More

    ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಅತ್ಯವಶ್ಯಕ

    ಬಾಗಲಕೋಟೆ: ಇಂದಿನ ಶಿಕ್ಷಣಕ್ಕೆ ತಂತ್ರಜ್ಞಾನ ಅತ್ಯಂತ ಅವಶ್ಯಕವಾಗಿದೆ. ಇದರಿಂದ ನಮ್ಮ ಬೆಳವಣಿಗೆ ಜತೆಗೆ ಸಂಸ್ಥೆಯ ಅಭಿವೃದ್ಧಿಗೂ ಪೂರಕವಾಗುತ್ತದೆ. ಕೋವಿಡ್ ಸಮಯದಲ್ಲಿ ಹೆಚ್ಚು ಸಹಕಾರಿಯಾದ್ದು ತಂತ್ರಜ್ಞಾನ ಎಂದು ಅಕ್ಕ ಮಹಾದೇವಿ ವಿವಿಯ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.

    ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣದ ಗುಣಾತ್ಮಕತೆ ಅಭಿವೃದ್ಧಿ ಹಾಗೂ ಆಂತರಿಕ ಮೌಲ್ಯಮಾಪನದ ಉಪಕ್ರಮಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಉಪನ್ಯಾಸಕರು ತಮ್ಮ ಶೈಕ್ಷಣಿಕ ಬೆಳವಣಿಗೆಗಾಗಿ ಹೆಚ್ಚು-ಹೆಚ್ಚು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಇದರಿಂದ ನಮ್ಮ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಬಹುದು ಮತ್ತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಸಾಧ್ಯ. ಸಂಶೋಧನಾ ಲೇಖನಗಳನ್ನು ಮಂಡಿಸಬೇಕು. ಸಂಶೋಧನೆಯಿಂದ ವೈಚಾರಿಕತೆ ಅಭಿವೃದ್ಧಿಯಾಗುತ್ತದೆ. ಎಲ್ಲರೂ ಶಿಕ್ಷಕರಾಗಲೂ ಸಾಧ್ಯವಿಲ್ಲ. ನಮಗೆ ದೊರೆತ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

    ಕಲಿಕೆಯಲ್ಲಿ ಯಾವತ್ತು ತೃಪ್ತಿ ಇರಬಾರದು ಕಲಿತಷ್ಟು ಇನ್ನೂ ಕಲಿಯಬೇಕು ಎಂಬ ಹಂಬಲ ಇರಬೇಕು. ಕೋವಿಡ್ ಋಣಾತ್ಮಕ ಪರಿಣಾಮ ಬೀರಿದ್ದರೂ ಇನ್ನೊಂದೆಡೆ ಸಕಾರಾತ್ಮಕ ಪರಿಣಾಮ ಬೀರಿದೆ. ಶಿಕ್ಷಕರು ತಂತ್ರಜ್ಞಾನ ಅಳವಡಿಸಿಕೊಂಡು ಬೋಧನೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

    ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಎಸ್. ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಂ.ಎಂ. ಹಿರೇಮಠ ವಂದಿಸಿದರು. ಪ್ರೊ.ಎಸ್.ಎಸ್. ಸರಡಗಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts