More

    ತಾಲೂಕು ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಶ್ರಮ

    ಬಾದಾಮಿ: ಪಟ್ಟಣದ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಸಭಾಭವನದಲ್ಲಿ ಮಾ.1ರಂದು ಜರುಗಲಿರುವ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದ್ದು, ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ರವಿ ಕಂಗಳ ತಿಳಿಸಿದರು.

    ಇಲ್ಲಿನ ಕಾನಿಪ ಭವನದಲ್ಲಿ ಸಮ್ಮೇಳನದ ಪ್ರಚಾರ ಪರಿಕರಗಳನ್ನು ಗುರುವಾರ ಬಿಡುಗಡೆಗೊಳಿಸಿ ಮಾತನಾಡಿ, ಪ್ರಧಾನ ವೇದಿಕೆಗೆ ರವಿಕೀರ್ತಿ, ಮಹಾದ್ವಾರಕ್ಕೆ ಹಿರಿಯ ಸಾಹಿತಿ ಅನ್ನದಾನಿ ಹಿರೇಮಠ, ಪುಸ್ತಕ ಮಳಿಗೆಗಳಿಗೆ ಡಾ.ಮೃತ್ಯುಂಜಯ ಹೊರಕೇರಿ ಹಾಗೂ ಕಲಾ ಮಳಿಗೆಗಳಿಗೆ ನಾರಾಯಣರಾವ್ ಕುಲಕರ್ಣಿ ಅವರ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದರು.

    ಬೆಳಗ್ಗೆ 7.30 ಗಂಟೆಗೆ ತಾಪಂ ಅಧ್ಯಕ್ಷೆ ರೇಣುಕಾ ಕೊಳ್ಳನ್ನವರ ರಾಷ್ಟ್ರಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಪರಿಷತ್ ಧ್ವಜ ಹಾಗೂ ಕಸಾಪ ತಾಲೂಕು ಅಧ್ಯಕ್ಷ ರವಿ ಕಂಗಳ ನಾಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ 8 ಗಂಟೆಗೆ ಪಿಕಾರ್ಡ್ ಬ್ಯಾಂಕ್ ಆವರಣದಿಂದ ಸಮ್ಮೇಳನದ ವೇದಿಕೆವರೆಗೆ ಸರ್ವಾಧ್ಯಕ್ಷ ಡಾ.ಶೀಲಾಕಾಂತ ಪತ್ತಾರ ದಂಪತಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಕಲಾ ತಂಡ, ಕರಡಿ ಮಜಲು, ಗೊಂಬೆ ಕುಣಿತ ಸೇರಿ ವಿವಿಧ ಕಲಾ ತಂಡಗಳು ಭಾಗವಹಿಸುತ್ತವೆ ಎಂದರು.

    ಬೆಳಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನೆ ಸಮಾರಂಭ ಜರುಗಲಿದೆ. ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಸಿ. ಗದ್ದಿಗೌಡರ ಸಮ್ಮೇಳನ ಉದ್ಘಾಟಿಸುವರು. ವಿಪ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಪುಸ್ತಕ ಮಳಿಗೆಗಳನ್ನು, ಬೀಳಗಿ ಶಾಸಕ ಮುರುಗೇಶ ನಿರಾಣಿ ಕಲಾ ಮಳಿಗೆಗಳನ್ನು, ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿ ಡಾ.ಮಲ್ಲಿಕಾ ಘಂಟಿ, ಸಮ್ಮೇಳನಾಧ್ಯಕ್ಷ ಡಾ.ಶೀಲಾಕಾಂತ ಪತ್ತಾರ ಸರ್ವಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.

    ನಿಕಟಪೂರ್ವ ಅಧ್ಯಕ್ಷ ಶಂಕರ ಹೂಲಿ, ವೈ.ಎ್.ಶರೀಫ್, ಉಮೇಶ ಜಾಧವ, ಸದಾಶಿವ ಮರಡಿ, ಎಸ್.ವಿ. ಉದಗಟ್ಟಿ, ಹನುಮಂತ ಹರದೊಳ್ಳಿ ಉಪಸ್ಥಿತರಿದ್ದರು.

    ಸಮಾರೋಪ ಸಮಾರಂಭ
    ಸಂಜೆ 6.15 ಗಂಟೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ವಹಿಸುವರು. ಡಾ.ಆರ್.ಎಸ್.ಬಸುಪಟ್ಟದ ಸಮಾರೋಪ ಭಾಷಣ ಮಾಡುವರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಂಗಳ ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts