More

    ಮಾನವ ಹಕ್ಕುಗಳ ಉಲ್ಲಂಘನೆ ಸಲ್ಲದು

    ಬಾಗಲಕೋಟೆ: ಮೌಲ್ಯಯುವತವಾದ ಮಾನವ ಹಕ್ಕುಗಳನ್ನು ಗೌರವಿಸುವದರ ಜೊತೆಗೆ ಅವುಗಳಿಗೆ ಉಲ್ಲಂಘನೆಯಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಲ್ಪನಾ ಕುಲಕರ್ಣಿ ಹೇಳಿದರು.

    ನವನಗರದ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ, ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ನಾಗರಿಕ ಸೌಲಭ್ಯಗಳು ಕೂಡಾ ಹಕ್ಕುಗಳಾಗಿ ಪರಿಣಮಿಸಿವೆ ಎಂದು ತಿಳಿಸಿದರು.

    ಸಮಾಜದಲ್ಲಿ ಗೌರಯುತವಾಗಿ ಬದುಕು ನಡೆಸಲು ಸಂವಿಧಾನವು ಸ್ವಾತಂತ್ರೃ, ಸಮಾನತೆ ಹಾಗೂ ಘನತೆಯಿಂದ ಜೀವಿಸಲು ವಿವಿಧ ಮೂಲಭೂತ ಹಕ್ಕುಗಳನ್ನು ನೀಡಿದೆ. ಅವೆಲ್ಲವುಗಳನ್ನು ಅನುಭವಿಸುವುದರ ಜೊತೆಗೆ ಇನ್ನೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸವಾಗಬಾರದು. ಮೊದಲು ನಾವು ಮಾನವನಾಗುವದನ್ನು ಕಲಿಯಬೇಕು ಅಂದಾಗ ಮಾತ್ರ ಸಮಾನತೆಯ ನ್ಯಾಯದಡಿ ಜೀವಿಸಲು ಸಾಧ್ಯವಾಗುತ್ತದೆ ಎಂದರು.

    ನ್ಯಾಯವಾದಿ ಟಿ.ಆರ್.ಕುಲಕರ್ಣಿ ಮಾತನಾಡಿ, ಕಾನೂನಿನಡಿ ಎಲ್ಲರೂ ಸಮಾನರಾಗಿದ್ದು, ಕಾನೂನು ಪರಿಸರದ ಜೊತೆಗೆ ಹಕ್ಕುಗಳ ರಕ್ಷಣೆ ಅಗತ್ಯವಾಗಿದೆ. ಸಂವಿಧಾನ ನಮಗೆ ಜೀವಿಸುವ ಹಕ್ಕು, ಸಮಾನತೆ ಹಕ್ಕು, ವೈಯಕ್ತಿಕ ಸ್ವಾತಂತ್ರೃದ ಹಕ್ಕು, ಶೋಷಣೆ ವಿರುದ್ಧವಾದ ಹಕ್ಕು ಸೇರಿದಂತೆ ಇತರೆ ಹಕ್ಕುಗಳನ್ನು ನೀಡಿದ್ದು, ಅವುಗಳು ಉಲ್ಲಂಘನೆಯಾಗದಂತೆ ರಕ್ಷಣೆ ಮಾಡಬೇಕು. ಕಾನೂನು ಉಲ್ಲಂಸಿ ಅನೇಕರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಶಿಕ್ಷೆ ಮುಗಿದ ನಂತರ ನ್ಯಾಯಯುತವಾಗಿ ಬದುಕುವದನ್ನು ಕಲಿಯಬೇಕಿದೆ ಎಂದು ತಿಳಿಸಿದರು.

    ವಿಶ್ವ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ.ಕರಣಿ ಮಾತನಾಡಿದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ದತ್ತಾತ್ರೇಯ ಮೇದಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಧೀಕ್ಷಕ ವಿ.ಡಿ.ಕುಂಬಾರ, ಮುಖ್ಯ ವೀಕ್ಷಕ ಎಂ.ಜಿ.ಶಿಲೇದಾರ, ಜೆ.ಎಂ.ಸಿಂದಗಿಕರ, ಬಿ.ಎಂ.ಓದಿ, ವೀಕ್ಷಕ ಆರ್.ಎಸ್.ನಾಗರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪಿ.ಪಿ.ಹಾದಿಮನಿ ಪ್ರಾರ್ಥನೆ ಗೀತೆ ಹಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪಿ.ಎಸ್.ಬಾದವಾಡಗಿ ಸ್ವಾಗತಿಸಿದರು. ಜಿಲ್ಲಾ ಕಾರಾಗೃಹದ ವೀಕ್ಷಕ ಜಗದೀಶ ಬೇಕಿನಾಳ ನಿರೂಪಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts