More

    ಬದರಿನಾಥ ಅಭಿವೃದ್ಧಿಗೆ 424 ಕೋಟಿ ರೂಪಾಯಿ ಮಾಸ್ಟರ್ ಪ್ಲ್ಯಾನ್

    ಗೋಪೇಶ್ವರ: ಹಿಮಾಲಯದ ಬದರಿನಾಥ ತೀರ್ಥಕ್ಷೇತ್ರದ ಅಭಿವೃದ್ಧಿ ಮತ್ತು ಸುಂದರೀಕರಣಕ್ಕೆ ಮಾಸ್ಟರ್ ಪ್ಲ್ಯಾನ್ ರೂಪಿಸಿ 424 ಕೋಟಿ ರೂಪಾಯಿ ಅನುದಾನದ ಪ್ರಸ್ತಾವವನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಲಾಗಿದೆ.

    ಮೂರು ಹಂತಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಮೊದಲ ಹಂತದಲ್ಲಿ ಶೇಷ ನೇತ್ರ ಮತ್ತು ಬದ್ರೀಶ ಸರೋವರಗಳನ್ನು ಸ್ವಚ್ಛಗೊಳಿಸಿ, ಸುಂದರಗೊಳಿಸಲಾಗುವುದು. ಎರಡನೆಯ ಹಂತದಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ವಿಸ್ತರಣೆ ಮತ್ತು ನವೀಕರಣ. ಮೂರನೆಯ ಹಂತದಲ್ಲಿ ಶೇಷ ನೇತ್ರ ಸರೋವರದಿಂದ ಬದರಿನಾರಾಯಣ ದೇವಸ್ಥಾನಕ್ಕೆ ಅಷ್ಟಪಥ ನಿರ್ವಿುಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ದಿಲೀಪ್ ಜಾವಲ್ಕರ್ ಹೇಳಿದ್ದಾರೆ.

    ಇದನ್ನೂ ಓದಿ: ನವರಾತ್ರಿ ಉತ್ಸವ: ದುರ್ಗಾ ಪೆಂಡಾಲ್​ಗೆ ನಿಯಮ ಸಡಿಲಿಸಿದ ಕೋರ್ಟ್​

    ಈ ಯೋಜನೆಗೆ ಪ್ರಧಾನಿ ಕಚೇರಿಯಿಂದ ಅನುಮೋದನೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಆಂಧ್ರಪ್ರದೇಶದಲ್ಲಿ ನವೆಂಬರ್ 2 ರಿಂದಲೇ ಶಾಲೆ ಶುರು ಮಾಡ್ತಾರಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts