More

    ಬ್ಯಾಡಗಿ ಕಾರ್ವಿುಕ ನಿರೀಕ್ಷಕರ ಕಚೇರಿಗೆ ಬೀಗ

    ಬ್ಯಾಡಗಿ: ಪಟ್ಟಣದಲ್ಲಿನ ಕಾರ್ವಿುಕ ಇಲಾಖೆ ವೃತ್ತ ಕಚೇರಿ ಕಳೆದ 15 ದಿನಗಳಿಂದ ಬಾಗಿಲು ಹಾಕಿದ ಪರಿಣಾಮ ತಾಲೂಕಿನ ಕಾರ್ವಿುಕರು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಕಚೇರಿಗೆ ಬೀಗ ಹಾಕಲು ಕಾರಣವೇನು ಎಂಬುದು ತಿಳಿಯದಾಗಿದೆ.

    ತಾಲೂಕಿನ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ವಿುಕರು, ಅಸಂಘಟಿತ ಕಾರ್ವಿುಕರು ಸೇರಿದಂತೆ ವಿವಿಧ ಕೆಲಸ ನಿರ್ವಹಿಸುವ ಕಾರ್ವಿುಕರು ವಲಯ ಕಚೇರಿಗೆ ನಿತ್ಯವೂ ಬಂದು ಹೋಗುತ್ತಿದ್ದಾರೆ. ಆದರೆ, ಬಹುದಿನಗಳಿಂದ ಇಲ್ಲಿ ಕಾರ್ವಿುಕ ನಿರೀಕ್ಷಕರು ಪ್ರಭಾರಿಯಾಗಿದ್ದು, ಕಾಯಂ ನೇಮಕ ಇಲ್ಲವಾಗಿದೆ. ಹಾನಗಲ್ಲ ಹಾಗೂ ಬ್ಯಾಡಗಿ ತಾಲೂಕುಗಳ ಕಾರ್ವಿುಕರಿಗೆ ವಲಯ ಕಚೇರಿ ಬ್ಯಾಡಗಿಯಾಗಿದ್ದು, ಕಚೇರಿ ಬಾಗಿಲು ಹಾಕಿದ್ದು ತೀವ್ರ ಸಮಸ್ಯೆ ತಂದೊಡ್ಡಿದೆ.

    ನ. 7ರಿಂದ ಸುಮಾರು 15 ದಿನಗಳ ಕಾಲ ಕಾರ್ವಿುಕ ಇಲಾಖೆ ಕಚೇರಿಯಲ್ಲಿ ಸಿಬ್ಬಂದಿ ಇಲ್ಲದಂತಾಗಿದೆ. ಕಾರ್ವಿುಕರು ಬ್ಯಾಡಗಿ, ಹಾನಗಲ್ಲ ತಾಲೂಕುಗಳಿಂದ ಇಲ್ಲಿಗೆ ಬಂದು ಹೋಗುತ್ತಿದ್ದು, ಕಚೇರಿ ಎದುರು ಅಧಿಕಾರಿಗಳಿಗಾಗಿ ಕಾಯ್ದು ವಾಪಸ್ ತೆರಳುತ್ತಿದ್ದಾರೆ. ಪಕ್ಕದ ಕಚೇರಿಯಲ್ಲಿ ವಿಚಾರಿಸಿದರೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಕಚೇರಿ ಬಾಗಿಲ ಮೇಲೆ ಕಾರ್ವಿುಕರು ನಿರೀಕ್ಷಕರ ಪತ್ರದ ಸೂಚನೆ, ಕಚೇರಿ ಬಂದ್ ಆಗಿರುವ ಕುರಿತು ಮಾಹಿತಿ, ತುರ್ತಾಗಿ ಸಂರ್ಪಸುವ ಸಂಪರ್ಕದ ಮೊಬೈಲ್ ಸಂಖ್ಯೆ ಯಾವುದೂ ಇಲ್ಲವಾಗಿದೆ. ಯೋಜನೆ ಸೌಲಭ್ಯ ಪಡೆಯಲು ಬರುವ ಮಕ್ಕಳ ಪಾಲಕರು, ಮಹಿಳೆಯರು ವಿಧಿಯಿಲ್ಲದೆ ವಾಪಸ್ ತೆರಳುತ್ತಿದ್ದಾರೆ.

    ಕಚೇರಿಯಲ್ಲಿ ಇಲ್ಲ ಸಹಾಯವಾಣಿ:

    ದೂರದ ಊರುಗಳಿಂದ ಬಂದು ಹೋಗುವ ಸಾರ್ವಜನಿಕರಿಗೆ ಕಚೇರಿಯಲ್ಲಿ ಕಾರ್ವಿುಕ ನಿರೀಕ್ಷಕರು ಯಾರು? ಅವರ ಪದನಾಮ, ಮೊಬೈಲ್ ಸಂಖ್ಯೆ, ಸಿಬ್ಬಂದಿ, ಆಪರೇಟರ್, ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಮೇಲಧಿಕಾರಿಗಳ ಸಂಪರ್ಕ ಸಂಖ್ಯೆ ಅಥವಾ ಸಹಾಯವಾಣಿ ಸಂಖ್ಯೆಯೂ ಇಲ್ಲವಾಗಿದೆ. ತಾಲೂಕಿನ ಎಲ್ಲ ಇಲಾಖೆಗಳ ಮುಖ್ಯಸ್ಥರು ಕಚೇರಿಗೆ ಬೀಗ ಹಾಕುವ ಸನ್ನಿವೇಶ ಬಂದಲ್ಲಿ ಸ್ಥಳೀಯ ತಹಸೀಲ್ದಾರ್ ಗಮನಕ್ಕೆ ತರಬೇಕು. ಈ ಕುರಿತು ತಹಸೀಲ್ದಾರರನ್ನು ಕೇಳಿದರೆ, ನಮಗೆ ಯಾವ ಮಾಹಿತಿಯಿಲ್ಲ, ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

    ಬ್ಯಾಡಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ವಿುಕ ನಿರೀಕ್ಷಕರು ಧಾರವಾಡದ ಕಾರ್ವಿುಕ ಕಚೇರಿಯಲ್ಲಿದ್ದು, ಬ್ಯಾಡಗಿಗೆ ಪ್ರಭಾರಿಯಾಗಿದ್ದಾರೆ. ಆದರೆ, ಅವರು ಯಾವಾಗ ಬಂದು ಹೋಗುತ್ತಾರೆ ಎನ್ನುವ ಮಾಹಿತಿ ಲಭ್ಯವಿಲ್ಲ. ಅಲ್ಲದೆ, ತಾಲೂಕು ಮಟ್ಟದ ಸಭೆಗಳಲ್ಲಿ ನಿರೀಕ್ಷಕರು ಹಾಜರಾಗುತ್ತಿಲ್ಲ. ನೇರವಾಗಿ ಕಾರ್ವಿುಕರು ನಿರೀಕ್ಷಕರೊಂದಿಗೆ ಭೇಟಿಯಾಗುವುದು ಸಾಧ್ಯವಾಗುತ್ತಿಲ್ಲ. ಈ ಕುರಿತು ಜಿಲ್ಲಾ ಕಾರ್ವಿುಕ ಅಧಿಕಾರಿಗಳು ತಕ್ಷಣ ಕಚೇರಿಗೆ ಭೇಟಿ ಕೊಟ್ಟು ನ್ಯಾಯ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಆಪರೇಟರ್, ಸಿಬ್ಬಂದಿ ಹಾಗೂ ಕಾರ್ವಿುಕ ನಿರೀಕ್ಷಕರ ಸಮಸ್ಯೆಯಿಂದ ಕಚೇರಿ ಬಂದ್ ಮಾಡಲಾಗಿದೆ. ಸ್ಥಳೀಯ ಕಚೇರಿ ಬಗ್ಗೆ ಸಾರ್ವಜನಿಕರು ನೀಡಿದ ದೂರುಗಳನ್ನು ಸ್ವೀಕರಿಸಿದ್ದು, ನ. 21ರಂದು ಕಚೇರಿ ಆರಂಭವಾಗಲಿದೆ. ಕಚೇರಿಯಲ್ಲಿ ಕಾರ್ವಿುಕ ನಿರೀಕ್ಷಕರ, ಸಿಬ್ಬಂದಿ, ಆಪರೇಟರ್ ಜತೆ ಇಲಾಖೆ ಸಹಾಯವಾಣಿ ಹಾಕಲಾಗುವುದು. ಹಾನಗಲ್ಲ ಹಾಗೂ ಬ್ಯಾಡಗಿ ವೃತ್ತಕ್ಕೆ ಕಾಯಂ ಆಗಿ ಕಾರ್ವಿುಕ ನಿರೀಕ್ಷಕರು ಇಲ್ಲದ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆಯಾಗಿದೆ.

    | ಮಹೇಶ ಕೊರಳಿ, ಜಿಲ್ಲಾ ಕಾರ್ವಿುಕ ಇಲಾಖೆ ಮುಖ್ಯಸ್ಥರು ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts