More

    ರೆಡ್‌ಕ್ರಾಸ್ ಸಂಸ್ಥೆಗೆ ಉತ್ತಮ ಕಾರ್ಯ ಪ್ರಶಸ್ತಿ

    ಬಾಗಲಕೋಟೆ: ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಹಾಗೂ ಸಂತ್ರಸ್ತರ ನೋವಿಗೆ ಸ್ಪಂದಿಸಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿ ಉತ್ತಮವಾಗಿ ಕಾರ್ಯನಿರ್ವಹಿಸಿದ ರೆಡ್‌ಕ್ರಾಸ್ ಸಂಸ್ಥೆಗೆ ರಾಜ್ಯಪಾಲ ವಜುಭಾಯಿ ವಾಲಾ ಬೆಂಗಳೂರಿನ ರಾಜಭವನದಲ್ಲಿ ಭಾನುವಾರ ಉತ್ತಮ ಕಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

    ರೆಡ್‌ಕ್ರಾಸ್ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಶಾಖೆಯ ಅಧ್ಯಕ್ಷ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಪ್ರಶಸ್ತಿ ಸ್ವೀಕರಿಸಿದರು. ಜಿಲ್ಲಾ ಚೇರ್ಮನ್ ಆನಂದ ಜಿಗಜಿನ್ನಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂಗಮೇಶ ವೈಜಾಪುರ, ಎಂ.ಬಿ.ಬಳ್ಳಾರಿ, ಕಾರ್ಯದರ್ಶಿ ವೀರಣ್ಣ ಅಥಣಿ, ವಿನೋದ ಜಿಗಜಿನ್ನಿ ಇದ್ದರು.

    ಸಂತ್ರಸ್ತರಿಗಾಗಿ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ, ಐಬಿಎಂ ಮೆಸೆಂಜರ್, ಪೀಣ್ಯ ಇಂಡಸ್ಟ್ರೀಯಲ್ ಎಸ್ಟೇಟ್‌ನ ಜಿಮ್‌ಖಾನ್ ಕ್ಲಬ್, ವಂಡರ್ಸ್ ಕ್ಲಬ್ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ವಿವಿಧ ಸಂಘ ಸಂಸ್ಥೆಗಳು ನೀಡಿದ ವಸ್ತುಗಳನ್ನು ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕವು 46 ದಿನಗಳ ಕಾಲ ಪ್ರವಾಹ ಪೀಡಿತ 48 ಗ್ರಾಮಗಳ ಪರಿಹಾರ ಕೇಂದ್ರಗಳಿಗೆ ಭೇಟಿ ವಿತರಣೆ ಮಾಡಿದೆ.

    ಅಲ್ಲದೆ, ನವದೆಹಲಿಯ 2 ಕ್ರಾಸ್ ಸಂಸ್ಥೆಯ ಕೇಂದ್ರ ಘಟಕದಿಂದ ಅಂದಾಜು 50 ಲಕ್ಷ ರೂ.ವೆಚ್ಚದ ಎರಡು ನೂರು ಕುಟುಂಬಗಳಿಗೆ ಟೆಂಟ್‌ಗಳನ್ನು, ಜಮಖಂಡಿ ಮತ್ತು ಬಾದಾಮಿ ತಾಲೂಕಿನಲ್ಲಿ 48 ಲೈಫ್ ಜಾಕೆಟ್‌ಗಳನ್ನು ವಿತರಿಸಿದೆ. ಇನ್ನು ಮಂಗಳೂರಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 40 ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಾಗ ಪ್ರವಾಹದಲ್ಲಿ ಸಿಲುಕಿದ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕರ್ತರು ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಮಂಗಳೂರಿಗೆ ತಲುಪಿಸುವ ಕಾರ್ಯ ಸ್ಮರಣೀಯ ಕಾರ್ಯ ಮಾಡಿತ್ತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts