More

    ಕೈ ತೊಳೆದ ನಂತರವೇ ಬಯೋ ಮೆಟ್ರಿಕ್

    ಬಾಗಲಕೋಟೆ: ಕರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಜಿಲ್ಲೆಯ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಡೆಟಾಲ್ ಸೋಪ್ ಮತ್ತು ನೀರಿನ ಮೂಲಕ ಕೈ ತೊಳೆದುಕೊಂಡ ನಂತರವೇ ಪಡಿತರ ಚೀಟಿದಾರರಿಂದ ಬಯೋ ಮೆಟ್ರಿಕ್ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ನ್ಯಾಯಬೆಲೆ ಅಂಗಡಿಕಾರರಿಗೆ ಸೂಚಿಸಿದ್ದಾರೆ.

    ರಾಜ್ಯದಲ್ಲಿ ಕರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಯೋ ಮ್ಯಾಟ್ರಿಕ್ ಯಂತ್ರದಿಂದ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಬಯೋ ಮೆಟ್ರಿಕ್ ಯಂತ್ರವನ್ನು ಆಗಾಗ ಹತ್ತಿ ಮತ್ತು ಡೆಟಾಲ್‌ನಿಂದ ಸ್ವಚ್ಛಗೊಳಿಸಬೇಕು. ಪಡಿತರದಾರರ ಕೈಗಳನ್ನು ಸ್ಯಾನಿಟೈಸರ್ ಇಲ್ಲವೇ ಡೆಟಾಲ್ ಸೋಪ್‌ನಿಂದ ಸ್ವಚ್ಛಗೊಳಿಸಿದ ನಂತರವೇ ಬಯೋ ಮೆಟ್ರಿಕ್ ಪಡೆದುಕೊಳ್ಳಬೇಕು. ಸಾಧ್ಯವಾದಷ್ಟು ಪಡಿತರ ಚೀಟಿದಾರರು ಸರದಿ ಸಾಲಿನಲ್ಲಿ ಅಂತರ ಕಾಯ್ದುಕೊಳ್ಳಬೇಕು.

    ನ್ಯಾಯಬೆಲೆ ಅಂಗಡಿಗಳಲ್ಲಿ ಜನಸಂದಣಿ ಉಂಟಾಗದಂತೆ ನೋಡಿಕೊಳ್ಳಬೇಕು. ಪಡಿತರ ಚೀಟಿದಾರರು ಸ್ಪರ್ಶಿಸುವ ಸ್ಥಳಗಳಾದ ಟೇಬಲ್, ಬಯೋ ಮೆಟ್ರಿಕ್, ತೂಕದ ಯಂತ್ರಗಳನ್ನು ಸ್ವಚ್ಛವಾಗಿಡಬೇಕು. ನ್ಯಾಯ ಬೆಲೆ ಅಂಗಡಿಕಾರರಲ್ಲಿ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಜ್ವರ ಕಂಡುಬಂದರೆ ಅಂಗಡಿ ಬಂದ್ ಮಾಡಬೇಕು. ತಕ್ಷಣವೇ ವೈದ್ಯಕೀಯ ಉಪಚಾರ ಪಡೆಯಬೇಕು. ಅಂತಹರು ಪಡಿತರ ವಿತರಣೆಯ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts