More

    ಬಾಕಿ ವೇತನ ಪಾವತಿಗೆ ಆಗ್ರಹ

    ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಗುತ್ತಿಗೆ ಆಧಾರಿತ ನೌಕರಿ ಮಾಡುತ್ತಿರುವ ‘ಡಿ’ ದರ್ಜೆ ನೌಕರರ ಬಾಕಿ ವೇತನ ಹಾಗೂ ಲಾಕ್‌ಡೌನ್ ಅವಧಿಯ ವೇತನವನ್ನು ಸಂದಾಯ ಮಾಡುವಂತೆ ಮತ್ತು ಕೆಲಸದ ಭದ್ರತೆ ಒದಗಿಸುವಂತೆ ಆಗ್ರಹಿಸಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿ ಬರುವ ಸರ್ಕಾರಿ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ‘ಡಿ’ ದರ್ಜೆ ನೌಕರರು ಹತ್ತಾರು ವರ್ಷಗಳಿಂದ ಅಡುಗೆ, ಸಹಾಯಕ, ಸ್ವಚ್ಛತಾ ಮತ್ತು ಕಾವಲುಗಾರ ಮೊದಲಾದ ಕೆಲಸಗಳನ್ನು ನಿರ್ವಹಿಸಿಕೊಂಡು ಬಂದಿದ್ದು, ಅವರಿಗೆ ಇನ್ನೂ ವೇತನ ಪಾವತಿಯಾಗಿಲ್ಲ. ಶೀಘ್ರ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

    ಮುಖಂಡ ಹುಲಗಪ್ಪ ಚಲವಾದಿ ಮಾತನಾಡಿ, ರಾಜ್ಯದ ವಿವಿಧ ಇಲಾಖೆಗಳ ಎಲ್ಲ ಸರ್ಕಾರಿ ನೌಕರರಿಗೆ ಲಾಕ್‌ಡೌನ್ ಅವಧಿಯ ವೇತನ ದೊರೆತಿದೆ. ಆದರೆ ಹೊರಗುತ್ತಿಗೆ ನೌಕರರಿಗೆ ಮಾತ್ರ ದೊರೆತಿಲ್ಲ. ವೇತನದ ಮೇಲೆ ಅವರ ಕುಟುಂಬಗಳು ಅವಲಂಬಿತವಾಗಿವೆ. ಕರೊನಾದಿಂದಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಾಕಿ ಉಳಿದಿರುವ ವೇತನವನ್ನು ನೀಡಬೇಕು ಎಂದು ತಿಳಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮ್ಮಣ ಹಂದ್ರಾಳ, ಪವಾಡೆಪ್ಪ ಚಲವಾದಿ, ಕಾಶೀಮ ಆಲದಾಳ, ಲಕ್ಷ್ಮ್ಮಣ ಮಸಳಿ, ಯಮನಪ್ಪ ಬಜಂತ್ರಿ, ಗೌರಕ್ಕ ಬೀಳೂರ, ಮೀನಾಕ್ಷಿ ತಳವಾರ, ರೇಣುಕಾ ಮಾಡಗಿ, ಅನುಸೂಯಾ ಬಡಿಗೇರ, ಗಾಯತ್ರಿ ತೊರವಿ, ಯಾಸ್ಮೀನ ಹಿಪ್ಪರಗಿ, ಶ್ರೀಶೈಲ ಕತ್ನಳ್ಳಿ, ಲಕ್ಷ್ಮೀ ಮಂಗಸೂಳಿ, ಶಾಂತಾ ಕ್ವಾಟಿ, ಬೇಬಿ ಹೊಸಮನಿ, ರಾಮವ್ವ ಬಜಂತ್ರಿ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts