More

    ಚಿಕಿತ್ಸೆಗಾಗಿ ಪರದಾಡಿದ ಅಂಗವಿಕಲರು

    ಬಾದಾಮಿ: ತಾಲೂಕು ಆಸ್ಪತ್ರೆಗೆ ಮಂಗಳವಾರ ತಪಾಸಣೆಗೆ ಆಗಮಿಸಿದ್ದ ತಾಲೂಕಿನ ನೂರಾರು ಅಂಗವಿಕಲರು ಎಲುವು ಕೀಲುಗಳ ವೈದ್ಯರು ಇಲ್ಲದ ಪರಿಣಾಮ ಪರದಾಡುವಂತಾಯಿತು. ವಿವಿಧ ಗ್ರಾಮಗಳಿಂದ ತಮ್ಮ ಮಕ್ಕಳನ್ನು ಕರೆದುಕೊಂಡ ಬಂದಿದ್ದ ಪಾಲಕರು ಹೊರಗಡೆ ಕುಳಿತು ವೈದ್ಯರಿಗಾಗಿ ಕಾಯುವಂತಾಯಿತು.

    ಕೇಂದ್ರ ಸರ್ಕಾರದ ಯೋಜನೆಯಡಿ ಅಂಗವಿಕಲರು ಯುಡಿಐಡಿ ಕಾರ್ಡ್ ಕಡ್ಡಾಯವಾಗಿ ಪಡೆಯಬೇಕು. ಕಾರ್ಡ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತಾಲೂಕು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಬೇಕು. ಆದರೆ, ಇಲ್ಲಿ ಅಂಗವಿಕಲತೆಗೆ ಸಂಬಂಧಪಟ್ಟಂತೆ ಎಲುವು ಕೀಲುಗಳ ತಪಾಸಣೆ ಮಾಡುವ ವೈದ್ಯರು ಒಬ್ಬರೇ ಇರುವುದರಿಂದ ತಾಲೂಕಿನ ಗುಳೇದಗುಡ್ಡ, ಕೆರೂರ, ಕುಳಗೇರಿ ಕ್ರಾಸ್, ಸೇರಿ ತಾಲೂಕಿನ ಅಂಗವಿಕಲರು ಬೆಳಗ್ಗೆಯಿಂದ ಸರದಿಯಲ್ಲಿ ನಿಂತು ಸುಸ್ತಾಗಿ ಹೋದರು. ಕೋಪಗೊಂಡ ಅಂಗವಿಕಲರು ತಾಲೂಕು ವೈದ್ಯಾಧಿಕಾರಿಗಳು ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಹೆಚ್ಚಿನ ವೈದ್ಯರನ್ನು ನೇಮಿಸಬೇಕೆಂದು ಆಗ್ರಹಿಸಿದರು.

    ಮೊದಲು ಪ್ರತಿ ಬುಧವಾರ ಅಂಗವಿಕಲರ ತಪಾಸಣೆ ನಡೆಯುತ್ತಿತ್ತು. ಈಗ ತಿಂಗಳಿಗೊಮ್ಮೆ ಪ್ರತಿ ಮಂಗಳವಾರ ಒಂದೇ ದಿನ ಮಾಡಿದ್ದಾರೆ. ತಾಲೂಕಿನ ಎಲ್ಲ ಅಂಗವಿಕಲರು ಬಾದಾಮಿಗೆ ಬರಬೇಕು. ಇಲ್ಲಿ ವೈದರೇ ಇಲ್ಲ. ಇದೊಂದು ಹೆಸರಿಗೆ ಮಾತ್ರ ತಾಲೂಕು ಆಸ್ಪತ್ರೆಯಾಗಿದೆ ಎಂದು ಗುಂಡಪ್ಪ ಕೋಟಿ ಆರೋಪಿಸಿದರು.

    ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ವಿರೂಪಾಕ್ಷಯ್ಯ ಅರಕಲಚಿಟ್ಟಿ, ಬಸವರಾಜ ಅಚನೂರ, ರಾಜು ದಾಸರ, ಸಂತೋಷ ಯರಗುಡಿ, ಗದಿಗೆಪ್ಪ ನಿಲುಗಲ್ಲ, ಮುದಿಗೌಡ ಗದ್ದಿಗೌಡರ ಬೇಸರ ವ್ಯಕ್ತಪಡಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts