More

    ಆರೋಗ್ಯ ಚಿಕಿತ್ಸಾ ಸಲಹೆಗೆ ಇ-ಸಂಜೀವಿನಿ ಆ್ಯಪ್ ಬಳಸಿ

    ಬಾಗಲಕೋಟೆ: ಸಾಮಾನ್ಯ ಕೆಮ್ಮು, ನೆಗಡಿ ಜ್ವರ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ಇ-ಸಂಜೀವಿನಿ ಆ್ಯಪ್ ಮೂಲಕ ವೈದ್ಯರಿಂದ ಚಿಕಿತ್ಸಾ ಸಲಹೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

    ವಿಡಿಯೋ ಮೂಲಕ ವೈದ್ಯರನ್ನು ಸಂಪರ್ಕಿಸಲು ನಿಮ್ಮ ಮೊಬೈಲ್‌ನ ಪ್ಲೇಸ್ಟೋರಗೆ ಹೋಗಿ ಇ-ಸಂಜೀವಾಣಿ ಆ್ಯಪ್ ಡೌನಲೋಡ್ ಮಾಡಿಕೊಳ್ಳಬೇಕು. ಇಲ್ಲವೇ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ವೆಬ್ ವಿಡಿಯೋ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರು ನಿಮ್ಮ ಕಾಯಿಲೆಗೆ ತಕ್ಕಂತೆ ಚಿಕಿತ್ಸೆ ಬರೆದುಕೊಡಲಿದ್ದಾರೆ. ಈ ಮೂಲಕ ಆಸ್ಪತ್ರೆಯ ಕದ ತಟ್ಟದೇ ತಾವು ಇರುವ ಸ್ಥಳದಿಂದಲೇ ರೋಗಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

    ಏನಿದು ಸಂಜೀವಿನಿ ?
    ಕೋವಿಡ್ ತಡೆಗಟ್ಟುವ ಸಲುವಾಗಿ ಸರ್ಕಾರ ಸಾರ್ವಜನಿಕರಿಗೆ ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯದ ತೊಂದರೆಗಳಿಗೆ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿ ಕನ್ಸಲ್ಟೇಷನ್ ಸರ್ವಿಸ್) ಎಂಬ ಹೆಸರಿನಲ್ಲಿ ಲಿಂಕ್ ಆ್ಯಪ್ ಸಿದ್ದಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇ-ಸಂಜೀವಿನಿ ಬಳಕೆ ಹೇಗೆ?
    ಟೆಲಿ ಸಮಾಲೋಚನಾ ಸೇವೆಗಾಗಿ ಮೊಬೈಲ್‌ನ ಪ್ಲೇಸ್ಟೋರ ಅಥವಾ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿದರೆ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ಮೊಬೈಲ್ ನಂಬರ ನಮೂದಿಸಿದರೆ ಒಟಿಪಿ ಸಂಖ್ಯೆ ಬರಲಿದೆ. ಈ ಒಟಿಪಿ ನಮೂದಿಸಿದರೆ ರಿಜಿಸ್ಟ್ರೇಷನ್ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ. ಅದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನಮೂದಿಸಿ ಲಾಗಿನ್ ಆಗಬೇಕು.

    ಬಳಕೆದಾರರು ಸಮಾಲೋಚನೆಗಾಗಿ ಟೋಕಲ್ ನಂಬರ ವಿನಂತಿಸುತ್ತದೆ. ಆಗ ಆರೋಗ್ಯದ ದಾಖಲೆಗಳು ಯಾವುದಾದರೂ ಇದ್ದರೆ ಅಪ್‌ಲೋಡ್ ಮಾಡಲು ತಿಳಿಸುತ್ತದೆ. ಎಸ್.ಎಂ.ಎಸ್ ಮೂಲಕ ರೋಗಿಯ ಐಡಿ ಮತ್ತು ಟೋಕನ್ ಸ್ವೀಕರಿಸುತ್ತದೆ. ಇ-ಸಂಜೀವಿನಿ ಬಳಕೆದಾರರಿಗೆ ಲಾಗಿನ್ ಆಗುಂತೆ ಕೇಳುವ ಎಸ್.ಎಂ.ಎಸ್ ಕಳುಹಿಸುತ್ತದೆ. ರೋಗಿಯ ಐಡಿ ಬಳಸಿ ಬಳಕೆದಾರರು ಲಾಗ್‌ಇನ್ ಆಗಿ ರೋಗಿಯು ಕ್ಲಿನಿಕ್‌ಗೆ ಪ್ರವೇಶಿಸಬಹುದಾಗಿದೆ.

    ರೋಗಿಯು ವಿಡಿಯೋ ಸಮಾಲೋಚನೆಯ ಸಮಯದಲ್ಲಿ ವೈದ್ಯರು ಎಲೆಕ್ಟ್ರಾನಿಕ್ ಪ್ರಿಸ್ಕ್ರಿಪ್ಷನ್ ಸಿದ್ದಪಡಿಸುತ್ತಾರೆ. ಈ ಸೇವೆ ನಿತ್ಯ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಲಭ್ಯವಿರುತ್ತದೆ. ಒಮ್ಮೆ ನೊಂದಣಿಯಾದವರು ಮತ್ತೊಮ್ಮೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts