More

    359 ಜನರಿಗೆ ಕೋವಿಡ್ ಲಸಿಕೆ

    ಬಾಗಲಕೋಟೆ: ಜಿಲ್ಲೆಯಲ್ಲಿ 9 ಕೋವಿಡ್-19 ಮಾದರಿ ಲಸಿಕಾ ಕೇಂದ್ರಗಳಲ್ಲಿ ಲಸಿಕಾ ಅಭಿಯಾಕ್ಕೆ ಚಾಲನೆ ದೊರೆತಿದ್ದು, ಶನಿವಾರ ಒಟ್ಟು 359 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ಸಂಜೆವರೆಗೆ ಒಟ್ಟು 551 ಗುರಿ ಪೈಕಿ 359 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ 47, ನವನಗರದಲ್ಲಿರುವ ನಗರ ಆರೋಗ್ಯ ಪ್ರಾಥಮಿಕ ಕೇಂದ್ರದಲ್ಲಿ 60, ಬಾದಾಮಿ ತಾಲೂಕಾ ಆಸ್ಪತ್ರೆಯಲ್ಲಿ 11, ಹುನಗುಂದ 56, ಮುಧೋಳ 30, ಬೀಳಗಿ 40, ಜಮಖಂಡಿ 52 ಜಮಖಂಡಿ ತಾಲೂಕಿನ ಚಿಕ್ಕಲಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 28 ಹಾಗೂ ಬಾಗಲಕೋಟೆಯ ಹಾನಗಲ್ ಕುಮಾರೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 35 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಹೇಳಿದ್ದಾರೆ.

    ಕೋವಿಡ್ ಬಗ್ಗೆ ಭಯವಿತ್ತು. ಇದೀಗ ಲಸಿಕೆ ಪಡೆದುಕೊಂಡ ಬಳಿಕ ಹೆದರಿಕೆ ಕಡಿಮೆಯಾಗಿದೆ. ನನ್ನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಉತ್ತಮವಾಗಿ ಇದ್ದೇನೆ. ಎಲ್ಲರು ಲಸಿಕೆ ಪಡೆದುಕೊಳ್ಳಬೇಕು. ತನ್ಮೂಲಕ ಸದೃಢ ಆರೋಗ್ಯವಂತ ಭಾರತ ಕಟ್ಟಬೇಕು.
    – ಕಪೀಲ ಗಂಜಿಹಾಳ ಲಸಿಕೆ ಪಡೆದ ಫಲಾನುಭವಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts