More

    53.25 ಲಕ್ಷ ರೂ. ನಿವ್ವಳ ಲಾಭ

    ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸದಸ್ಯರ ಪತ್ತಿನ ಸಹಕಾರ ಸಂಘ 53.25 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ (ಶಿರಬೂರ) ತಿಳಿಸಿದರು.
    ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ಕೆ.ಎಚ್. ಪಾಟೀಲ್ ಸಭಾ ಭವನದಲ್ಲಿ ಸೋಮವಾರ ನಡೆದ ಸಂಘದ 11ನೇ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
    ಸದಸ್ಯರಿಗೆ ತ್ವರಿತ ಸೇವೆ ಒದಗಿಸಲು ಸಂಘದ ವ್ಯವಹಾರವನ್ನು ಸಂಪೂರ್ಣ ಕೋರ್ ಬ್ಯಾಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. 2019-20 ನೇ ಸಾಲಿನಲ್ಲಿ ಸಂಘವು 3.83 ಕೋಟಿ ರೂ. ಆದಾಯ ಹೊಂದಿದ್ದು, ಒಟ್ಟು ರೂ.2.87 ಕೋಟಿ ರೂ. ವೆಚ್ಚವಾಗಿದೆ. ಒಟ್ಟು ಆದಾಯದಲ್ಲಿ ವಾರ್ಷಿಕ 53.25 ಲಕ್ಷ ರೂ. ನಿವ್ವಳ ಲಾಭ ಆಗಿದೆ ಎಂದರು.
    ಇದೇ ವೇಳೆ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿ ಸನ್ಮಾನಿಸಲಾಯಿತು.
    ಬ್ಯಾಂಕ್‌ನ ಉಪಾಧ್ಯಕ್ಷ ಎಸ್.ಟಿ. ಪಾಟೀಲ, ರಮೇಶ ಗಿರಗಾಂವಿ, ನಿರ್ದೇಶಕರಾದ ರಮೇಶ ಜಕರಡ್ಡಿ, ರಾಮಪ್ಪ ಸೇಬಾನಿ. ಸಿದ್ದಣ್ಣ ದೇಸಾಯಿ. ವೆಂಕಟೇಶ ಬಿದರಿ, ಹಣಮಂತ ಕೊಣ್ಣೂರ, ಜಯಪ್ಪ ಬಿರಾದಾರ, ಸುನಿಲಕುಮಾರ ನ್ಯಾಮಗೌಡರ, ಚಂದ್ರಶೇಖರ ಪಾಟೀಲ, ವಿಮಲಾ ತಿಪ್ಪಾರಡ್ಡಿ, ಹಣಮಂತ ಕಡಪಟ್ಟಿ, ಲಚ್ಚಪ್ಪ ಖಜ್ಜಿಡೋಣಿ, ರಾಮಪ್ಪ ಹರಿಜನ, ಬಸಪ್ಪ ಸಂಜೀವಪ್ಪಗೋಳ ಹಾಗೂ ಸದಸ್ಯರು ಮತ್ತುಸುತ್ತಲಿನ ಗ್ರಾಮದ ರೈತರು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts