ಬಾಗಲಕೋಟೆ: ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಬಾಗಲಕೋಟೆಯಲ್ಲಿ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ನಿಯಮ ಅನುಸರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಹಳ್ಳಿಯಿಂದ ಬರುವ ತರಕಾರಿ ವ್ಯಾಪಾರಿಗಳಿಗೆ ಕೂತು ಮಾರಾಟ ಮಾಡಲು ಅವಕಾಶ ಇಲ್ಲ. ಆದರೆ, ಮಟನ್, ಚಿಕನ್, ಫಿಶ್ ಮಾರ್ಕೆಟ್ಗೆ ತಡೆಯಿಲ್ಲದಿರುವುದರಿಂದ ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಬಂದವರಲ್ಲಿ ಬಹುತೇಕರು ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಅಷ್ಟೇ ಅಲ್ಲದೆ, ಪೊಲೀಸರು ಸಹ ಇಲ್ಲದಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತ ತರಕಾರಿ ಮಾರುಕಟ್ಟೆಗೆ ಬಿಗಿಕ್ರಮ ಕೈಗೊಳ್ಳಲಾಗಿದೆ. ತರಕಾರಿ ಮಾರುಕಟ್ಟೆ ಖಾಲಿ ಖಾಲಿಯಾಗಿದೆ. ತರಕಾರಿ, ಹಾಲು, ಮೊಸರು ಮಾರಾಟ ಮಾಡಲು ಹಳ್ಳಿಗಳಿಂದ ಜನರು ಬಂದಿದ್ದಾರೆ. ಆದರೆ. ಅವರಿಗೆ ಮಾರಾಟ ಮಾಡಲು ಅವಕಾಶ ನೀಡಿಲ್ಲ. ತಲೆ ಮೇಲೆ ಬುಟ್ಟಿ ಹೊತ್ತು ಗಲ್ಲಿ ಗಲ್ಲಿ ಸುತ್ತಬೇಕಾಗಿದೆ.
ಅವರಿಗೊಂದು ನಿಮಯ, ನಮಗೊಂದು ನಿಯಮ ಯಾಕೆ ಅಂತ ಮಹಿಳೆಯರ ಪ್ರಶ್ನೆ ಮಾಡಿದ್ದಾರೆ. ತರಕಾರಿ ಮಾರಾಟ ಇಲ್ಲದೇ ಬಡವರಿಗೆ ಬರೆ ಎಳೆದಂತಾಗಿದೆ. ಆದರೆ, ಮಟನ್ ಮಾರ್ಕೆಟ್ಗೆ ಕರ್ಫ್ಯೂ ಬರೆ ಇಲ್ಲ. ಇದು ಸರಿನಾ ಎಂಬ ಪ್ರಶ್ನೆಯಾಕಿದ್ದು, ಬಾಗಲಕೋಟೆ ಜಿಲ್ಲಾಡಳಿತ ವಿರುದ್ಧ ಜನರು ಅಸಮಾಧಾನ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)