More

    ಬದುಕಲು ಕಲಿಸಿದ ಕನ್ನಡ ಭಾಷೆ

    ವಿಜಯಪುರ: ಕನ್ನಡ ಬದುಕಲು ಕಲಿಸಿದ ಭಾಷೆಯಾಗಿದೆ. ಕನ್ನಡ ನುಡಿ ನಮ್ಮ ಅಸ್ಮಿತೆ. ನಾವು ಕನ್ನಡದ ಮಕ್ಕಳು ಎನ್ನುವಲ್ಲಿ ಆನಂದವಿದೆ ಎಂದು ಸಾಹಿತಿ ಪ.ಗು. ಸಿದ್ದಾಪುರ ಹೇಳಿದರು.
    ಬಬಲೇಶ್ವರ ಪಟ್ಟಣದ ಶಾಂತವೀರ ಕಾಲೇಜಿನಲ್ಲಿ ರಾಜ್ಯೋತ್ಸವ ನಿಮಿತ್ತ ಬಬಲೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಸ್ವತಂತ್ರ ಲಿಪಿ ಇರುವ ಕನ್ನಡಕ್ಕೆ ಪ್ರಾಮಾಣಿಕತೆ ಮತ್ತು ಪ್ರಾದೇಶಿಕತೆ ಇದೆ. ಹಾಗಾಗಿ ಭಾಷೆಯ ಶಕ್ತಿಯಿಂದಾಗಿ ಕಾವ್ಯಗಳು ಹೊರಹೊಮ್ಮಬೇಕು ಎಂದರು.

    ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರು ಬಬಲೇಶ್ವರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಹೊರತಂದ ‘ಶಾಂತಪ್ರಭೆ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ಹುಟ್ಟಿದವರು ಸಾಯುತ್ತಾರೆ. ಆದರೆ, ಹುಟ್ಟಿದ ಕವಿತೆ ಸಾಯುವುದಿಲ್ಲ. ಅಂತಹ ಅಮರ ಕವಿತೆಗಳನ್ನು ಕಟ್ಟಿದಾಗ ಓದುಗ ಸಹಜವಾಗಿ ಆನಂದಗೊಳ್ಳುತ್ತಾನೆ ಎಂದರು.
    ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಭಾರತಿ ಪಾಟೀಲ ಮಾತನಾಡಿ, ಕನ್ನಡವೆಂದರೆ ಜೀವಚೈತನ್ಯ. ತುಡಿತ ಮತ್ತು ಖುಷಿ. ಇಂತಹ ಸರಳ, ಸುಂದರ ಭಾಷೆ ನಮ್ಮ ಮನಸ್ಸಿನ ಭಾವ. ನಮಗೆಲ್ಲ ಕುವೆಂಪು, ಕಾರಂತ, ಬೇಂದ್ರೆ, ಶಂಗು, ಚಂಪಾ ಆದರ್ಶರು. ಇಂತಹ ದಿಗ್ಗಜರ ಸಾಹಿತ್ಯ ಓದಿ ಬೆಳೆದವರು ನಾವು. ದಣಿದಾಗ ನೆಮ್ಮದಿ ನೀಡುವ ನೆಲದಲ್ಲಿ ಕನ್ನಡವೇ ನಾವಾಗಬೇಕು. ಕನ್ನಡತನವನ್ನು ಮೆರೆಯಬೇಕು ಎಂದರು
    ಡಾ.ಮಹಾದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಜಿ.ವಿ.ವಿ. ಸಂಘದ ಜಂಟಿ ಕಾರ್ಯದರ್ಶಿ ದಯಾನಂದ ಅಲಗೊಂಡ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಸಮಾಜಸೇವಕ ಅರ್ಜುನಗೌಡ ದೇವಕ್ಕಿ, ತಾಪಂ ಸದಸ್ಯ ಬೀರಪ್ಪ ಸೊಡ್ಡಿ ಹಾಗೂ ಮಲ್ಲು ಕನ್ನೂರ ಆಗಮಿಸಿದ್ದರು.

    ಕವಿಗೋಷ್ಠಿಯಲ್ಲಿ ಸಂಗೀತಾ ಮಠಪತಿ, ಪ್ರಿಯಾ ಹರಿದಾಸ, ಶಿವಾಜಿ ಮೋರೆ, ಅರವಿಂದ ಬಬಲೇಶ್ವರ, ಸುನಂದಾ ಕಾಖಂಡಕಿ, ಯಮನೂರಪ್ಪ ಅರಬಿ, ಶಿವಕುಮಾರ ಶಿವಸಿಂಪಿ, ಶಿವರಾಜ ಬಡಿಗೇರ, ಬಸವರಾಜ ಕಾಂಬಳೆ, ಸನಾ ಬಡೇಮಿಯಾ, ಸ್ನೇಹಾ ಮೇಟಿ ಕನ್ನಡ ರಾಜ್ಯೋತ್ಸವ ಕುರಿತು ಕವಿತೆ ವಾಚಿಸಿದರು.

    ಬಸನಗೌಡ ಬಿರಾದಾರ ಸ್ವಾಗತಿಸಿದರು. ಡಾ.ಮುರುಗೇಶ ಸಂಗಮ ನಿರೂಪಿಸಿದರು. ಕಸಾಪ ತಾಲೂಕಾಧ್ಯಕ್ಷ ಪ್ರೊ.ಮಹಾದೇವ ರಬಿನಾಳ ಪ್ರಾಸ್ತಾವಿಕ ಮಾತನಾಡಿದರು. ಸಂಜೀವಕುಮಾರ ಬಬಲೇಶ್ವರ ವಂದಿಸಿದರು.
    ಈರಣ್ಣ ಶಿರಮಗೊಂಡ, ಡಾ. ಸೋಮಶೇಖರ ವಾಲಿ, ಪ್ರೊ.ಮಲ್ಲಿಕಾರ್ಜುನ ಅವಟಿ, ಲಕ್ಷ್ಮಿ ನರಸಯ್ಯ, ಎಸ್.ಡಿ. ಗಡದೆ, ಡಿ.ಬಿ. ನಾಯಕ, ಶ್ರೀಶೈಲಗೌಡ ಬಿರಾದಾರ, ಎಂ.ಆರ್. ತೋಟದ, ಪ್ರೊ.ಕೆ.ಎಸ್. ಪಾಟೀಲ, ಧರ್ಮಣ್ಣ ಬೀಳೂರ, ಮನೋಹರ ಜಂಗಮಶೆಟ್ಟಿ, ಎ.ಎಂ. ಪಟೇಲ, ಆರತಿ ದೊಡಮನಿ, ಶಿವನಿಂಗಪ್ಪ ಕೋಟ್ಯಾಳ, ಬಿ.ಜಿ. ಬಿರಾದಾರ, ಸಂಗಪ್ಪ ತಮಗೊಂಡ, ವಜೀರ್ ಆಲಗೂರ, ವಿಜುಗೌಡ ಬಿರಾದಾರ, ಜಿ.ಎಸ್. ಬಿರಾದಾರ, ಗೌಡಪ್ಪಗೌಡ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts