More

    ಕೆಟ್ಟ ಕಾಂಗ್ರೆಸ್ ಸರ್ಕಾರನ ಕೆಳಗಿಳಿಸಬೇಕು

    ಕೋಲಾರ: ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕೆಟ್ಟ ಸರ್ಕಾರವನ್ನು ಕೆಳಗಿಸಬೇಕಾಗಿದೆ. ರೈತರಿಗೆ ಬರ ಪರಿಹಾರ ಕೊಡಲಾಗದ ಪರಿಸ್ಥಿತಿಯಲ್ಲಿ ಸರ್ಕಾರ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

    ನಗರದಲ್ಲಿ ಸೋಮವಾರ ಸಿರಿ ಸಮೃದ್ಧಿ ಗೋಲ್ಡ್ ಪ್ಯಾಲೇಸನ್ನು ಉದ್ಘಾಟಿಸಿ ಮಾತನಾಡಿ, ಪ್ರಚಾರಕ್ಕಾಗಿ ಬಜೆಟ್ ನಲ್ಲಿ ೨೦೦ ಕೋಟಿ ಹಣ ಪಡೆದುಕೊಂಡಿದ್ದಾರೆ. ಇದಕ್ಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
    ರಾಜ್ಯದಲ್ಲಿ ತೀವ್ರಬರಗಾಲ ಎದುರಾಗಿದ್ದು ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರೈತರಿಗೆ ತಲಾ 2 ಸಾವಿರ ಕೊಡ್ತೀವಿ ಅಂತ 620 ಕೋಟಿ‌ರೂ ಮೀಸಲಿಟ್ಟಿದ್ದಾರೆ. ಅದರಲ್ಲಿ ಶೇ. 75 ರಷ್ಟು ಅನುದಾನ ಕೇಂದ್ರದ್ದು, ಶೇ.25 ರಷ್ಟು ರಾಜ್ಯ ಸರ್ಕಾರದ್ದಾಗಿದೆ. ಅಸಮರ್ಥ ಸರ್ಕಾರ ಅಧಿಕಾರದಲ್ಲಿದ್ದು ಜನತೆ ರೋಸಿ ಹೋಗಿದ್ದಾರೆ. ಅವರು ಎಷ್ಟು ದಿನ ಅಂತ ಸಹಿಸಿಕೊಂಡಿರಲು ಸಾಧ್ಯ. ನಾನು ಅಧಿಕಾರದಲ್ಲಿ ಇದ್ದಾಗ ರೈತರ ಸಾಲ ಮನ್ನಾ ಮಾಡಿ ಎಲ್ಲೂ ಜಾಹೀರಾತು ಹಾಕಿಸಿಕೊಳ್ಳಿಲ್ಲ ಜಾಹಿರಾತಿನಲ್ಲಿ ಇರುವ ಕಾಂಗ್ರೆಸ್ ನಾಯಕರ ಕಲ್ಲರ್ ಫೋಟೋ ನೋಡಿದರೆ ಹೇಸಿಗೆ ಆಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಗೃಹ ಲಕ್ಷ್ಮಿ ಯೋಜನೆಯಡಿ ಬೇಕಾದರೆ ಇನ್ನು ಹೆಚ್ಚಿಗೆ 2 ಸಾವಿರ ರೂ ಹೆಚ್ಚಿಗೆ ಮಾಡಲಿ, ಸರ್ಕಾರ ಗ್ಯಾರಂಟಿಯಿಂದ ಖಜಾನೆ ಖಾಲಿ ಮಾಡಿಕೊಳ್ತಿದ್ದಾರೆ. ಗ್ಯಾರೆಂಟಿಗಳನ್ನು ನಿಭಾಯಿಸಲು ತಬಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುವರು ಸೇರಲಿ ಅವರಿಗೆ ಅಡ್ಡಿಪಡಿಸಲಾಗುವುದಿಲ್ಲ, ಹೋಗೊರು ಹೋಗ್ತಾಯಿರತಾರೆ, ಕಾಂಗ್ರೆಸ್ ನಿಂದ ಬರೊರು ಇದ್ದಾರೆ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯ ವೇಳೆಯಷ್ಟರಲ್ಲಿ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳು ಅಗಲಿದೆ ಎಂದು ಸುಳಿವು ನೀಡಿದರು.

    ಡಿ.ಕೆ.ಶಿವಕುಮಾರ್ ಅವರ ರೀತಿ ಹಣ ಹಾಗೂ ಧಮ್ಕಿ ಪೈಪೋಟಿ ನೀಡಲು ಸಾಧ್ಯವ ?, ಸೆಟ್ಟಲ್ಮೆಂಟ್ ರಾಜಕಾರಣದಲ್ಲಿ ಪೈಪೋಟಿ ಕೊಡೋಕೆ ನಮ್ಮಿಂದ ಆಗಲ್ಲ. ಚೈನದಿಂದ ತರೆಸಿರುವ ಕುಕ್ಕರ್, ಡೈನಿಂಗ್ ಸೆಟ್ ಹಂಚುತ್ತಿದ್ದು, ಚೈನ ವಸ್ತುಗಳ ಗುಣಮಟ್ಟ ಎಲ್ಲರಿಗೂ ಗೊತ್ತಿರುವ ವಿಚಾರವೆ. ೫೫ ವರ್ಷಗಳಿಂದ ಗಿಫ್ಟ್ ಸಂಸ್ಕೃತಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಒಳ್ಳೆ ಕೆಲಸ ಮಾಡಿದ್ದರೆ ಗಿಫ್ಟ್ ಮಾಡೊ ಅವಶ್ಯಕತೆಯೇನಿತ್ತು, ಲೂಟಿ ಮಾಡಿರುವ ಹಣದಿಂದಲೇ ಹಂಚುತ್ತಿದ್ದಾರೆ ಎಂದು ಛೇಡಿಸಿದರು.
    ಡಿ.ಕೆ.ಸುರೇಶ್ ಹಳೆ ರೀಲ್ಸ್ ಇಟ್ಟುಕೊಂಡು ಮೇಲುಕು ಹಾಕುತ್ತಿದ್ದಾರೆ. ಆ ವಿವಾರದ ಬಗ್ಗೆ ಜನರಿಗೆ ಅರಿವು ಇದೆ. ಜನರ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂಬ ರಿಯಲ್ ರೀಲ್ ಬಗ್ಗೆಯಷ್ಟೆ ನಮಗೆಗೊತ್ತು ಎಂದು ಕೆ.ಡಿ.ಸುರೇಶ್ ಅವರಿಗೆ ತಿರುಗೇಟು ನೀಡಿದರು.
    ಕಸದ ಲಾರಿಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟೆದ್ದೆವೆ. ಆದರೆ ಡಿ.ಕೆ ಬ್ರದರ್ಸ್ ಮಾದರಿ ಸರ್ಕಾರಿ ಭೂಮಿ ಕಬಳಿಸಿಲ್ಲ ಎಂದು ತಿಳಿಸಿದರು.
    ಕಂದಕೂರು ಶಾಸಕ ನನ್ನ ತಮ್ಮ, ಕುಟುಂಬದ ಸದಸ್ಯ ಮಾತನಾಡಿ ಭಿನ್ನಾಭಿಪ್ರಾಯ ಶಮನಗೊಳಿಸುತ್ತೆನೆ. ರಾಜ್ಯಸಭಾ ಚುನಾವಣೆ ವಿಚಾರ ಮಂಗಳವಾರ ಅಂತಿಮಗೊಳಲಿದೆ ಎಂದರು.
    ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಎಂಎಲ್ಸಿ ಇಂಚರ ಗೋವಿಂದರಾಜು, ಮಾಜಿ ಎಂಎಲ್ಸಿ ತೂಪಲ್ಲಿ ಚೌಡರೆಡ್ಡಿ, ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಮುಖಂಡರಾದ ಸಿಎಂಆರ್ ಶ್ರೀನಾಥ್, ಎನ್.ನಾಗರಾಜ್, ಮಲ್ಲೇಶ್ ಬಾಬು, ರಾಮು ಮತಿತರರು ಹಾಜರಿದ್ದರು.

    ಕೋಲಾರ- ಚಿಕ್ಕಬಳ್ಳಾಪುರಕ್ಕೆ ಟೋಪಿ ಹಾಕಿದ ಸಿದ್ದರಾಮಯ್ಯ
    ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಟೋಪಿ ಹಾಕಿದ್ದಾರೆ. ಅರಸಿಕೆರೆ ತನಕ ನೀರು ಬರಲು ಇನ್ನು ಎರಡು ವರ್ಷಬೇಕು. ಈ ವಿಚಾರದಲ್ಲಿ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಹೇಳಿದರು.

    ಚುನಾವಣೆ ಸಂದರ್ಭದಲ್ಲಿ ತೀರ್ಮಾನ
    ಸುಮಲತಾ ಮತ್ತೆ ಲೋಕಸಭಾ ಚುನಾವಣೆಗೆ ಮಂಡ್ಯದಿಂದಲೇ ಸ್ಪರ್ಧಿಸುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಸುಮಲತಾ ಅವರು ದೊಡ್ಡ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಕಳೆದ ಭಾನುವಾರ ರಾತ್ರಿ 10.30ರತನಕ ಸಭೆಗಳನ್ನು ನಡೆಸಿದ್ದು, ಈ ಮಧ್ಯೆ‌ ಏನು ಬೆಳವಣಿಗೆಗಳು ಆಗಿಲ್ಲ, ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ, ನಮ್ಮದು ಚಿಕ್ಕಪಕ್ಷವಾಗಿದ್ದು ನಮ್ಮ ಪ್ರಯತ್ನದಲ್ಲಿ ನಾವೀದ್ದೆವೆ, ಸ್ಪರ್ಧೆ ಮಾಡುವುದು ಅವರಿಗೆ ಬಿಟ್ಟ ವಿಚಾರ ಎಂದು ಪ್ರತಿಕ್ರಿಯಿಸಿದರು.
    ನಿಖಿಲ್ ಸ್ಪರ್ಧೆ ಮಾಡೋದಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅವನೇ ಸ್ಪಷ್ಟನೆ ನೀಡಿದ್ದಾನೆ. ನಾನು ಚುನಾವಣೆಗೆ ಸ್ಪರ್ಧೆ ಮಾಡಲು ಹಲವು ಕ್ಷೇತ್ರಗಳ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತೀರ್ಮಾನಿಸಲಾಗುವುದು ಎಂದು ಸುಳಿವು ನೀಡಿದರು.


    ಮೈತ್ರಿ ಅಭ್ಯರ್ಥಿ ಗೆಲುವು ಖಚಿತ

    ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಪೂರಕ ವಾತಾವರಣ ಇದ್ದು, ಗೆಲುವು ಖಚಿತ, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ಮಲ್ಲೇಶ್ ಬಾಬು ಹೆಸರು ಕೇಳಿ ಬಂದಿದೆ. ಸೀಟ್ ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಹಾಲಿ ಸಂಸದ ಮುನಿಸ್ವಾಮಿ ಸಹ ನಿರೀಕ್ಷೆ ಇಟ್ಟಿದ್ದು ಗೆಲಲು ಸಮರ್ಥರಿದ್ದಾರೆ ಇದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts