ್ನು ದಾಖಲಿಸಲಾಗಿದೆ. ಮೊದಲ ಹಂತದ ಸರ್ವೇ ಕಾರ್ಯ ಹಾಗೂ 2 ಹಂತದ ಸರ್ವೇಕಾರ್ಯದಲ್ಲಿ ಒಟ್ಟು 1616 ಮನೆಗಳು ಹೆಚ್ಚಾಗಿ ಹಾನಿಯಾಗಿರುವದನ್ನು ಗುರುತಿಸಿ ದಾಖಲು ಮಾಡಲಾಗಿದೆ. ಮುಧೋಳ ತಾಲೂಕಿನ 3105 ಮನೆಗಳು ಶೇ.15 ರಿಂದ 25 ಸಿ ವರ್ಗದ ಮನೆಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ವಿತರಿಸಲಾಗಿದೆ. ಉಳಿದಂತೆ ಎ ಮತ್ತು ಬಿ ಮಾದರಿ ಮನೆಗಳಿಗೆ ಸರ್ಕಾರದಿಂದ ನೇರವಾಗಿ ಸಂತ್ರಸ್ತರ ಖಾತೆಗಳಿಗೆ ಪರಿಹಾರ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts