More

    ಸರ್ಕಾರಿ ಸೇವೆ ಸಂತ್ರಸ್ತರ ಮನೆ ಬಾಗಿಲಿಗೆ

    ಬಾಗಲಕೋಟೆ: ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕರ್ಫ್ಯೂ ವಿಧಿಸಿದ್ದರಿಂದ ಜನರು ಮನೆಗೆ ಹೊರಗೆ ಬರುಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಕೆಲಸ ಕಾರ್ಯಗಳು ಅಡೆತಡೆ ಉಂಟಾಗಿದೆ. ಆದರೇ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಸಂತ್ರಸ್ತರ ಮನೆ ಬಾಗಿಲಿಗೆ ಸೇವೆ ನೀಡುವ ಮೂಲಕ ಜನ ಮೆಚ್ಚುಗೆ ಪಾತ್ರವಾಗಿದೆ.

    ಮುಳಗಡೆಯಿಂದಾಗಿ ನೂರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ. ಅಂತಹವರು ಹಕ್ಕು ಪತ್ರ ಪಡೆಯಲು ಬಿಟಿಡಿಎ ಕಚೇರಿಗೆ ನಿತ್ಯವು ಅಲೆದಾಟ ಸಾಮಾನ್ಯ. ಆದರೇ ಈಚೆಗೆ ಬಿಟಿಡಿಎದಲ್ಲಿ ಆಡಳಿತ ಸುಧಾರಣೆಗೆ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ. ಅದರ ಭಾಗವಾಗಿ ಸಂತ್ರಸ್ತರು ಖರೀದಿ ಕರಾರು ಪತ್ರ, ಹೆಸರು ತಿದ್ದುಪಡಿ ಸೇರಿದಂತೆ ಹಕ್ಕು ಪತ್ರಕ್ಕೆ ಸಂಬಂಧಿಸಿದಂತೆ ವಿವಿಧ ಅರ್ಜಿ ಸಲ್ಲಿಸಿದ್ದಾರೆ. ಅಂತವುಗಳನ್ನು ಸಿಬ್ಬಂದಿ ಪರಿಶೀಲಿಸಿ ವಿಲೇವಾರಿ ಮಾಡುವುದರ ಜತೆಗೆ ಕರ್ಫ್ಯೂ ಸಮಯದಲ್ಲಿ ಸಂತ್ರಸ್ತರ ಮನೆ ಬಾಗಿಲಿಗೆ ಬದಲಾವಣೆ ಮಾಡಿದ ಹಕ್ಕು ಪತ್ರಗಳನ್ನು ವಿತರಿಸುತ್ತಿದ್ದಾರೆ. ಸಿಬ್ಬಂದಿಗಳ ಈ ಕರ್ತವ್ಯ ಪ್ರಜ್ಞೆ ಮತ್ತು ಸಂತ್ರಸ್ತರ ಬಗ್ಗೆ ಇರುವ ಕಾಳಜಿ ಇತರೆ ಇಲಾಖೆಗೂ ಮಾದರಿಯಾಗಿದೆ.

    ಈ ಸಮಯದಲ್ಲಿ ಸಾರ್ವಜನಿಕರು ಓಡಾಡುವಂತಿಲ್ಲ. ಹೀಗಾಗಿ ನಮ್ಮ ಸಿಬ್ಬಂದಿಗಳು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಕಚೇರಿಯಲ್ಲಿ ಕಾರ್ಯನಿರ್ವಹಿಸಿ ನಂತರ ಸಂತ್ರಸ್ತರ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುತ್ತಿದ್ದಾರೆ. ಇದರಿಂದ ಸಂತ್ರಸ್ತರಿಗೂ ಅನುಕೂಲವಾಗಿದೆ.
    – ಗಣಪತಿ ಪಾಟೀಲ ಬಿಟಿಡಿಎ ಪುನರ್ ವಸತಿ ಅಧಿಕಾರಿ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts