More

    ಆಂದೋಲನ ರೂಪದಲ್ಲಿ ಸೌಲಭ್ಯ ವಿತರಣೆ

    ಬಾಗಲಕೋಟೆ: ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ತರಲು ಪ್ರತಿ ವರ್ಷ ಆಂದೋಲನ ರೂಪದಲ್ಲಿ ಸೌಲಭ್ಯ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದೊಂದು ವರ್ಷ ಒಂದೊಂದು ರೀತಿಯಲ್ಲಿ ಅಂಗವಿಕಲರಿಗೆ ಸರ್ಕಾರ ರೂಪಿಸಿರುವ ಸೌಲಭ್ಯಗಳನ್ನು ಒದಗಿಸಿಕೊಟ್ಟು ಸಮಾಜದ ಮುಖ್ಯವಾಹಿನಿಗೆ ಬರುದಂತೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

    ಹಲವಾರು ಅಂಗವಿಕಲರು ಸಾಧನೆಗೈದಿದ್ದಾರೆ. ತಮ್ಮ ಮಕ್ಕಳನ್ನು ಸಾಮಾಜಿಕವಾಗಿ ಮುಂಚೂಣಿಯಲ್ಲಿ ತರುವ ಕೆಲಸ ಪಾಲಕರದ್ದಾಗಿದೆ. ಸರ್ಕಾರಿಂದ ಅಂಗವಿಕಲ ಸಾಕಷ್ಟು ಸೌಲಭ್ಯಗಳು ಇದ್ದು, ಅವುಗಳ ಸದುಯೋಗ ಪಡಿಸಿಕೊಂಡು ಅಂಗವಿಕಲತೆಹೊಂದಿದ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಇತರರಂತೆ ತಾವು ಬದುಕುವಂತೆ ಅವರ ಬದುಕನ್ನು ರೂಪಿಸಲು ಮುಂದಾಗಬೇಕು ಎಂದರು.

    ಜಿಲ್ಲಾ ಪಂಚಾಯತ ಸಿಇಒ ಟಿ.ಭೂಬಾಲನ್ ಮಾತನಾಡಿ, ಗ್ರಾಮೀಣ ಭಾಗದ ಅಂಗವಿಕಲರಿಗೆ ನರೇಗಾದಡಿ ಜಾಬ್ ಕಾರ್ಡ್ ನೀಡುವ ಮೂಲಕ ಅವರಿಂದ ಸಾಧ್ಯವಾಗಬಹುದಾದ ಕಾರ್ಯಗಳನ್ನು ಮಾಡಿಸಲಾಗುತ್ತಿದೆ. ಶಾಲಾ ಕಾಲೇಜು ಆವರಣದಲ್ಲಿ ಕಿಚನ್ ಗಾರ್ಡನ್ ಕೈತೋಟ ನಿರ್ಮಾಣದಂತಹ ಕೆಲಸಗಳಲ್ಲಿ ಅಂಗವಿಕಲರು ತೊಡಗಿಸಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೂಪಿಸಿರುವ ಯೋಜನೆಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ಅಂಗವಿಕಲರಿಗೆ ಶೇ.3 ರಿಂದ 5 ರಷ್ಟು ಅನುದಾನ ಮೀಸಲಿರಿಸಲಾಗುತ್ತಿದೆ. ಈ ಅನುದಾನದಡಿ ಅಂಗವಿಕಲರ ಅಭಿವೃದ್ಧಿಗೆ ಪೂರಕವಾಗ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಮಾತನಾಡಿ, ಭಾರತ ದೇಶವು ವಿಶ್ವದಲ್ಲೇ ವಿವಿಧತೆಯಲ್ಲಿ ಏಕತೆಯನ್ನು ತೋರಿಸಿದ್ದು, 2011ರ ಸಮೀಕ್ಷೆಯ ಪ್ರಕಾರ ಭಾರತ ದೇಶದ ಒಟ್ಟು ಜನಸಂಖ್ಯೆ 121.80 ಕೋಟಿ ಇದ್ದು, ಅದರಲ್ಲಿ ವಿಕಲಚೇತನರು ಒಟ್ಟು 2.86 ಕೋಟಿ, ರಾಜ್ಯದಲ್ಲಿ ಒಟ್ಟು 6.41 ಕೋಟಿ ಜನಸಂಖ್ಯೆಗೆ 13.24 ಲಕ್ಷ ಅಂಗವಿಕಲರು ಇದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 18.89 ಲಕ್ಷ ಜನರಲ್ಲಿ 42 ಸಾವಿರ ಅಂಗವಿಕಲರು ಇದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂಗಮೇಶ ಬೀರಗೊಂಡರ ಪ್ರಾರ್ಥಿಸಿ ವಂದಿಸಿದರು.

    ಅಂಗವಿಕಲರಿಗಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ಸೇವೆಯನ್ನು ಒದಗಿಸಲಾಗುತ್ತಿದೆ. ಈ ಸೇವೆ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿಯೂ ದೊರೆಯಲಿದೆ. ಡಿ.19 ರಂದು ಮೇಗಾ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು, ಇದರ ಪ್ರಯೋಜನ ಅಂಗವಿಕಲರು ಪಡೆದುಕೊಳ್ಳಬೇಕು.
    – ಹೇಮಲತಾ ಹುಲ್ಲೂರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

    ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿದವರಿಗೆ ಸನ್ಮಾನ
    ಎಂ.ಆರ್.ಡಬ್ಲೂ, ವಿ.ಆರ್.ಡಬ್ಲೂ, ಕ್ರೀಡಾ, ಸಂಗೀತ, ಶಿಕ್ಷಣ ಹಾಗೂ ಸಮಾಜ ಸೇವೆ ಸಲ್ಲಿಸಿದ ಅಂಗವಿಕಲರು ಹಾಗೂ ಸಂಸ್ಥೆಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಅಶೋಕ ಮುಳವಾಡ (ವಿ.ಆರ್.ಡಬ್ಲೂ), ಮಂಜುನಾಥ ಲೋಕಾಪುರ (ಸಮಾಜ ಸೇವೆ), ಅಶ್ಪಾಕ್ ಮೆಹಬೂಬಸಾಬ ಪೊಲೀಸ್ (ವಿ.ಆರ್.ಡಬ್ಲೂ), ರಾಜು ಕಕರೆಡ್ಡಿ (ಸಮಾಜ ಸೇವೆ), ಸಂಗಪ್ಪ ಕರಬಂದ (ಕ್ರೀಡೆ), ಯಮನಪ್ಪ ದೊಡ್ಡಗೌಡರ (ವಿ.ಆರ್.ಡಬ್ಲೂ), ಪರಮಾನಂದ ತಳೆವಾಡ (ಶಿಕ್ಷಣ), ಪರಶುರಾಮ ಉಪ್ಪಾರ (ಯುಆರ್.ಡಬ್ಲೂ) ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸುನಂದಾ ಹಿರೇಮಠ ಸನ್ಮಾನಿಸಲಾಯಿತು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts