More

    ಬಾಗಲಕೋಟೆ ಜಿಲ್ಲೆಯ ಡಿಎಪಿಸಿಯು, ಐಸಿಟಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ

    ಬಾಗಲಕೋಟೆ: ಬಾಗಲಕೋಟೆಯ ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ಹಾಗೂ ಜಮಖಂಡಿ ಉಪವಿಭಾಗೀಯ ಆಸ್ಪತ್ರೆಯ ಐಸಿಟಿಸಿ ಕೇಂದ್ರ ರಾಜ್ಯ ಮಟ್ಟದಲ್ಲಿ ನಡೆಯುವ ವಿಶ್ವ ಏಡ್ಸ್ ದಿನಾಚರಣೆ-2020 ಸನ್ಮಾನಕ್ಕೆ ಆಯ್ಕೆಯಾಗಿವೆ.

    ಕಳೆದ ಸಾಲಿನಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿರುವವರನ್ನು ವಿಶ್ವ ಏಡ್ಸ್ ದಿನಾಚರಣೆ ಸಮಾರಂಭದಲ್ಲಿ ಸನ್ಮಾನಿಸಲು ವಿವಿಧ ವಿಭಾಗಗಳಿಂದ ಕಾರ್ಯನಿರ್ವಹಣೆ ಬಗ್ಗೆ ವಿವರ ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆ ಉತ್ತಮ ಕಾರ್ಯನಿರ್ವಹಣೆ ಮತ್ತು ಮೂಲ ಸೌಕರ್ಯ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ಆಯ್ಕೆಯಾಗಿದೆ. ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳ ವಿಭಾಗದಲ್ಲಿ ಜಮಖಂಡಿ ಉಪವಿಭಾಗೀಯ ಆಸ್ಪತ್ರೆಯಲ್ಲಿರುವ ಐಸಿಟಿಸಿ ಕೇಂದ್ರ ಆಯ್ಕೆಯಾಗಿದೆ.

    ರಾಜ್ಯ ಮಟ್ಟದ ಸನ್ಮಾನಕ್ಕೆ ಆಯ್ಕೆಯಾದ ಬಾಗಲಕೋಟೆ ಡಿಎಪಿಸಿಯು ಮತ್ತು ಜಮಖಂಡಿ ಐಸಿಟಿಸಿ ಕೇಂದ್ರದ ಉತ್ತಮ ಸಾಧನೆಗೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts