More

    ಸರ್ವರ ಸೇವೆ ನನ್ನ ಗುರಿ

    ಬಾದಾಮಿ: 2015ರಲ್ಲಿ ತಾಲೂಕಿನ ಪಿಕೆಪಿಎಸ್ ಕ್ಷೇತ್ರದಿಂದ ಬಿಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕನಾಗಿ ಆಯ್ಕೆಯಾದ ಮೇಲೆ ತಾಲೂಕಿನ ರೈತ ಸದಸ್ಯರಿಗೆ ಪಕ್ಷ ಹಾಗೂ ಜಾತಿ ಭೇದ ಮರೆತು ಎಲ್ಲರೂ ನಮ್ಮವರೇ ಎಂಬ ಭಾವನೆಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಬಿಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ ಕುಮಾರಗೌಡ ಜನಾಲಿ ಹೇಳಿದರು.

    ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ನಿರ್ದೇಶಕನಾಗಿ ಬಂದಾಗ 25 ಸಾವಿರ ರೂ. ಇದ್ದ ಬೆಳೆಸಾಲವನ್ನು 50 ಸಾವಿರ ರೂ.ಗೆ ಹೆಚ್ಚಿಸಿ ತಾಲೂಕಿಗೆ 72 ಸಾವಿರ ಕೋಟಿ ರೂ. ಬೆಳೆ ಸಾಲ, 2015ರಲ್ಲಿ ಇದ್ದ 36.37 ಕೋಟಿ ರೂ. ಮಾಧ್ಯಮಿಕ ಸಾಲವನ್ನು ನಾನು ಬಂದ ಮೇಲೆ 227 ರೈತರಿಗೆ 15.30 ಕೋಟಿ ರೂ. ಟ್ರಾೃಕ್ಟರ್ ಸಾಲ, 251 ರೈತರಿಗೆ 12.93 ಲಕ್ಷ ರೂ. ಪೈಪ್‌ಲೈನ್ ಸಾಲ, 96 ರೈತರಿಗೆ 493 ಲಕ್ಷ ರೂ. ಭೂ ಅಭಿವೃದ್ಧಿ ಸಾಲ, 58 ರೈತರಿಗೆ 3.29 ಕೋಟಿ ರೂ., ಕುರಿ ಸಾಕಣೆ ಹಾಗೂ ಹೈನುಗಾರಿಕೆ ಸಾಲ ಸೇರಿ ಒಟ್ಟು 635 ರೈತರಿಗೆ 36.16 ಕೋಟಿ ರೂ. ಸಾಲವನ್ನು ಈಗಾಗಲೇ ವಿತರಿಸಲಾಗಿದೆ. ತಾಲೂಕಿಗೆ ಒಟ್ಟು 108 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಂದರು.

    ಸಾಲ ಹೊರತು ಪಡಿಸಿ ಬಿಡಿಸಿಸಿ ಬ್ಯಾಂಕ್‌ನಿಂದ 8 ಪಿಕೆಪಿಎಸ್‌ಗಳಿಗೆ 16 ಲಕ್ಷ ಕಟ್ಟಡಕ್ಕೆ ಸಹಾಯಧನ, ಒಂದು ಪಿಕೆಪಿಎಸ್‌ಗೆ 5.50 ಲಕ್ಷ ರೂ.ದಂತೆ ಶುದ್ಧ ಕುಡಿಯುವ ನೀರಿನ ಘಟಕ, ಆರ್.ಡಿ.ಪಿ.ಆರ್. ಯೋಜನೆಯಡಿ 6 ಘಟಕಗಳಿಗೆ 30 ಲಕ್ಷ ರೂ. ಸಹಾಯಧನ, ಮಂಜೂರು ಮಾಡಿಸಿ ಸಾಮಾಜಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಹೇಳಿದರು.
    ಬೇಲೂರು ಹಾಗೂ ನಂದಿಕೇಶ್ವರ ನೂತನ ಶಾಖೆಗಳನ್ನು ಪ್ರಾರಂಭಿಸಿ ಕಟಗೇರಿ ವಿಶೇಷ ಕೌಂಟರ್ ಸೇರಿ ತಾಲೂಕಿನಲ್ಲಿ ಒಟ್ಟು 8 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನ ಜನತೆಗೆ ಬ್ಯಾಂಕಿಂಗ್ ಸೇವೆ, ಬೇಲೂರು, ಯಂಕಂಚಿ, ಕರಡಿಗುಡ್ಡ, ಯಂಕಂಚಿ-ಮಣಿನಾಗರ, ಪರ್ವತಿ, ಪಟ್ಟದಕಲ್ಲು, ತೋಗುಣಿಸಿ ಸದಸ್ಯರ ಅಭಿಪ್ರಾಯದಂತೆ 6 ಪಿಕೆಪಿಎಸ್ ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ವಿವರಿಸಿದರು.

    ಬಿಜೆಪಿ ಬಿಟ್ಟಿಲ್ಲ
    ಅಭಿಮಾನಿಗಳು ನನ್ನ ಮೇಲೆ ಇಟ್ಟ ಪ್ರೀತಿ ವಿಶ್ವಾಸ, ಅವರ ಒತ್ತಾಯದ ಮೇರೆಗೆ ಸ್ಪರ್ಧೆ ಮಾಡಿದ್ದೇನೆ. ಇಲ್ಲಿ ಪಕ್ಷ ಮುಖ್ಯವಾಗುವುದಿಲ್ಲ. ವ್ಯಕ್ತಿಗತ ಚುನಾವಣೆ ನಡೆಯುತ್ತದೆ. ನಾನು ಬಿಜೆಪಿ ಬಿಟ್ಟಿಲ್ಲ. ಆದರೆ, ಜನರ ಒತ್ತಾಸೆ ಮೇರೆಗೆ ಸ್ಪರ್ಧಿಸಿದ್ದೇನೆ. ಹಿರಿಯರ ಮಾತು ಧಿಕ್ಕರಿಸುವ ವ್ಯಕ್ತಿ ನಾನಲ್ಲ. ಬಿಜೆಪಿ ಬಿಟ್ಟು ನಾನು ಹೋಗುವುದಿಲ್ಲ. ತ್ರಿಕೋನ ಸ್ಪರ್ಧೆ ಇದ್ದರೂ ಜನರ ತೀರ್ಪು ಸ್ವಾಗತಿಸುತ್ತೇನೆ. ಇಲ್ಲಿ ಕುದುರೆ ವ್ಯಾಪಾರಕ್ಕೆ ಅವಕಾಶವಿಲ್ಲ. ಅದನ್ನು ಮೀರಿ ನನಗೆ ಜನರ ಬೆಂಬಲವಿದೆ. ಜನರನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತೇವೆ ಅನ್ನುವುದು ತಪ್ಪು. ಎಲ್ಲ ಪಿಕೆಪಿಎಸ್ ಸದಸ್ಯರ ಬೆಂಬಲ ನನ್ನ ಮೇಲೆ ಇದೆ. ನನ್ನ ಗೆಲುವು ಖಚಿತ. ಮುಂದಿನ ಅವಧಿಗೆ ಹೆಚ್ಚಿನ ಸೇವೆ ಮಾಡಲು ಬಾದಾಮಿ ತಾಲೂಕಿನ ಪಿಕೆಪಿಎಸ್ ವತಿಯಿಂದ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಮತದಾರ ಬಂಧುಗಳು ಆಶೀರ್ವದಿಸಬೇಕು ಎಂದು ಕುಮಾರಗೌಡ ಜನಾಲಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts