More

    ವಾಣಿಜ್ಯ ಚಟುವಟಿಕೆಗೆ ಉತ್ತೇಜನ

    ಬಾಗಲಕೋಟೆ: ನಮ್ಮ ಭಾಗದಲ್ಲಿ ಉತ್ಪಾದನೆಯಾಗುವ ಯಾವುದೇ ರೀತಿಯ ವಸ್ತುವಿರಲಿ ಬೇರೆಡೆ ಅವುಗಳನ್ನು ರಫ್ತು ಮಾಡುವ ಕೆಲಸವಾಗಬೇಕು. ಗುಣಮಟ್ಟ ಕಾಯ್ದುಕೊಂಡು ರಫ್ತು ಮಾಡಲು ಉತ್ತೇಜನ ನೀಡುವ ಮೂಲಕ ವಾಣಿಜ್ಯ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ಕೆಲಸವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.

    ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೈಗಾರಿಕೆ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾಣಿಜ್ಯ ಸಪ್ತಾಹ, ರಫ್ತುದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ನಮ್ಮದು ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಕಾರ್ಖಾನೆಗಳಿಗೆ ಬೇಕಾದ ಕಚ್ಚಾವಸ್ತುಗಳು ಪೂರೈಕೆಯಾಗಿ ಸಿದ್ಧ ವಸ್ತುಗಳು ತಯಾರಾಗುತ್ತವೆ. ವಾಣಿಜ್ಯ ಚಟುವಟಿಕೆ ಹೆಚ್ಚಾದಾಗ ಮಾತ್ರ ಬೇರೆಡೆ ರಫ್ತು ಮಾಡಲು ಸಾಧ್ಯವಾಗುತ್ತದೆ. ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಗೆ ಸಮಾವೇಶಗಳು ಅಗತ್ಯವಾಗಿವೆ. ಇದರಿಂದ ರಫ್ತು ಉದ್ಯಮಿದಾರರಿಗೆ ಉತ್ತೇಜನ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಸಹಕಾರಿಯಾಗುತ್ತದೆ ಎಂದರು.

    ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ದೇಶದ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಮೃತ ಮಹೋತ್ಸವ ಅಂಗವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿಯೂ 13 ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಕೈಗಾರಿಕೆ ಸಚಿವರು ನಮ್ಮ ಭಾಗದವರಾಗಿರುವುದರಿಂದ ರಫ್ತುದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ರಫ್ತ್ತು ಉದ್ಯಮಿಗಳು ಸಮಾವೇಶದ ಸದುಪಯೋಗ ಪಡೆದು ಜಿಲ್ಲೆಯ ಆರ್ಥಿಕ ಪ್ರಗತಿ ಹೆಚ್ಚಿಸಲು ತಿಳಿಸಿದರು.

    ಜಿಲ್ಲಾ ಅಗ್ರಣೀಯ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಡಿ.ಗೋಪಾಲರೆಡ್ಡಿ ಮಾತನಾಡಿ, ರಫ್ತು ಉದ್ಯಮಿದಾರರಿಗೆ ಆತ್ಮ ನಿರ್ಭರ ಯೋಜನೆಯಡಿ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತಿದೆ. ಸಾಲದಲ್ಲಿ ಸಬ್ಸಿಡಿ ಸೌಲಭ್ಯ ಕೂಡ ಲಭ್ಯವಿದೆ. ಸಣ್ಣ ವಸ್ತುಗಳನ್ನು ಸಹ ರಫ್ತು ಮಾಡಬಹುದಾಗಿದೆ. ಇಳಕಲ್ಲ ಸೀರೆ, ಗುಳೇದಗುಡ್ಡದ ಕಣ, ಜೋಳದ ರೊಟ್ಟಿ ಸೇರಿ ಇತರ ವಸ್ತುಗಳನ್ನು ರಫ್ತು ಮಾಡಬಹುದಾಗಿದೆ ಎಂದು ತಿಳಿಸಿದರು.

    ಕೆವಿಜಿ ಬ್ಯಾಂಕ್ ರಿಜನಲ್ ಮ್ಯಾನೇಜರ್ ಶ್ರೀಧರ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 76 ಕೆವಿಜಿ ಬ್ಯಾಂಕ್‌ನ ಶಾಖೆಗಳಿದ್ದು, ಕೈಗಾರಿಕೆಗೆ ಸಂಬಂಧಿಸದ ಎಲ್ಲ ರೀತಿಯ ಸಾಲ ಸೌಲಭ್ಯಗಳನ್ನು ನಮ್ಮ ಬ್ಯಾಂಕ್‌ನಲ್ಲಿ ಇದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

    ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಂಗಾಧರ ಕೋರ್ಪಡೆ, ಜಿಲ್ಲಾ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಅರುಣ ಕಟ್ಟಿ, ಉಪನಿರ್ದೇಶಕ ಜಿ.ಎಸ್.ದೇಸಾಯಿ ಇತರರಿದ್ದರು.

    ಸಿದ್ಧ ವಸ್ತುಗಳ ತಯಾರಿಕೆಗೆ ತರಬೇತಿ ಅಗತ್ಯವಾಗಿದ್ದು, ನಮ್ಮಲ್ಲಿರುವ ಕಚ್ಚಾ ವಸ್ತುಗಳ ಮೇಲೆ ವಸ್ತುಗಳನ್ನು ತಯಾರಿಸುವ ಕುರಿತಂತೆ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಕೌಶಲಗಳನ್ನು ರೂಢಿಸಿಕೊಂಡು ಉತ್ಪಾದಕರಾಗಿ ಹೊರ ಹೊಮ್ಮಬೇಕು.
    ಶರಣಬಸವ ಹೂನೂರ ಬಿವಿವಿ ಸಂಘದ ಕೋಟೆಕ್ ಮಹೀಂದ್ರಾ ಬ್ಯಾಂಕ್ ಆರ್‌ಸೆಟಿ ಸಂಸ್ಥೆ ನಿರ್ದೇಶಕ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts