More

    ಬಾಗಲಕೋಟೆಯಲ್ಲಿ ನವರಾತ್ರಿ ಉತ್ಸವಕ್ಕೆ ಸಂಭ್ರಮದ ತೆರೆ

    ಬಾಗಲಕೋಟೆ: ನಾಡ ಹಬ್ಬದ ದಸರಾ ಒಂಬತ್ತು ದಿನಗಳ ಕಾಲ ಆಚರಿಸುವ ನವರಾತ್ರಿ ಉತ್ಸವಕ್ಕೆ ಕೋಟೆನಾಡಲ್ಲಿ ಸಂಭ್ರಮದಿಂದ ತೆರೆ ಬಿದ್ದಿತು. ದೇವಸ್ಥಾನ, ಮಂದಿರ ಮತ್ತು ಆಚರಣೆ, ಪದ್ಧತಿ ಇರುವ ವಿವಿಧ ಮನೆ ಮನೆಗಳಲ್ಲಿ ಘಟಸ್ಥಾಪನೆ ಮಾಡಿ ಹಾಕಲಾಗಿದ್ದ ದೀಪಾರಾಧನೆಗೆ ಮಂಗಳ ಹಾಡಲಾಯಿತು.

    ಒಂಬತ್ತು ದಿನಗಳಕಾಲ ನವ ಶಕ್ತಿ ದೇವತೆಗಳ ಮೂರ್ತಿಗೆ, ಲಕ್ಷ್ಮೀ ವೆಂಕಟೇಶ್ವರ, ಲಕ್ಷ್ಮೀ ನರಸಿಂಹ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಅರಿಶಿನ ಕುಂಕುಮಾರ್ಚನೆ, ಅಭಿಷೇಕ, ಪಂಚಾಮೃತ ಅರ್ಪಣೆ ಮಾಡಿ ಸ್ತೋತ್ರಗಳನ್ನು ಪಠಿಸಲಾಯಿತು. ಪ್ರತಿ ನಿತ್ಯವು ಬೆಳಗ್ಗೆ ಮತ್ತು ಸಂಜೆ ಜಾಗಟೆ, ರಥೋತ್ಸವ ಮಂತ್ರಘೋಷಗಳು ಮೊಳಗಿದವು. ನೂರಾರು ಭಕ್ತರು ಉಪಾವಾಸ ವೃತ ಕೈಗೊಂಡು ಭಕ್ತಿ ಸಮರ್ಪಿಸಿದರು. ದೇವಸ್ಥಾನದಲ್ಲಿ ಸೇರಿ ಭಜನೆ, ಗೀತನಾದ, ವಾದ್ಯ ಗಳ ಸೇವೆ ಹಾಗೂ ನೃತ್ಯಗಳನ್ನು ಮಾಡಿದರು. ಜಿಲ್ಲೆಯಾದ್ಯಂತ ದಸರಾ ಸಡಗರ ಕಳೆಗಟ್ಟಿತ್ತು.

    ಇನ್ನು ಕೋವಿಡ್ ಹಿನ್ನಲೆಯಲ್ಲಿ ಅನ್ನ ಸಂತರ್ಪಣೆ, ಸಾಮೂಹಿಕ ಪೂಜೆಗೆ ರದ್ದುಗೊಳಿಸಲಾಗುತ್ತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡರು ಸಹ ಪರಸ್ಪರ ಅಂತರ್ ಮಾಯವಾಗಿತ್ತು. ಈ ಸಾರಿ ಬಾಗಲಕೋಟೆ ನಗರದ ಕಿಲ್ಲಾದಲ್ಲಿರುವ ಲವಂಗಿಮಠದ ಹತ್ತಿರ ಹಾಗೂ ಮಾರವಾಡಿಗಲ್ಲಿಯಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ, ಭವ್ಯ ಮೆರವಣಿಗೆ ರದ್ದುಪಡಿಸಲಾಗಿತ್ತು. ಆದರೇ ಸರಳವಾಗಿ ಒಂಬತ್ತು ದಿನಗಳ ಕಾಲ ಪೂಜಿಸಲಾಯಿತು.

    ಕೌಲಪೇಟ ಹಾಗೂ ವೆಂಕಟಪೇಟದಲ್ಲಿರುವ ವೆಂಕಟೇಶ್ವರ ದೇವಸ್ಥಾನ, ಕಿಲ್ಲಾ ಮತ್ತು ಎಂ.ಜಿ.ರೋಡನಲ್ಲಿರುವ ಅಂಬಾಭವಾನಿ ದೇವಸ್ಥಾನ, ನವನಗರದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ವಿದ್ಯಾಗಿರಿ ವಿಪ್ರಮಠದಲ್ಲಿ, ನಾರಾಯಣ ದೇವರ ಮಂದಿರದಲ್ಲಿ ಒಂಬತ್ತು ದಿನಗಳ ಕಾಲ ವಿಶೇಷವಾಗಿ ಪೂಜೆ ಜರುಗಿದವು. ಧಾರ್ಮಿಕ ಪಂಡಿತರಿಂದ ಪುರಾಣ ಪ್ರವಚನ ನಡೆಯಿತು. ಭಕ್ತರು ಉರುಳು ಸೇವೆ, ವಿವಿಧ ರೀತಿಯ ಅಲಂಕಾರ, ವೆಂಕಟೇಶ-ಪದ್ಮಾವತಿ ಕಲ್ಯಾಣೋತ್ಸವ ಕೊನೆಯ ದಿನ ಪಲ್ಲಕ್ಕಿ ಉತ್ಸವ, ರಥೋತ್ಸವ ಅದ್ದೂರಿಯಾಗಿ ನಡೆದವು.

    ಕೆಲವರು ಶನಿವಾರ, ಇನ್ನು ಹಲವರು ಭಾನುವಾರ ಆಯುಧ ಪೂಜೆ ನೆರವೇರಿಸಿದರು. ನಗರದ ಬಹುತೇಕ ವ್ಯಾಪಾರಸ್ಥರು ತಮ್ಮ ದೈನಂದಿನ ಸಾಮಾನು ಸಲಕರಣೆ, ಆಯುಧಗಳನ್ನು ಶುಚಿಗೊಳಿಸಿ ಪೂಜಿಸಿದರು. ಲಕ್ಷೀ ಪೂಜೆ ನೆರೆವೇರಿಸಿ ಕುಂಬಳಕಾಯಿ ಒಡೆದರು. ಸೋಮವಾರ ಸಂಜೆ ಬಂದು ಬಾಂಧವರೊಂದಿಗೆ, ಆತ್ಮೀಮಿಯರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು. ಪರಸ್ಪರ ಶುಭಾಶಯ ಹಚ್ಚಿಕೊಂಡು ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

    ವ್ಯಾಪಾರದ ಭರಾಟೆ…
    ದಸಾರ ಹಬ್ಬದ ಪ್ರಯುಕ್ತ ಜನರು ವಿವಿಧ ಸಾಮಾನುಗಳ ಖರೀದಿಸಲು ಅಂಗಡಿಗಳಿಗೆ ಮುಗಿ ಬಿದ್ದಿದ್ದರು. ಮಾರುಕಟ್ಟೆಯಲ್ಲಿ ಜನ ದಟ್ಟನೆ ಸಾಮಾನ್ಯವಾಗಿತ್ತು. ಸೇಬು, ಬೂದ ಕುಂಬಳಗಾಯಿ, ಮೋಸಂಬಿ, ಚಿಕ್ಕು, ಬಾಳೆಹಣ್ಣುಗಳ ದರ ಹೆಚ್ಚಾಗಿತ್ತು. ಚಂಡು, ಗುಲಾಬಿ, ಮಲ್ಲಿಗೆ ಸೇರಿದಂತೆ ಬಗೆ ಬಗೆ ಹೂಗಳ ಬೆಲೆ ಹೆಚ್ಚಳವಾಗಿತ್ತು, ಸಿದ್ದ ಸಿಹಿ ತಿಂಡಿಗಳನ್ನು ಖಿರೀದಿಸಲು ಸಾರ್ವಜನಿಕರಿಗೆ ಹೆಚ್ಚು ಆಸಕ್ತಿ ತೋರಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts