More

    ಸಾಮಾನ್ಯ ಪ್ರವೇಶ ಪರೀಕ್ಷೆ ಸುಸೂತ್ರ

    ಬಾಗಲಕೋಟೆ: ಜಿಲ್ಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಯಾವುದೇ ಸಮಸ್ಯೆ ಇಲ್ಲದೆ ಸುಸೂತ್ರವಾಗಿ ಶನಿವಾರ ನಡೆದವು.

    ಬೆಳಗ್ಗೆ ಜರುಗಿದ ಜೀವಶಾಸ್ತ್ರ ಪರೀಕ್ಷೆಗೆ ಒಟ್ಟು 5,916 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 5,456 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 460 ಪರೀಕ್ಷಾರ್ಥಿಗಳು ಗೈರು ಉಳಿದಿದ್ದರು.

    ಮಧ್ಯಾಹ್ನ ನಡೆದ ಗಣಿತ ಪರೀಕ್ಷೆಗೆ 5,935 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 5,799 ಜನರು ಹಾಜರಾಗಿ, 136 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ.

    ಕರೊನಾ ಆತಂಕದ ನಡುವೆ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆದಿದ್ದರಿಂದ ಕೋವಿಡ್ ನಿಯಮಗಳ ಕಡೆಗೆ ಒತ್ತು ಕೊಡಲಾಗಿತ್ತು. ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದರು. ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಥರ್ಮಲ್ ಸ್ಕ್ರೀನಿಂಗ್, ಸಾನಿಟೈಜಿಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಯಾವುದೇ ಪರೀಕ್ಷಾರ್ಥಿಗೂ ಕೋವಿಡ್ ಲಕ್ಷಣಗಳು ಕಂಡು ಬಂದಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ ಪೂಜಾರಿ ತಿಳಿಸಿದ್ದಾರೆ.

    16 ಕೇಂದ್ರಗಳು
    ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಬಾಗಲಕೋಟೆಯಲ್ಲಿ ಐದು, ಜಮಖಂಡಿಯಲ್ಲಿ ನಾಲ್ಕು, ಮುಧೋಳ, ಬನಹಟ್ಟಿ, ಹುನಗುಂದದಲ್ಲಿ ತಲಾ ಎರಡು ಹಾಗೂ ಬಾದಾಮಿಯಲ್ಲಿ ಒಂದು ಕೇಂದ್ರ ತೆರೆಯಲಾಗಿತ್ತು.

    ಸಾಮಾನ್ಯ ಪ್ರವೇಶ ಪರೀಕ್ಷೆಗಳು ಎರಡು ದಿನ ನಡೆಯಲಿದ್ದು, ಶನಿವಾರ ಮೊದಲ ದಿನ ಎರಡು ಪೇಪರ್‌ಗಳು ಅಚ್ಚುಕಟ್ಟಾಗಿ ನಡೆದಿವೆ. ಕೋವಿಡ್ ನಿಯಮಗಳನ್ನು ಅಳವಡಿಸಿಕೊಂಡು ಪರೀಕ್ಷೆ ನಡೆಸಲಾಗಿದೆ. ಯಾವುದೇ ತೊಂದರೆ ಇಲ್ಲದೆ ಪರೀಕ್ಷೆಗಳು ಸುಸೂತ್ರವಾಗಿ ಜರುಗಿವೆ.
    ಶಶಿಧರ ಪೂಜಾರಿ ಡಿಡಿಪಿಯು, ಬಾಗಲಕೋಟೆ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts