More

    ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಲಿ

    ಬಾದಾಮಿ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರಗೈದ ದುಷ್ಕರ್ಮಿಗಳನ್ನು ಸಾರ್ವಜನಿಕವಾಗಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ತಹಸೀಲ್ದಾರ್ ಸುಹಾಸ ಇಂಗಳೆ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

    ನಂತರ ಮಾತನಾಡಿ, ಉತ್ತರ ಪ್ರದೇಶ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದ್ದರೂ ಅಲ್ಲಿನ ಸರ್ಕಾರ ಜಾಣ ಕುರುಡನಂತೆ ವರ್ತಿಸುತ್ತಿದೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಮೃತ ದೇಹವನ್ನು ಪೋಷಕರಿಗೆ ನೀಡದೆ ಶವ ಸಂಸ್ಕಾರ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ಮೃತ ಯುವತಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವ ಜತೆಗೆ ಕುಟುಂಬ ಸದಸ್ಯರಿಗೆ ನೌಕರಿ ಒದಗಿಸಬೇಕು ಎಂದು ಒತ್ತಾಯಸಿದರು.

    ಲಕ್ಷ್ಮಣ ಮರಡಿತೋಟ, ಎಸ್.ಬಿ. ಬರಗುಂಡಿ, ಬಸವರಾಜ ತಳವಾರ, ದೀಪಕ್ ಕಟ್ಟಿಮನಿ, ಅಬ್ದುಲ್‌ರಜಾಕ ಅತ್ತಾರ, ಬಸವರಾಜ ಪಾತ್ರೋಟಿ, ಕಾಂತಿಚಂದ್ರ ಜ್ಯೋತಿ, ಭೀಮಸಿ ವಡ್ಡರ, ಎಸ್.ವಿ. ಮುಚಖಂಡಿ, ಅಶೋಕ ವಡ್ಡರ, ರಮೇಶ ಕುಬಸದ, ರಮೇಶ ಮೆಣಸಗಿ, ಮಹೇಶ ವಡ್ಡರ, ಪಿ.ಆರ್. ಗಿರಿಯಣ್ಣವರ, ಬಸವರಾಜ ಗಾಡಗೊಳ್ಳಿ, ಮಾರುತಿ ವಾಲಿಕಾರ ಹಾಗೂ ವಾಲ್ಮೀಕಿ ಸಮಾಜ, ಅಹಿಂದ, ಪರ ಕನ್ನಡ ಸಂಘಟನೆ, ಅಲ್ಪ ಸಂಖ್ಯಾತ ಹಾಗೂ ರೈತ ಸಂಘ ಸೇರಿ ವಿವಿಧ ಸಂಘಟನೆಯವರು ಪಾಲ್ಗೊಂಡಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts