More

    ಹುಟ್ಟುವಾಗಲೇ ಐದು ಹೃದಯ ಹೊಂದಿದ್ದ ಮಗುವನ್ನು ಬದುಕಿಸಿದ ಗೋವು: ಪವಾಡ ಸೃಷ್ಟಿಸಿದ ವೈದ್ಯರ ಸಾಹಸಗಾಥೆ ಇದು…

    ಲಂಡನ್​: ಕರುವೊಂದರಿಂದ ತೆಗೆದುಕೊಳ್ಳಲಾದ ಹೃದಯದ ಕವಾಟವನ್ನು ಸುದೀರ್ಘ 6 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಹುಟ್ಟುವಾಗಲೇ ಐದು ಹೃದಯ ಹೊಂದು ಸಂಕಷ್ಟಕ್ಕೀಡಾಗಿದ್ದ ಗಂಡು ಮಗುವಿಗೆ ಯಶಸ್ವಿಯಾಗಿ ಅಳವಡಿಸಿ ಮಗುವಿನ ಜೀವ ಉಳಿಸಿದ ವಿನೂತನ ಪ್ರಸಂಗವೊಂದು ಇಂಗ್ಲೆಂಡ್​ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

    ಬ್ರ್ಯಾಡ್ಲಿ ಹ್ಯಾರಿಸನ್​ ಹೆಸರಿನ 10 ತಿಂಗಳ ಮಗು ಹುಟ್ಟುವಾಗಲೇ ಐದು ಹೃದಯಗಳ ಸಂಕೀರ್ಣ ದೋಷವನ್ನು ಹೊಂದಿತ್ತು. ಈ ವಿಚಿತ್ರ ಸಮಸ್ಯೆಯು ಮಗುವಿನ ರಕ್ತ ಸಂಚಲನದ ಮೇಲೆ ಪರಿಣಾಮ ಬೀರಿ, ರಕ್ತ ಸಂಚಲನವನ್ನೇ ನಿರ್ಭಂದಿಸಿತ್ತು.

    ಹುಟ್ಟುವಾಗಲೇ ಪಲ್ಮನರಿ ಕವಾಟ ವಿರೂಪಗೊಂಡಿತ್ತು. ಹುಟ್ಟಿದ 9 ದಿನದ ಬಳಿಕ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಕೃತಕ ಕವಾಟವನ್ನು ಅಳವಡಿಸಲಾಗಿತ್ತು. ಆದರೆ, ನಾಲ್ಕು ತಿಂಗಳಲ್ಲೇ ವಿಫಲವಾಯಿತು. ಇದರಿಂದ ಮತ್ತೊಂದು ಸಮಸ್ಯೆ ಮಗುವನ್ನು ಕಾಡಲಾರಂಭಿಸಿತು. ಮಗು ಅತ್ತರೆ ದೇಹ ನೀಲಿ ಬಣ್ಣಕ್ಕೆ ತಿರುಗುತ್ತಿತ್ತು. ಇದರಿಂದ ಗಾಬರಿಗೊಂಡು ಪಾಲಕರು ಮಗುವನ್ನು ಆಸ್ಪತ್ರೆಗೆ ಕರೆತಂದರು. ಆದರೆ, ಮಗು ಜೀವಂತವಾಗಿ ಉಳಿಬೇಕಾದರೆ ಮತ್ತೊಂದು ಕವಾಟವನ್ನು ಅಳವಡಿಸಬೇಕೆಂದು ವೈದ್ಯರು ಸಲಹೆ ನೀಡಿದರು. ಇದು ಮಗುವಿನ ತಾಯಿ ಆ್ಯಂಬರ್​(24)ರನ್ನು ಚಿಂತೆಗೆ ದೂಡಿತು.

    ಬಳಿಕ ಒಂದು ಕರುವಿನಿಂದ ಹೃದಯ ಕವಾಟವನ್ನು ತೆಗೆದುಕೊಂಡು ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಅಳವಡಿಸಲಾಗಿತ್ತು. ಶಾಕ್ ಆಗುವ ವಿಚಾರವೆಂದರೆ ಆಪರೇಷನ್​ ನಡೆದ 6 ಗಂಟೆಯವರೆಗೂ ಮಗುವಿನ ಹೃದಯ ಸಂಪೂರ್ಣ ನಿಂತು ಹೋಗಿತ್ತು.

    ಜುಲೈ 2019ರಂದು ಶಸ್ತ್ರ ಚಿಕಿತ್ಸೆ ನಡೆದಾಗ ಮಗುವಿಗೆ 5 ತಿಂಗಲಾಗಿತ್ತಷ್ಟೇ. ಸದ್ಯ ಮಗು ಆರೋಗ್ಯವಾಗಿದೆ. ಖುಷಿಯ ವಿಚಾರವೆಂದರೆ ಕ್ರಿಸ್​ಮಸ್​ ಹಬ್ಬವನ್ನು ಮನೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಮಗುವನ್ನು ಬದುಕಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಿದ್ದಾಗಿ ಮಗುವಿನ ತಂದೆ ರಯಾನ್​ ಹ್ಯಾರಿಸನ್​(24) ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ. ಇಂಗ್ಲೆಂಡ್​ನ ಸೌತ್​ ಶೆಲ್ಡ್ಸ್​ ಪ್ರದೇಶದ ನಿವಾಸಿಗಳಾಗಿರುವ ಮಗುವಿನ ಕುಟುಂಬ ಸದ್ಯ ಸಂತೋಷವಾಗಿದ್ದಾರೆ. ಮಗುವಿನ ಪ್ರಾಣ ಉಳಿಸಿಕೊಟ್ಟ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ಮಗುವಿಗೆ ವರವಾದ ಗೋವು
    ಮಗುವಿನ ಹೊಸ ಕವಾಟವನ್ನು ಗೋವಿನ ಕಿವಿಯಿಂದ ತೆಗೆಯಲಾದ ಅಂಗಾಂಶದಿಂದ ಮಾಡಲಾಗಿದೆ. ಇದು ಸಾಮನ್ಯ ಕವಾಟಕ್ಕಿಂತ ಸ್ವಲ್ಪ ದೊಡ್ಡದಾಗಿದೆ. ಪ್ರಾಣಿಗಳ ಅಂಗಾಂಶ ಕವಾಟಗಳು ಬಲಿಷ್ಠವಾಗಿದ್ದು, ಸುಲಭವಾಗಿ ಹೊಂದಿಕೊಳ್ಳುವ ಗುಣವನ್ನು ಹೊಂದಿದೆ. ಇದು ಮೆಕಾನಿಕಲ್​ ಕವಾಟಕ್ಕಿಂತ ಉತ್ತಮವಾಗಿದೆ. ಮೆಕಾನಿಕಲ್​ ಕವಾಟದಂತೆ ಜೀವನ ಪೂರ್ತಿ ರಕ್ತವನ್ನು ತೆಳುವಾಗಿಸುವ ಚಿಕಿತ್ಸೆ ಪ್ರಾಣಿಗಳ ಅಂಗಾಂಶದಿಂದ ಮಾಡಿದ ಕವಾಟಕ್ಕೆ ಬೇಕಾಗಿಲ್ಲ. ಮೆಕಾನಿಕಲ್​ ಕವಾಟ ಅಡ್ಡಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts