More

    ಹಿಂದುಳಿದ ಸಮುದಾಯಗಳಿಗೆ ಮೀಸಲು ಮುಂದುವರಿಸಲು ಒತ್ತಾಯಿಸಿ ಶಾಸಕ ರಾಜಾ ವೆಂಕಟಪ್ಪನಾಯಕಗೆ ಮನವಿ

    ಮಾನ್ವಿ: ಪರಿಶಿಷ್ಟ ಜಾತಿಯಲ್ಲಿನ ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಮೀಸಲು ಮುಂದುವರಿಸಲು ಆಗ್ರಹಿಸಿ ತಾಲೂಕು ಮೀಸಲಾತಿ ಸಂರಕ್ಷಣಾ ಸಮಿತಿ ಶಾಸಕ ರಾಜಾ ವೆಂಕಟಪ್ಪನಾಯಕಗೆ ಶುಕ್ರವಾರ ಮನವಿ ಸಲ್ಲಿಸಿತು.

    ಸಮಿತಿ ಅಧ್ಯಕ್ಷ ಹನುಮಂತ ಭೋವಿ, ಪ್ರಧಾನ ಕಾರ್ಯದರ್ಶಿ ಮೌನೇಶ ರಾಠೋಡ್ ಮಾತನಾಡಿ, ರಾಜ್ಯದಲ್ಲಿ 90 ಲಕ್ಷ ಜನಸಂಖ್ಯೆ ಇರುವ ಲಂಬಾಣಿ, ಭೋವಿ, ಕೊರಮ, ಕೊರಚ ಜನಾಂಗದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದಾರೆ. ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ ತಮ್ಮ ಕುಲಕಸುಬುಗಳಾದ ಕಲ್ಲು ಹೊಡೆಯುವುದು, ಗುಡಿ ಗೋಪುರಗಳನ್ನು ಹಾಗೂ ಮನೆಗಳನ್ನು, ಕೆರೆ ಕಟ್ಟೆಗಳನ್ನು ಕಟ್ಟುವುದು, ಕಸಬಾರಿಗೆ, ಜಲ್ಲಿ ಪುಟ್ಟಿ, ತಟ್ಟೆ, ಕಟ್ಟಿಗೆ, ವಿದ್ಯುತ್ ಕಂಬಗಳನ್ನು ಹಾಕುವುದು, ರಸ್ತೆಗೆ ಡಾಂಬರೀಕರಣ, ಕೂಲಿ ಕೆಲಸ ಸೇರಿದಂತೆ ಸರ್ವ ಸಮುದಾಯಗಳಿಗೆ ಕೃಷಿ ಆಧಾರಿತ ಉಪಕರಣಗಳ ತಯಾರಿಕೆ ಮಾಡಿಕೊಡುತ್ತ ಜೀವನ ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೀಸಲು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

    ಭರವಸೆ: ಮೀಸಲು ಸಂರಕ್ಷಣಾ ಒಕ್ಕೂಟ ಮಾನ್ವಿ ಹಾಗೂ ಸಿರವಾರ ಘಟಕ ನೀಡಿದ ಮನವಿಯನ್ನು ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಭರವಸೆ ನೀಡಿದರು.

    ತಾಲೂಕು ಮೀಸಲಾತಿ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಗೋವಿಂದರಾಜ ವಕೀಲ, ಉಪಾಧ್ಯಕ್ಷ ಬಸವರಾಜ ಭಜಂತ್ರಿ, ಪುರಸಭೆ ಸದಸ್ಯರಾದ ಕೆ.ಶುಕಮುನಿ, ಬಸವರಾಜ ಭಜಂತ್ರಿ, ಆನಂದ ಭೋವಿ, ಯಂಕೋಬಣ್ಣ ಕೊಟ್ನೆಕಲ್, ಬಸವಲಿಂಗಪ್ಪ ಭೋವಿ, ಕೆ.ರವಿಕುಮಾರ, ಅಂಬಣ್ಣ ಭೋವಿ, ಗೋವಿಂದ ಪವಾರ್ ಗುತ್ತೇದಾರ, ರೇಣುಗೋಪಾಲ, ಮರಿಸ್ವಾಮಿ ಮದ್ಲಾಪುರ, ಯಂಕಪ್ಪ ಕಾರಭಾರಿ, ಪರಶುರಾಮ ನಕ್ಕುಂದಿ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts