More

    ಡಿಸಿಸಿ ಬ್ಯಾಂಕ್ 5.10 ಕೋಟಿ ನಿವ್ವಳ ಲಾಭ

    ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಾಕಾರ ಬ್ಯಾಂಕ್‌ಗೆ 2019-20 ಸಾಲಿನಲ್ಲಿ 45.32 ಕೋಟಿ ರೂ. ಒಟ್ಟು ಲಾಭ ಗಳಿಸಿದೆ. ನಿಯಮಾನುಸಾರ ಆಧಾಯಕರ ಹಾಗೂ ಇತರೆ ಅವಶ್ಯಕ ಶಾಸನ ಬದ್ಧ ಅನುವು ಕಲ್ಪಿಸಿದ ಬಳಿಕ 5.10 ಕೋಟಿ ನಿವ್ವಳ ಲಾಭವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.

    2003 ರಲ್ಲಿ 10.45 ಕೋಟಿ ರೂ.ಗಳಿದ್ದ ಶೇರು ಬಂಡವಾಳ 31-3-2020 ಕ್ಕೆ 140.03 ಕೋಟಿ. ವೆರೆಗೆ ಏರಿಕೆಯಾಗಿದೆ. 25.67 ಕೋಟಿ ರೂ. ಇದ್ದ ನಿಧಿಗಳು 232.71 ಕೋಟಿ ರೂ.ವರೆಗೆ ಏರಿಕೆಯಾಗಿದೆ. 227.22 ಕೋಟಿ ರೂ. ಇದ್ದ ಠೇವುಗಳು 2508.98 ಕೋಟಿ ರೂ.ವರೆಗೆ ಹೆಚ್ಚಳವಾಗಿದೆ. 341.18 ಕೋಟಿ ರೂ. ಇದ್ದ ದುಡಿಯುವ ಬಂಡವಾಳ ಇದೀಗ 3834.52 ಕೋಟಿ ರೂ.ವರೆಗೆ ಹೆಚ್ಚಳವಾಗಿದೆ. 884.79 ಕೋಟಿ ರೂ. ಸಾಲ ಪಡೆಯಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    2606.89 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಇದರಲ್ಲಿ ಕೃಷಿಗೆ 1263.20 ಕೋಟಿ ರೂ., ಕೃಷಿಯೇತರವಾಗಿ 1343.69 ಕೋಟಿ ರೂ.ಸಾಲ ನೀಡಲಾಗಿದೆ. 823.64 ಕೋಟಿ ರೂ.ಗಳನ್ನು ಸರ್ಕಾರ ಮತ್ತು ಸೂಚಿತ ಸಂಸ್ಥೆಗಳಲ್ಲಿ ವಿವೇಕಯಕ್ತವಾಗಿ ವಿನಿಯೋಗಿಸಲಾಗಿದೆ. ಅದರಂತೆ 3834.52 ಕೋಟಿ ರೂ.ದುಡಿಯುವ ಬಂಡವಾಳದೊಂದಿಗೆ ಸದೃಡ ಆರ್ಥಿಕತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

    ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2003 ರಲ್ಲಿ ವಿಭಜನೆಗೊಂಡು ಪ್ರತ್ಯೇಕವಾಯಿತು. ಅಂದಿನಿಂದ ಇಂದಿನ ವರೆಗೆ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಆರಂಭದಲ್ಲಿ 29 ಶಾಖೆಗಳನ್ನು ಹೊಂದಿದ್ದ ಬ್ಯಾಂಕ್ ಇದೀಗ 47 ಶಾಖೆಗಳಿಗೆ ವಿಸ್ತರಣೆಯಾಗಿದೆ. ಬ್ಯಾಂಕ್ 250343 ರೈತರಿಗೆ 1133.40 ಕೋಟಿ ರೂ. ಬೆಳೆ ಸಾಲ ನೀಡಿದೆ. ಹಾಗೆಯೇ 884 ರೈತರಿಗೆ ಪೈಪ್‌ಲೈನ್, ಪಂಪಸೆಟ್, ಹೈನುಗಾರಿಕೆ, ಕುರಿ ಸಾಗಾಣಿಕೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ 57.41 ಕೋಟಿ ರೂ. ಮಾಧ್ಯಮಿಕ ಕೃಷಿ ಸಾಲ ನೀಡಲಾಗಿದೆ. ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಔದ್ಯೋಗಿಕ ಘಟಕಗಳಿಗೆ ಸಮೂಹ ಪಾಲುದಾರ ಬ್ಯಾಂಕುಗಳ ಯೋಜನೆ ಅಡಿಯಲ್ಲಿ 1140.43 ಕೋಟಿ ರೂ. ಸಾಲ ನೀಡಲಾಗಿದೆ. ನೇಕಾರಿಕೆ ಉದ್ಯೋಗಕ್ಕಾಗಿ 5.45 ಕೋಟಿ ರೂ.ಮಾಧ್ಯಮಿಕ ಹಾಗೂ ದುಡಿಯುವ ಬಂಡವಾಳ ಸಾಲ ನೀಡಲಾಗಿದೆ ಎಂದರು.

    ರಾಜ್ಯ ಸರ್ಕಾರದ ಆರ್ಥಿಕ ಸ್ಪಂದನಾ, ಕಾಯಕ ಯೋಜನೆ, ಪಶು ಸಂಗೋಪನೆ ಅಭಿವೃದ್ಧಿ, ಬಡವರ ಬಂಧು, ಮೀನುಗಾರಿಕೆ ಚುಟವಟಿಕೆ ಉದ್ದೇಶಕ್ಕಾಗಿ ಹಾಗೂ ಕಾಯಕ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕಾಯಕ ಯೋಜನೆ ಅಡಿ 28 ಸಂಘಗಳಿಗೆ 84 ಲಕ್ಷ ರೂ., ಬಡವರ ಬಂಧು ಯೋಜನೆಯಡಿ 122 ಫಲಾನುಭವಿಗಳಿಗೆ 11.78 ಲಕ್ಷ ರೂ.ಸಾಲ ಒದಗಿಸಲಾಗಿದೆ. ಪಶು ಸಂಗೋಪನೆ ಅಭಿವೃದ್ಧಿ, ಮೀನುಗಾರಿಕೆ ಚಟುವಟಿಕೆ ಉದ್ದೇಶಕ್ಕಾಗಿ 3049 ರೈತರಿಗೆ 890.00 ಲಕ್ಷ ರೂ. ಸಾಲ ವಿತರಿಸಲಾಗಿದೆ. ಸಂಘಗಳ ಮೂಲ ಸೌಲಭ್ಯಕ್ಕಾಗಿ ಕಚೇರಿ ಕಟ್ಟಡ ನಿರ್ಮಾಣ ಹಾಗೂ ಉಗ್ರಾಣ ನಿರ್ಮಾಣಕ್ಕಾಗಿ ಗರಿಷ್ಠ 2 ಲಕ್ಷ ರೂ., ಅನುದಾನ ನೀಡುತ್ತಿದ್ದು, ಇಲ್ಲಿಯವರೆಗೆ 176 ಸಂಘಗಳಿಗೆ 278 ಲಕ್ಷ ರೂ. ಸಹಾಯಧನ ಒದಗಿಸಲಾಗಿದೆ ಎಂದು ಹೇಳಿದರು.

    ಇನ್ನು ರಾಜ್ಯ ಸರ್ಕಾರ 1 ಲಕ್ಷ ರೂ.ವರೆಗೆ ರೈತರ ಬೆಳೆ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಜಿಲ್ಲೆಯ ಒಟ್ಟು 140732 ರೈತರ 759.98 ಕೋಟಿ ರೂ. ಸಾಲ ಮನ್ನಾ ವ್ಯಾಪ್ತಿಗೆ ಬರುತ್ತದೆ. ಈ ಪೈಕಿ 120805 ರೈತರಿಗೆ 642.79 ಕೋಟಿ ರೂ. ಸರ್ಕಾರದಿಂದ ಸಾಲಮನ್ನಾ ಯೋಜನೆ ಅಡಿಯಲ್ಲಿ ಹಣ ಬಿಡುಗಡೆಯಾಗಿದೆ. ಇನ್ನು 19927 ರೈತರಿಗೆ 117.19 ಕೋಟಿ ರೂ. ಸರ್ಕಾರದಿಂದ ಬಾಕಿಯಿದೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಬ್ಯಾಂಕಿನ ನಿರ್ದೇಶಕ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಬಾದಾಮಿ ಶುಗರ್ಸ್‌, ವಿಜಯಪುರ ಜಿಲ್ಲೆಯ ಮನಾಲಿ ಶುಗರ್ಸ್‌ ತಲಾ 20 ಕೋಟಿ ರೂ. ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದುಕೊಂಡಿದ್ದು, ಅವುಗಳು ಕಟಬಾಕಿಯಾಗಿವೆ. ಬಾದಾಮಿ ಶುಗರ್ಸ್‌ ಬೇರೆದವರು ಖರೀದಿ ಮಾಡಿದ್ದಾರೆ. ಹೀಗಾಗಿ ವಸೂಲಾತಿಗೆ ನ್ಯಾಯಾಲಯದ ಮೊರೆ ಹೋಗಿದ್ದು, ಈಗಾಗಲೇ 4 ಕೋಟಿ ಸಾಲ ಮರು ಪಾವತಿಯಾಗಿದೆ. ಉಳಿದ ಬಾಕಿ ಸಾಲ ವಸೂಲಾತಿಗೆ ಕ್ರಮ ತೆಗೆದುಕೊಳ್ಳಲಾಗುವುದು. ಕೈಗಾರಿಕೆಗಳು ಸಾಲ ನೀಡುವ ವಿಷಯದಲ್ಲಿ ನಿಯಮವಾಳಿಗಳನ್ನು ಮೀರಿಲ್ಲ. ರನ್ನ ಶುಗರ್ಸ್‌ನವರು 2019 ಡಿಸೆಂಬರ್ ವರೆಗೆ ನಿಯಮಿತವಾಗಿ ಸಾಲ ಮರು ಪಾವತಿ ಮಾಡಿದ್ದಾರೆ. ಇನ್ನು ಕೈಗಾರಿಕೆಗಳಿಗೆ ಸಾಲ ನೀಡುವಾಗ ವಿಜಯಾನಂದ ಕಾಶಪ್ಪನವರ ಕೂಡಾ ನಿರ್ದೇಶಕರಾಗಿದ್ದರು.
    – ಅಜಯಕುಮಾರ ಸರನಾಯಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts